ತಂಗಿಯೊಂದಿಗೆ ಸ್ನೇಹ ಬೆಳಸಿದ್ದ ಮುಸ್ಲಿಂ ಯುವಕನನ್ನು ಹತ್ಯೆಗೈದ ಅಣ್ಣ..!

| Updated By: ರಮೇಶ್ ಬಿ. ಜವಳಗೇರಾ

Updated on: Sep 29, 2022 | 5:13 PM

ತನ್ನ ತಂಗಿಯೊಂದಿಗೆ ಸ್ನೇಹ ಬೆಳಸಿದ್ದ ಮುಸ್ಲಿಂ ಯುವಕನನ್ನು ಆಕೆಯ ಅಣ್ಣ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

ತಂಗಿಯೊಂದಿಗೆ ಸ್ನೇಹ ಬೆಳಸಿದ್ದ ಮುಸ್ಲಿಂ ಯುವಕನನ್ನು ಹತ್ಯೆಗೈದ ಅಣ್ಣ..!
ಕೊಲೆ
Follow us on

ರೂಟು, (ಜಾರ್ಖಂಡ್‌): ಸಹೋದರಿಯೊಂದಿಗೆ ಸ್ನೇಹ ಬೆಳೆಸಿದ್ದ ಮುಸ್ಲಿಂ ಯುವಕನ್ನು ಆಕೆಯ ಅಣ್ಣ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ರೂಟು ಜಿಲ್ಲೆಯಲ್ಲಿ ನಡೆದಿದೆ.

ಶಹಬಾಜ್ ಅನ್ಸಾರಿ (19) ಹತ್ಯೆಯಾದ ಯುವಕ. ಆರೋಪಿಗಳನ್ನು ಓಂಪ್ರಕಾಶ್ ಮಹೊತೊ (25) ಮತ್ತು ಸುಶಾಂತ್ ನಾಯಕ್ (25) ಎಂದು ಗುರುತಿಸಲಾಗಿದೆ. ಶಹಬಾಜ್ ಅನ್ಸಾರಿ ಯುವತಿಯೊಂದಿಗೆ ಸ್ನೇಹ ಬೆಳಸಿದ್ದ, ಇದು ಆಕೆಯ ಅಣ್ಣನಿಗೆ ಇಷ್ಟವಿರಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯ ಅಣ್ಣ ಸುಶಾಂತ್ ನಾಯಕ್, ತನ್ನ ಸ್ನೇಹಿತನೊಂದಿಗೆ ಸೇರಿ ಕೊಂಡು ಶಹಬಾಜ್ ಅನ್ಸಾರಿನನ್ನು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ನೀನು ಕಪ್ಪಗಿದ್ದೀಯಾ ಅಂತ ಪದೇ-ಪದೇ ರೇಗಿಸುತ್ತಿದ್ದ ಪತಿಯ ಮರ್ಮಾಂಗವನ್ನೇ ಕತ್ತರಿಸಿಕೊಂದ ಪತ್ನಿ

ಶಹಬಾಜ್​ನನ್ನು ಓಂಪ್ರಕಾಶ್ ಮಹೊತೊ ಹಾಗೂ ಸುಶಾಂತ್ ನಾಯಕ್ ಹೊರಗೆ ಕರೆದುಕೊಂಡು ಹೋಗಿ ತಲೆಗೆ ಹೊಡೆದು ಕೊಂದಿದ್ದಾರೆ. ಕೊಲೆಯ ಮರುದಿನ ಶಹಬಾಜ್‌‌ ಅವರ ತಂದೆ ಮಂಡರ್ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ), 34, 120 (ಬಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ತನಿಖೆ ವೇಳೆ ಕೊಲೆ ಮಾಡಿರುವುದನ್ನು ಆರೋಪಿಗಳ ಒಪ್ಪಿಕೊಂಡಿದ್ದಾರೆ.

ತನ್ನ ಸಹೋದರಿಯೊಂದಿಗೆ ಓಡಾಡಬೇಡ. ಇದು ಸರಿ ಕಾಣಲ್ಲ ಎಂದು ಯುವತಿಯ ಅಣ್ಣ ಸುಶಾಂತ್ ನಾಯಕ್, ಅನ್ಸಾರಿಗೆ ಎಚ್ಚರಿಕೆ ನೀಡಿದ್ದ. ಆದರೂ ಅನ್ಸಾರಿ ಯುವತಿಯೊಂದಿಗೆ ಮಾತನಾಡುವುದು, ಓಡಾಡುವುದು ಮಾಡುತ್ತಿದ್ದ. ಇದರಿಂದ ಕೋಪಗೊಂಡ, ಸುಶಾಂತ್ ನಾಯಕ್ , ಓಂಪ್ರಕಾಶ್ ಮಹೊತೊನೊಂದಿಗೆ ಪ್ಲಾನ್ ಮಾಡಿ ಅನ್ಸಾರಿಯನ್ನು ದೂರ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Thu, 29 September 22