ಹಿಂದೂ ಯುವಕನ ಜತೆ ಹೋಗುತ್ತಿದ್ದ ಅನ್ಯಕೋಮಿನ ಯುವತಿಯನ್ನ ತಡೆದು ಪುಂಡರಿಂದ ಕಿರಿಕ್: ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್ಗಿರಿ
ಮನೆಯವರ ಫೋನ್ ನಂಬರ್ ನೀಡುವಂತೆ ಯುವತಿಗೆ ಕಿರಿಕ್ ಮಾಡಿದ್ದು, ಮೊಬೈಲ್ ನಂಬರ್ ಯಾಕೆ ಕೊಡಬೇಕು ಎಂದು ಯುವತಿ ಪ್ರಶ್ನೆ ಮಾಡಿದ್ದಾಳೆ. ಪ್ರಶ್ನೆ ಮಾಡಿದ್ದಕ್ಕೆ ಯುವತಿ ಮೇಲೆ ಹಲ್ಲೆ, ದೌರ್ಜನ್ಯ ಆರೋಪ ಮಾಡಲಾಗಿದೆ.
ದೇವನಹಳ್ಳಿ: ಹಿಂದೂ ಯುವಕನ ಜತೆ ಅನ್ಯಕೋಮಿನ ಯುವತಿ ಹೋಗುತ್ತಿದ್ದಾಗ ನೈತಿಕ ಪೊಲೀಸ್ಗಿರಿ ನಡೆಸಿರುವಂತಹ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯಲ್ಲಿ ನಡೆದಿದೆ. ಸೆಪ್ಟೆಂಬರ್ 25ರಂದು ಬೈಕ್ನಲ್ಲಿ ಜೋಡಿ ತೆರಳುತ್ತಿದ್ದಾಗ ತಡೆದು ಪುಂಡರಿಂದ ಕಿರಿಕ್ ಮಾಡಲಾಗಿದೆ. ಇಸ್ಲಾಂಪುರ ನಿವಾಸಿ ಹುಜೂರು ಮತ್ತು ತಂಡದಿಂದ ಪುಂಡಾಟ ಮಾಡಲಾಗಿದೆ. ಮನೆಯವರ ಫೋನ್ ನಂಬರ್ ನೀಡುವಂತೆ ಯುವತಿಗೆ ಕಿರಿಕ್ ಮಾಡಿದ್ದು, ಮೊಬೈಲ್ ನಂಬರ್ ಯಾಕೆ ಕೊಡಬೇಕು ಎಂದು ಯುವತಿ ಪ್ರಶ್ನೆ ಮಾಡಿದ್ದಾಳೆ. ಪ್ರಶ್ನೆ ಮಾಡಿದ್ದಕ್ಕೆ ಯುವತಿ ಮೇಲೆ ಹಲ್ಲೆ, ದೌರ್ಜನ್ಯ ಆರೋಪ ಮಾಡಲಾಗಿದೆ. ಯುವಕರ ದಬ್ಬಾಳಿಕೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಸಂಬಂಧ ದೊಡ್ಡಬಳ್ಳಾಪುರ ಟೌನ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ನವರಾತ್ರಿ ಪೂಜೆಗೆ ತೆರಳಿದ್ದ ಯುವತಿಯರ ಮೇಲೆ ಅಟ್ಯಾಕ್: ಚೈನ್ ಕಿತ್ತುಕೊಳ್ಳಲು ಯತ್ನ
ಬಾಗಲಕೋಟೆ: ನವರಾತ್ರಿ ಪೂಜೆಗೆ ತೆರಳಿದ್ದ ಯುವತಿಯರ ಮೇಲೆ ಅಟ್ಯಾಕ್ ಮಾಡಿ, ಚೈನ್ ಕಿತ್ತುಕೊಳ್ಳಲು ಪ್ರಯತ್ನಿಸಿರುವಂತಹ ಘಟನೆ ಹುನಗುಂದ ಪಟ್ಟಣದ ಜಡಿಮಠ ಅಜ್ಜನವರ ಶಾಪಿಂಗ್ ಮಹಲ್ ಹತ್ತಿರ ನಡೆದಿದೆ. ನಸುಕಿನ ಜಾವದಲ್ಲಿ ನಡೆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಿನ್ನೆ ಬೆಳಗ್ಗೆ 4.30 ರಿಂದ 5 ಮಧ್ಯದಲ್ಲಿ ನಡೆದಿದೆ ಎನ್ನಲಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ನಸುಕಿನ ಜಾವ ಮಹಿಳೆಯರು ಬನ್ನಿಗಿಡಕ್ಕೆ ಪೂಜೆ ಸಲ್ಲಿಸಲು ಹೋಗುವಾಗ ಘಟನೆ ನಡೆದಿದೆ. ಸುಧಾ ಮತ್ತು ಪಾರ್ವತಿ ಎನ್ನುವ ಯುವತಿಯರು ಪೂಜೆಯ ತಟ್ಟೆ ಹಿಡಿದುಕೊಂಡು ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಯುವಕರು, ಯುವತಿಯರ ಬಳಿ ದಿಢೀರನೇ ವಾಹನ ನಿಲ್ಲಿಸಿ ಕುತ್ತಿಗೆಗೆ ಕೈ ಹಾಕಲು ಯತ್ನಿಸಿದ್ದಾರೆ. ಇಬ್ಬರು ಯುವತಿಯರ ಪೈಕಿ ಒಬ್ಬರು ಓಡಿ ಹೋಗಿದ್ದಾರೆ.
ಸುಧಾ ಎನ್ನುವ ಯುವತಿಯ ಕತ್ತಿಗೆ ಕೈಹಾಕಿ ಎಳೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಯುವತಿ ಕೊಸರಿಕೊಂಡು ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ಕೊಟ್ಟಿಲ್ಲ. ಬೈಕ್ ನಲ್ಲಿ ಬಂದಿದ್ದವ ಯಾರೆಂದು ಮಾಹಿತಿ ಇಲ್ಲ. ಈ ಘಟನೆಯಿಂದಾಗಿ ಮಹಿಳೆಯರಲ್ಲಿ ಆತಂಕ ಉಂಟಾಗಿದೆ.
ಪೊಲೀಸರಿಂದ ದಲಿತ ಯುವಕನಿಗೆ ಕಿರುಕುಳ ಆರೋಪ
ಬೆಂಗಳೂರು: ದಲಿತ ಯುವಕನಿಗೆ ಪೊಲೀಸರಿಂದ ಕಿರುಕುಳ ಆರೋಪ ಮಾಡಲಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಗೃಹ ಇಲಾಖೆ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯಲಾಗಿದೆ. ರಾಜೇಶ್ ಕಿರುಕುಳ ನೀಡುತ್ತಿರುವುದಾಗಿ ಪತ್ರ ಬರೆದಿರುವ ಯುವಕ. ಸತತ 12 ದಿನ ಹಲ್ಲೆ ನಡಸಿದ್ದಾರೆ. ಮೈಮೇಲೆ ಮೂತ್ರ ಎರಚಿ, 3 ದಿನ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ಕೊಟ್ಟಿದ್ದಾರೆಂದು ರಾಮಮೂರ್ತಿನಗರ ಪೊಲೀಸರ ಮೇಲೆ ಯುವಕ ಆರೋಪ ಮಾಡಿದ್ದಾನೆ. ಅದಕ್ಕೆ ಸಂಬಂಧಪಟ್ಟಂತೆ ಫೋಟೊ ಮತ್ತು ವಿಡಿಯೋ ಕೂಡ ಲಗತ್ತಿಸಿದ್ದಾನೆ. ಕೋಳಿರಾಜ @ಪುಷ್ಪರಾಜ್ ಎಂಬಾತನ ಪ್ರಕರಣ ಒಪ್ಪಿಕೊಳ್ಳುವಂತೆ ಹಲ್ಲೆ ಮಾಡಿದ್ದಾರೆಂಬ ಆರೋಪಿಸಲಾಗಿದೆ.
ಆದರೆ ಪೊಲೀಸರು ಮಾತ್ರ ಹೇಳೋದೆ ಬೇರೆ. ರಾಜೇಶ್ ರಾಬರಿಗೆ ಯತ್ನ ಮಾಡಿದ್ದಾನೆ. ಹಾಗಾಗಿ ಪೊಲೀಸರು ಬಂಧಿಸುತ್ತಾರೆಂದು ಸುಳ್ಳು ಆರೋಪ ಮಾಡುತ್ತಿದ್ದಾನೆ. ಈತನಿಗೆ ಮತ್ತೋರ್ವ ವ್ಯಕ್ತಿ ಜಗನ್ ಎಂಬಾತ ಸಹಾಯ ಮಾಡಿದ್ದಾನೆ. ಆತನ ಮೇಲೆ ಪ್ರಕರಣ ಸಂಬಂಧ 2018ರಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು. ಅದೇ ಜಿದ್ದಿಗೆ ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಅದಕ್ಕೆ ಸಂಬಂಧ ಪಟ್ಟಂತೆ ರಾಜೇಶ್ ರಾಬರಿಗೆ ಯತ್ನ ಮಾಡಿದ್ದಾನೆ ಎನ್ನಲಾಗುತ್ತಿರುವ ಸಿಸಿಟಿವಿ ದೃಶ್ಯವಳಿ ಕೂಡ ಬಿಡುಗಡೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.