ಪರಾರಿಯಾದ ಹೆಂಡತಿ, ಬೇಸತ್ತು ಎರಡು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ ತಂದೆ
ಇಂದು ಮಧ್ಯಾಹ್ನ ತಾನೇ ಪೊಲೀಸರ ಬಳಿ ಬಂದು ಶರಣಾಗಿದ್ದಾನೆ ಆರೋಪಿ ಲಕ್ಷ್ಮಿಕಾಂತ್. ನವೀತ್ ಮತ್ತು ಶ್ರೇಯಾ ಅನ್ನೋ ಮಕ್ಕಳ ಜೊತೆ ಬಂದು ಠಾಣೆಗೆ ಶರಣಾಗಿದಾನೆ ಲಕ್ಷ್ಮಿಕಾಂತ. ಕಲಬುರಗಿ ನಗರದ ಮಹಾತ್ಮಾ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಕಲಬುರಗಿ ನಗರದ ವೀರೆಂದ್ರ ಪಾಟೀಲ್ ಬಡಾವಣೆ ಬಳಿ ತಂದೆಯೇ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದಾನೆ. ತಂದೆ ಲಕ್ಷ್ಮಿಕಾಂತ್ ತನ್ನ ನಾಲ್ಕು ಮಕ್ಕಳ ಪೈಕಿ ಎರಡು ಮಕ್ಕಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸೋನಿ (11) ಮತ್ತು ಮಯೂರಿ( 9) ತಂದೆಯಿಂದಲೇ ಕೊಲೆಯಾದ ನತದೃಷ್ಟ ಮಕ್ಕಳು. ಆರೋಪಿ ಲಕ್ಷ್ಮಿಕಾಂತ್, ಕಲಬುರಗಿ ನಗರದ ಬೋವಿಗಲ್ಲಿ ನಿವಾಸಿ.
ಆಟೋ ಚಾಲಕನಾಗಿದ್ದ ಲಕ್ಷ್ಮಿಕಾಂತನ ಪತ್ನಿ ನಾಲ್ಕು ತಿಂಗಳ ಹಿಂದೆ ಪರಪರುಷನ ಜೊತೆ ಓಡಿ ಹೋಗಿದ್ದಳು. ಕಳೆದ ನಾಲ್ಕು ತಿಂಗಳಿಂದ ಮಕ್ಕಳು ಅಜ್ಜಿ ಮನೆಯಲ್ಲಿ ಇದ್ದವು. ನಾಲ್ಕು ದಿನದ ಹಿಂದೆ ಲಕ್ಷ್ಮಿಕಾಂತ ತನ್ನ ಮಕ್ಕಳನ್ನು ಕರೆದುಕೊಂಡು ಬಂದಿದ್ದ.
ಈ ನಾಲ್ಕು ದಿನವೂ ಮಕ್ಕಳನ್ನು ಆಟೋದಲ್ಲಿ ಕರೆದೊಯ್ದು ಕಲಬುರಗಿ ನಗರದಲ್ಲಿ ಅಡ್ಡಾಡಿಸಿದ್ದಾನೆ ಲಕ್ಷ್ಮಿಕಾಂತ್! ಆದರೆ ನಿನ್ನೆ ಸಂಜೆ ವೇಳೆ ಮಕ್ಕಳನ್ನು ಕೊಲೆ ಮಾಡಿದ್ದಾನೆ ಲಕ್ಷ್ಮಿಕಾಂತ್. ಎರಡು ಮಕ್ಕಳ ಶವವನ್ನು ಆಟೋದಲ್ಲಿಯೇ ಇಟ್ಟುಕೊಂಡು ಇಂದು ಮಧ್ಯಾಹ್ನದವರಗೆ ಆಟೋದಲ್ಲಿಯೇ ಅಡ್ಡಾಡಿದ್ದಾನೆ.
ಇಂದು ಮಧ್ಯಾಹ್ನ ತಾನೇ ಪೊಲೀಸರ ಬಳಿ ಬಂದು ಶರಣಾಗಿದ್ದಾನೆ ಆರೋಪಿ ಲಕ್ಷ್ಮಿಕಾಂತ್. ನವೀತ್ ಮತ್ತು ಶ್ರೇಯಾ ಅನ್ನೋ ಮಕ್ಕಳ ಜೊತೆ ಬಂದು ಠಾಣೆಗೆ ಶರಣಾಗಿದಾನೆ ಲಕ್ಷ್ಮಿಕಾಂತ. ಕಲಬುರಗಿ ನಗರದ ಮಹಾತ್ಮಾ ಬಸವೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
6800 ಕೋಟಿ ಡಾಲರ್ ಫಂಡ್ ಬಿಟ್ಟಾಕಿ ಅಪ್ಪ- ಅಮ್ಮನ ಜತೆಗಿರಬೇಕು, ಬೀಚ್ನಲ್ಲಿ ಕಾಲ ಕಳೆಯಬೇಕೆಂದು ರಾಜೀನಾಮೆ ಒಗಾಯಿಸಿದ್ದಾರೆ ಈ ಸಿಇಒ
ಇದನ್ನೂ ಓದಿ:
Alcohol: ಮದ್ಯಪಾನ ಮಾಡುವ ಜೋಶ್ನಲ್ಲಿ ಈ ಐದು ಪದಾರ್ಥ ತಗೋಬೇಡಿ, ತಿಂದರೆ ಡೇಂಜರ್!
Published On - 8:15 pm, Wed, 29 June 22