ಅಯೋಧ್ಯೆ: ಟಿವಿ, ಮೊಬೈಲ್ (Mobile), ಇಂಟರ್ನೆಟ್ (Internet) ಮುಂತಾದವುಗಳಿಂದ ಇಂದಿನ ಮಕ್ಕಳು ಕೂಡ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವ ಸಂಖ್ಯೆ ಹೆಚ್ಚಾಗಿದೆ. ಅಯೋಧ್ಯೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯನ್ನು ಉತ್ತರ ಪ್ರದೇಶ ಪೊಲೀಸರು ಅಯೋಧ್ಯೆಯಲ್ಲಿ (Ayodhya) ಬಂಧಿಸಿದ್ದಾರೆ. ಆ ವಿದ್ಯಾರ್ಥಿ ತನ್ನ ಶಿಕ್ಷಕಿಯನ್ನೇ ಕೊಲೆ (Murder) ಮಾಡಿದ್ದ. ಹೀಗಾಗಿ, ಈ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.
ಅಯೋಧ್ಯೆಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬಂಧಿತ ಹುಡುಗನೊಂದಿಗೆ ಮೃತ ಶಿಕ್ಷಕಿ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಬೇರೆಯವರಿಗೆ ಗೊತ್ತಾಗುತ್ತದೆ ಎಂದು ಶಿಕ್ಷಕಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಆ ಬಾಲಕನ್ನು ಬಂಧಿಸಲಾಗಿದೆ.
“12ನೇ ತರಗತಿಯ ಬಾಲಕನನ್ನು ತನ್ನ ಶಿಕ್ಷಕನನ್ನು ಹತ್ಯೆಗೈದಿದ್ದಕ್ಕಾಗಿ ಬಂಧಿಸಲಾಗಿದೆ. ಆತ ಓಡಾಡಿದ್ದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಆತನ ಟಿ-ಶರ್ಟ್ ಅನ್ನು ನೋಡಿ ಆತನನ್ನು ಗುರುತಿಸಿ, ಬಂಧಿಸಲಾಗಿದೆ” ಎಂದು ಅಯೋಧ್ಯೆಯ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಎಪಿ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: Murder: ಆಸ್ತಿಗಾಗಿ ಅಪ್ಪ, ತಮ್ಮನನ್ನೇ ಶೂಟ್ ಮಾಡಿ ಕೊಂದ ನಿವೃತ್ತ ಸೇನಾಧಿಕಾರಿ!
“ಬಂಧಿತ ಬಾಲಕ ಸಂತ್ರಸ್ತ ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಇದು ಬೇರೆಯವರಿಗೆ ಗೊತ್ತಾಗಬಹುದು ಎಂಬ ಭಯದಿಂದ ಅವನು ಶಿಕ್ಷಕಿಯೊಂದಿಗಿನ ಸಂಬಂಧದಿಂದ ಹೊರಬರಲು ಬಯಸಿದ್ದ. ಆದರೆ, ಈ ವಿಚಾರವನ್ನು ಎಲ್ಲರಿಗೂ ಹೇಳಿ ಆತನಿಗೆ ಅವಮಾನ ಮಾಡುವುದಾಗಿ ಆ ಶಿಕ್ಷಕಿ ಅವನಿಗೆ ಬೆದರಿಕೆ ಹಾಕುತ್ತಿದ್ದರು. ಆದ್ದರಿಂದ ಅವನು ಅವಳನ್ನು ಕೊಲೆ ಮಾಡಿದ್ದಾನೆ ” ಎಂದು ಅಧಿಕಾರಿ ತಿಳಿಸಿದ್ದಾರೆ.