ನೀನು ಕಪ್ಪಗಿದ್ದೀಯಾ ಅಂತ ಪದೇ-ಪದೇ ರೇಗಿಸುತ್ತಿದ್ದ ಪತಿಯ ಮರ್ಮಾಂಗವನ್ನೇ ಕತ್ತರಿಸಿಕೊಂದ ಪತ್ನಿ
ಪತ್ನಿ ದಪ್ಪಗಿದ್ದಾಳೆ ಎಂದು ಪದೇ-ಪದೇ ಹೀಯಾಳಿಸುತ್ತಿದ್ದ ಪತಿ ದುರಂತ ಅಂತ್ಯ ಕಂಡಿದ್ದಾನೆ. ಗಂಡನ ಕಿರಿಕಿರಿಗೆ ಬೇಸತ್ತ ಪತ್ನಿ ಒಂದು ದಿನ ಆತನ ಮರ್ಮಾವನ್ನು ಕತ್ತರಿಸಿ ಕೊಲೆ ಮಾಡಿದ್ದಾಳೆ.
ಚಂಡೀಗಢ: ನೀನು ನೋಡಲು ಕಪ್ಪಾಗಿದ್ಯಾ, ನಿನ್ನ ಮೈ ಬಣ್ಣ ಕಪ್ಪು ಎಂದು ಪ್ರತಿನಿತ್ಯ ಹೀಯಾಳಿಸುತ್ತಿದ್ದ ಪತಿಯನ್ನೇ ಪತ್ನಿ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾಳೆ, ಈ ಆಘಾತಕಾರಿ ಘಟನೆ ಛತ್ತೀಸ್‍ಗಢದ (Chhattisgarh) ದುರ್ಗ್ ಜಿಲ್ಲೆಯಲ್ಲಿ ನಡೆದಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಂತ್ ಸೋನ್ವಾನಿ ಪತ್ನಿಯಿಂದ ಹತ್ಯೆಯಾದ ಪತಿ. ಆರೋಪಿ ಪತ್ನಿ ಸಂಗೀತಾ ಸೋನ್ವಾನಿ ಬಂಧಿಸಿರುವುದಾಗಿ ಪಟಾಣ್ ಪ್ರದೇಶ ಪೊಲೀಸ್ ಉಪವಿಭಾಗಾಧಿಕಾರಿ ದೇವಾಂಶ್ ರಾಥೋಡ್ ತಿಳಿಸಿದ್ದಾರೆ. ಇನ್ನು, ಮೃತ ಪತಿಗೆ ಇದು ಎರಡನೇ ಮದುವೆಯಾಗಿದ್ದು, ಮೊದಲ ಪತ್ನಿ ಮೃತಪಟ್ಟ ಬಳಿಕ ನಂತ್, ಸಂಗೀತಾಳನ್ನು ಮದುವೆಯಾಗಿದ್ದ ಎಂದು ತಿಳಿದುಬಂದಿದೆ.
ನನ್ನನ್ನು ಯಾವಾಗಲೂ ಕೊಳಕಿ ಎಂದು ರೇಗಿಸುತ್ತಿದ್ದ ಮತ್ತು ಕಪ್ಪು ಮೈ ಬಣ್ಣ ಹೊಂದಿರುವ ಕಾರಣ ಆಗಾಗ ನಿಂದಿಸುತ್ತಿದ್ದ. ಇದೇ ವಿಚಾರವಾಗಿ ಹಲವಾರು ಬಾರಿ ನಮ್ಮಿಬ್ಬರ ನಡುವೆ ಜಗಳ ಕೂಡ ನಡೆದಿತ್ತು. ಭಾನುವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಜಗಳ ನಡೆದಿತ್ತು. ಈ ವೇಳೆ ಕೋಪದಿಂದ ಮನೆಯಲ್ಲಿದ್ದ ಕೊಡಲಿಯಿಂದ ನನ್ನ ಪತಿಯ ಮೇಲೆ ಹಲ್ಲೆ ನಡೆಸಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ನನ್ನ ಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದರು ಎಂದು ಆರೋಪಿ ಸಂಗೀತಾ ಪೊಲೀಸರ ತನಿಖೆ ವೇಳೆ ಬಾಯ್ಬಿಟ್ಟಿದ್ದಾಳೆ.
ಪೊಲೀಸ್ ವಿಚಾರಣೆ ವೇಳೆ ಕೊಲೆ ಮಾಡಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದು, ಮಹಿಳೆ ವಿರುದ್ಧ ಐಪಿಸಿ ಕಾಯ್ದೆ 302 (ಕೊಲೆ) ಹಾಗೂ ಇತರೆ ಸಂಬಂಧಿತ ಸೆಕ್ಷನ್‌ಗಳನ್ನು ಹಾಕಲಾಗಿದೆ ಮತ್ತು ಈ ಸಂಬಂಧ ತನಿಖೆ ಮುಂದುವರಿದಿದೆ ಎಂದೂ ಛತ್ತೀಸ್‌ಗಢದ ಪಟಾಣ್ ಪ್ರದೇಶದ ಪೊಲೀಸ್ ಉಪವಿಭಾಗಾಧಿಕಾರಿ ದೇವಾನ್ಶ್ ರಾಥೋರ್ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Wed, 28 September 22