PSI Recruitment Scam: ಮಾಜಿ ಎಡಿಜಿಪಿಯ ಸ್ಫೋಟಕ ಕೋಡ್ ವರ್ಡ್​ ರಹಸ್ಯ ಬಯಲು

ಭಾರೀ ಸದ್ದು ಮಾಡಿದ ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಎಡಿಜಿಪಿ ಅಮೃತ್ ಪೌಲ್ ಅವರ ಇನ್ನಷ್ಟು ಸ್ಫೋಟಕ ರಹಸ್ಯ ಬಟಾಬಯಲಾಗಿದೆ.

PSI Recruitment Scam: ಮಾಜಿ ಎಡಿಜಿಪಿಯ ಸ್ಫೋಟಕ ಕೋಡ್ ವರ್ಡ್​ ರಹಸ್ಯ ಬಯಲು
ಮಾಜಿ ಎಡಿಜಿಪಿ ಅಮೃತ ಪೌಲ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Sep 29, 2022 | 11:17 AM

ಬೆಂಗಳೂರು: 545 ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ (PSI Recruitment Scam) ಬಂಧಿತರಾಗಿರುವ ಮಾಜಿ ಎಡಿಜಿಪಿ ಅಮೃತ್ ಪೌಲ್ ವಿರುದ್ದ ಸಿಐಡಿ ಅಧಿಕಾರಿಗಳು ಹೆಚ್ಚುವರಿ ಚಾರ್ಜ್ ಶೀಟ್​ನ್ನು 1 ನೇ ಎಸಿಎಂಎಂ ಕೋರ್ಟ್​​ಗೆ ಸಲ್ಲಿಸಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಬಿ.ಕೆ.ಶೇಖರ್ 1406 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿದ್ದು, 78 ದಾಖಲೆಗಳು, 38 ಸಾಕ್ಷಿಗಳ ಉಲ್ಲೇಖಿಸಲಾಗಿದೆ.

ಸ್ಫೋಟಕ ಕೋಡ್ ವರ್ಡ್​ ರಹಸ್ಯ ಬಯಲು ಚಾರ್ಜ್ ಶೀಟ್ ನಲ್ಲಿ ಸ್ಫೋಟಕ ಕೋಡ್ ವರ್ಡ್​ ರಹಸ್ಯ ಬಯಲಾಗಿದೆ. ಅಮಾನತುಗೊಂಡಿರು ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಹಾಗೂ ಭಾತ್ಮೀದಾರನಾಗಿದ್ದ ಉದ್ಯಮಿ ಶಂಬುಲಿಂಗಸ್ವಾಮಿ ನಡುವೆ ಇಟ್ಟುಕೊಂಡಿದ್ದ ಕೋಡ್ ರಹಸ್ಯ ಬಟಾಬಯಲಾಗಿದೆ.

ಇದನ್ನೂ ಓದಿ: PSI Recruitment Scam: ಮುಂದಿನ ಆದೇಶದವರೆಗೂ ಮರುಪರೀಕ್ಷೆಯ ದಿನಾಂಕ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಶಂಭುಲಿಂಗಸ್ವಾಮಿ ಅಮೃತ್​ ಪೌಲ್ ಪರ ಹಣ ಸ್ವೀಕರಿಸುತ್ತಿದ್ದರು. 10 ಲಕ್ಷ ಹಣ ಕೊಟ್ಟರೆ 10 ಸಾವಿರ ರೂ ಎಂದು ನಮೂದು ಮಾಡಲಾಗಿದೆ. ಅಭ್ಯರ್ಥಿಗಳು ಕೊಡುವ ಹಣದಲ್ಲಿ ಕೊನೆಯ 2 ಸೊನ್ನೆ ಮೈನಸ್​​ ಮಾಡಿರುವುದು ಚಾರ್ಜ್​ಶೀಟ್​ ಮೂಲಕ ತಿಳಿದುಬಂದಿದೆ.

ಅಲ್ಲದೇ ಬೆಂಗಳೂರಿನ ಸಹಕಾರನಗರದಲ್ಲಿ ಮನೆ ಮಾಡಿಕೊಂಡಿದ್ದ ಪೌಲ್​​, ಹಗರಣದಲ್ಲಿ 1.41 ಕೋಟಿ ರೂ. ಹಣ ಪಡೆದಿದ್ದಾರೆ. ಪೌಲ್​ ಎದುರಿ ಮನೆ ನಿವಾಸಿಯಾಗಿರುವ ಶಂಭುಲಿಂಗಸ್ವಾಮಿ,ಹಣ ಪಡೆದಿದ್ದನ್ನು ಪೆನ್ ​ಡ್ರೈವ್​ನಲ್ಲಿ ದಾಖಲಿಸಿದ್ದರು. ಪೆನ್​ ಡ್ರೈವ್ ಪರಿಶೀಲನೆ ಕೋಡ್​ ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಕೋಡ್ ಇಟ್ಟಿರುವ ಬಗ್ಗೆ ಸಿಐಡಿ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಅಮೃತ್ ಪಾಲ್ ಆಸ್ತಿ ಎಲ್ಲೆಲ್ಲಿದೆ.?

ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಹೋಬಳಿಯ ಹೊಸಹುಡ್ಯಾ ಗ್ರಾಮದಲ್ಲಿ ಸರ್ವೆ ನಂಬರ್ 247 ರಲ್ಲಿರೋ ಫಾರ್ಮೌಸ್ 4 ಎಕರೆಯಷ್ಟು ಜಾಗದಲ್ಲಿ ಫಾರಂ ಹೌಸ್. ಈ ಫಾರ್ಮೌಸ್ ಪೌಲ್ ತನ್ನ ತಂದೆ ನೇತಾರಾಮ್ ಬನ್ಸಾಲ್ ಹೆಸರಲ್ಲಿ ಜಮೀನನ್ನ ನೋಂದಣಿ ಮಾಡಲಾಗಿದೆ. ಫಾರಾಂ ಹೌಸ್​ನ ಆಸುಪಾಸಿನ 8 ಎಕರೆ ಜಮೀನನ್ನ ಕೂಡ ಪೌಲ್ ಇತ್ತೀಚಿಗೆ ಪರ್ಚೇಸ್ ಮಾಡಿದ್ದಾರಂತೆ. ಚಿಕ್ಕಬಳ್ಳಾಪುರ ತಾಲೂಕಿನ ಶಿಡ್ಲಘಟ್ಟ ನೆಲಪ್ಪನಹಳ್ಳಿ ಬಳಿ 8 ಎಕರೆ 29 ಗುಂಟೆ ಜಮೀನು ತಂದೆ ನೇತಾರಾಮ್ ಹೆಸರಲ್ಲಿ ರಿಜಿಸ್ಟರ್ ಮಾಡಿಸಲಾಗಿದೆ. ಅದೇ ರೀತಿ ನೆಲಪ್ಪನಹಳ್ಳಿ ಸರ್ವೆ ನಂಬರ್ 49 ರಲ್ಲಿ 4 ಎಕರೆ 39 ಗುಂಟೆ ಜಾಗ, ನೆಲಪ್ಪನಹಳ್ಳಿಯಲ್ಲೇ 3 ಎಕರೆ 30 ಗುಂಟೆ ಜಾಗ ಪಾಲ್ ತಂದೆ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಇತ್ತೀಚಿಗೆ ಪರ್ಚೇಸ್ ಮಾಡಿದ್ದ ಜಾಗವನ್ನ ಜಾತವಾರ ಗ್ರಾಮದ ಜಗದೀಶ ಎಂಬವರ ಮಧ್ಯಸ್ಥಿಕೆಯಲ್ಲಿ ಪಾಲ್ ಕೊಂಡುಕೊಂಡಿದ್ದರಂತೆ.

Published On - 11:16 am, Thu, 29 September 22

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ