6800 ಕೋಟಿ ಡಾಲರ್ ಫಂಡ್ ಬಿಟ್ಟಾಕಿ ಅಪ್ಪ- ಅಮ್ಮನ ಜತೆಗಿರಬೇಕು, ಬೀಚ್ನಲ್ಲಿ ಕಾಲ ಕಳೆಯಬೇಕೆಂದು ರಾಜೀನಾಮೆ ಒಗಾಯಿಸಿದ್ದಾರೆ ಈ ಸಿಇಒ
68 ಬಿಲಿಯನ್ ಡಾಲರ್ ಮೌಲ್ಯದ ಕಂಪೆನಿ ಸಿಇಒ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣ ಏನು ಗೊತ್ತಾ? ಅದನ್ನು ತಿಳಿಯುವ ಸಲುವಾಗಿಯೇ ಈ ಲೇಖನ ಓದಿ.
ಇದೊಂದು ವೀಕೆಂಡ್ ಎಲ್ಲವನ್ನೂ ಮರೆತು, ಕಡಲ ತೀರದಲ್ಲಿ ಹಾಗೆ ಮೈಚಾಚಿ ಮರಳಿನ ಮೇಲೆ ಮಲಗಿ, ಆಕಾಶದ ನಕ್ಷತ್ರವನ್ನು ನೋಡುತ್ತಾ ಕಳೆದುಬಿಡಬೇಕು… ಹೀಗೆ ಒಂದು ವೀಕೆಂಡ್ ಅನಿಸಿದರೆ ಪರವಾಗಿಲ್ಲ. ಅಥವಾ ಯಾವುದೇ ಜಂಜಾಟ ಇರದೆ ಅಪ್ಪ- ಅಮ್ಮನ ಜತೆಗೆ ಅವರನ್ನು ನೋಡಿಕೊಳ್ಳುವ ಸಲುವಾಗಿ ಇರುವ ದೊಡ್ಡ ಮೊತ್ತದ ಸಂಬಳವನ್ನು ಬಿಡುವವರನ್ನು ಕೇಳಿದ್ದೀರಾ? ಇಲ್ಲೊಬ್ಬ ಆಸಾಮಿ ಇದ್ದಾರೆ. ಜತೆಗೆ ಈತ ಸಿಇಒ. ಅಂದರೆ ಜನರೆಲ್ಲ ಸೇರಿ ತಮ್ಮ ಬಳಿಯ ಸಣ್ಣ-ಸಣ್ಣ ಮೊತ್ತವನ್ನು ತುಂಬಿದ ಮೇಲೆ, ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂದು ನಿರ್ಧರಿಸುವಂಥ ಕಂಪೆನಿಯ ಸಿಇಒ ಸ್ಥಾನದಲ್ಲಿ ಇರುವಾತ ಈ ವ್ಯಕ್ತಿ. ಅಂಥದ್ದರಲ್ಲಿ ತನ್ನ ದೊಡ್ಡ ಹುದ್ದೆಗೆ ಸಟಕ್ಕನೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಎಲ್ಲರೂ ಅಚ್ಚರಿ ಪಡುವಂತೆಯೂ ಮಾಡಿದ್ದಾರೆ. ಲಂಡನ್ನಲ್ಲಿ ಪ್ರಧಾನ ಕಚೇರಿ ಇರುವ ಫಂಡ್ ಹೌಸ್ ಜುಪಿಟರ್ ಫಂಡ್ ಮ್ಯಾನೇಜ್‌ಮೆಂಟ್ ಪಿಎಲ್‌ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡ್ರ್ಯೂ ಫರ್ಮಿಕಾ ಬಗ್ಗೆ ವರದಿ ಇದು. ಅವರು ಹಠಾತ್ ರಾಜೀನಾಮೆ (Resignation) ನೀಡಿದ್ದಾರೆ. 2019ನೇ ಇಸವಿಯಲ್ಲಿ 68 ಬಿಲಿಯನ್ ಡಾಲರ್ ನಿಧಿ ನಿರ್ವಹಣೆ ಮಾಡುವ ಕಂಪೆನಿಗೆ ಸೇರಿದ ಫರ್ಮಿಕಾ ಅವರು ಅಕ್ಟೋಬರ್ 1ರಂದು ತಮ್ಮ ಸ್ಥಾನವನ್ನು ತ್ಯಜಿಸಲಿದ್ದಾರೆ ಎಂದು ಸುದ್ದಿ ಸಂಸ್ಥೆ ಬ್ಲೂಮ್ಬರ್ಗ್ನಿಂದ ಕಂಪೆನಿಯ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಜುಪಿಟರ್‌ನ ಮುಖ್ಯ ಹೂಡಿಕೆ ಅಧಿಕಾರಿ ಮ್ಯಾಥ್ಯೂ ಬೀಸ್ಲಿ ಅವರು ಹೊಸ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಮತ್ತು ಫರ್ಮಿಕಾ ಅವರು ಹೂಡಿಕೆ ಸಂಸ್ಥೆಯ ನಿರ್ದೇಶಕರ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ವರದಿಯಲ್ಲಿ ಸೇರಿಸಲಾಗಿದೆ. ಇಂಥ ಒಳ್ಳೆ ಹುದ್ದೆ ಬಿಟ್ಟಿದ್ದಾದರೂ ಏಕೆ ಅಂತೆ ನೋಡಿದರೆ ಫರ್ಮಿಕಾ ಅವರು ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ, ತ್ಯಜಿಸಲು ನಿರ್ಧರಿಸಿದ್ದಾರೆ ಮತ್ತು ಅವರ ವಯಸ್ಸಾದ ಪೋಷಕರೊಂದಿಗೆ ಇರಲು ಆಸ್ಟ್ರೇಲಿಯಾಕ್ಕೆ ಮರಳಲು ಬಯಸಿದ್ದಾರೆ ಎಂದು ಅದು ಉಲ್ಲೇಖಿಸಿದೆ. “ನಾನು ಕಡಲ ಕಿನಾರೆಯಲ್ಲಿ ಕುಳಿತುಕೊಳ್ಳಲು ಬಯಸುತ್ತೇನೆ ಮತ್ತು ಏನನ್ನೂ ಮಾಡಬಾರದು ಅಂದುಕೊಳ್ಳುತ್ತೇನೆ,” ಎಂದು ಅವರು ಬ್ಲೂಮ್‌ಬರ್ಗ್‌ಗೆ ತಿಳಿಸಿದ್ದಾರೆ.
ಯುನೈಟೆಡ್ ಕಿಂಗ್‌ಡಂನಲ್ಲಿ ಸುಮಾರು ಮೂರು ದಶಕಗಳನ್ನು ಕಳೆದಿರುವ ಫರ್ಮಿಕಾ, ಮಾರ್ಚ್ 2019ರಲ್ಲಿ ಜುಪಿಟರ್ ಸೇರ್ಪಡೆ ಆದರು. ಜುಪಿಟರ್ಗೆ ಮೊದಲು, ಅವರು ಜಾನಸ್ ಹೆಂಡರ್ಸನ್ ಗ್ರೂಪ್ ಪಿಎಲ್‌ಸಿಯೊಂದಿಗೆ ಕೆಲಸ ಮಾಡಿದರು ಮತ್ತು 2017ರಲ್ಲಿ ಯುಎಸ್ ಫಂಡ್ ಹೌಸ್ ಜಾನಸ್ ಮತ್ತು ಯುಕೆ ಹೆಂಡರ್ಸನ್ ವಿಲೀನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೂಡಿಕೆ ನಿರ್ವಹಣಾ ಉದ್ಯಮದಲ್ಲಿ 27 ವರ್ಷಗಳ ಅನುಭವ ಹೊಂದಿರುವ ಅನುಭವಿ ಆಸ್ತಿ ವ್ಯವಸ್ಥಾಪಕರು, ಹೆಂಡರ್ಸನ್‌ನಲ್ಲಿ ಈಕ್ವಿಟಿ ಫಂಡ್ ಮ್ಯಾನೇಜರ್ ಮತ್ತು ಈಕ್ವಿಟಿಗಳ ಮುಖ್ಯಸ್ಥರು ಸೇರಿದಂತೆ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧದ ನಂತರದ ಜಾಗತಿಕ ಮಾರುಕಟ್ಟೆಗಳಲ್ಲಿ ಸ್ವತ್ತು ನಿರ್ವಾಹಕರು ನೇವಿಗೇಟ್ ಮಾಡುತ್ತಿರುವುದರಿಂದ ಜುಪಿಟರ್ ಹೊರಹರಿವು ಮತ್ತು ಸವಾಲಿನ ಮಾರುಕಟ್ಟೆಗಳೊಂದಿಗೆ ಹಿಡಿತ ಸಾಧಿಸಿದಾಗ ಬೀಸ್ಲಿ ಉನ್ನತ ಹುದ್ದೆಯನ್ನು ವಹಿಸಿಕೊಳ್ಳುತ್ತಾರೆ.
ಬ್ಲೂಮ್‌ಬರ್ಗ್ ವರದಿಗಳ ಪ್ರಕಾರ, ಗ್ರಾಹಕರು ಜುಪಿಟರ್ನಿಂದ ಸತತವಾಗಿ ನಾಲ್ಕು ವರ್ಷಗಳವರೆಗೆ ಹಣವನ್ನು ಪಡೆದಿದ್ದಾರೆ ಮತ್ತು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಂಸ್ಥೆಯು 1.6 ಬಿಲಿಯನ್ ಪೌಂಡ್ ಹೊರಹರಿವು ಕಂಡಿದೆ.
ಇದನ್ನೂ ಓದಿ: ನೈಟ್ಶಿಫ್ಟ್ನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಾದರೆ ಈ ಸಲಹೆ ತಪ್ಪದೆ ಪಾಲಿಸಿ
Published On - 8:13 pm, Wed, 29 June 22