Mysuru District Police: 72 ಕಳ್ಳತನ ಪ್ರಕರಣ ಭೇದಿಸಿದ ಮೈಸೂರು ಪೊಲೀಸರು, 85 ಪೊಲೀಸರಿಗೆ ಪ್ರಶಂಸನಾ ಪತ್ರ

mysuru police: ಕೆ.ಆರ್. ನಗರ ಚಂದಗಾಲು ಗ್ರಾಮದ ಶ್ರೀ ರಾಮದೇಗುಲ ಸಾರ್ವಜನಿಕ ಗ್ರಂಥಾಲಯದಲ್ಲಿ ಹಾಕಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿಷ್ಣುವಿನ ದಶಾವತಾರಗಳ ಕಲಾಕೃತಿಗಳ ಕಳ್ಳತನ ಪ್ರಕರಣವನ್ನು ಸಹ ಪೊಲೀಸರು ಭೇದಿಸಿದ್ದಾರೆ. ಈ ಕಲಾಕೃತಿಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳು ಆನ್‌ಲೈನ್‌ನಲ್ಲಿ ಅದನ್ನು ಹರಾಜಿಗಿಟ್ಟಿದ್ದರು.

Mysuru District Police: 72 ಕಳ್ಳತನ ಪ್ರಕರಣ ಭೇದಿಸಿದ ಮೈಸೂರು ಪೊಲೀಸರು, 85 ಪೊಲೀಸರಿಗೆ ಪ್ರಶಂಸನಾ ಪತ್ರ
72 ಕಳ್ಳತನ ಪ್ರಕರಣ ಭೇದಿಸಿದ ಮೈಸೂರು ಪೊಲೀಸರು, 85 ಪೊಲೀಸರಿಗೆ ಪ್ರಶಂಸನಾ ಪತ್ರ


ಮೈಸೂರು: ಮೈಸೂರು ಪೊಲೀಸರು ಒಟ್ಟು 72 ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದು, ಬರೋಬ್ಬರಿ 1.62 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಸಾಲು ಸಾಲು ಪ್ರಕರಣಗಳನ್ನು ಭೇದಿಸಿದ 85 ಪೊಲೀಸರಿಗೆ ಪ್ರಶಂಸನಾ ಪತ್ರ ನೀಡಲಾಗಿದೆ. ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ವಾರಸುದಾರರಿಗೆ ವಸ್ತುಗಳನ್ನ ಹಸ್ತಾಂತರಿಸಿದ್ದಾರೆ. ಇದೇ ವರ್ಷ ಜನವರಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ 43 ಕೊಲೆಗಳ ಪೈಕಿ 24 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. 24 ಸರಗಳ್ಳತನ, 13 ದರೋಡೆ, 56 ವಾಹನ ಕಳ್ಳತನ ಮತ್ತು 31 ಮನೆ ಕಳ್ಳತನ ಪ್ರಕರಣಗಳ ಪತ್ತೆಯಾಗಿದೆ (Mysuru District Police).

ಹುಣಸೂರಿನ ದರೋಡೆ ಪ್ರಕರಣದಲ್ಲಿ 34 ಲಕ್ಷ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಕೆ.ಆರ್. ನಗರ ಚಂದಗಾಲು ಗ್ರಾಮದ ಶ್ರೀ ರಾಮದೇಗುಲ ಸಾರ್ವಜನಿಕ ಗ್ರಂಥಾಲಯದಲ್ಲಿ ಹಾಕಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಿಷ್ಣುವಿನ ದಶಾವತಾರಗಳ ಕಲಾಕೃತಿಗಳ ಕಳ್ಳತನ ಪ್ರಕರಣವನ್ನು ಸಹ ಪೊಲೀಸರು ಭೇದಿಸಿದ್ದಾರೆ. ಈ ಕಲಾಕೃತಿಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳು ಆನ್‌ಲೈನ್‌ನಲ್ಲಿ ಅದನ್ನು ಹರಾಜಿಗಿಟ್ಟಿದ್ದರು. 4.50 ಲಕ್ಷ ರೂಪಾಯಿವರೆಗೂ ಖದೀಮರು ಹರಾಜಿಗೆ ಇಟ್ಟಿದ್ದರು.

Click on your DTH Provider to Add TV9 Kannada