AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾವಿನ ಬಳಿಕ ಏನಾಗುತ್ತದೆ ಎಂದು ಸರ್ಚ್ ಮಾಡಿದ ಯುವತಿಯ ನಿಗೂಢ ಸಾವು

ನಾಗ್ಪುರದಲ್ಲಿ 'ಸಾವಿನ ನಂತರ ಏನಾಗುತ್ತದೆ?' ಎಂದು ಗೂಗಲ್​ನಲ್ಲಿ ಸರ್ಚ್ ಮಾಡಿದ್ದ ಯುವತಿ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆ ಯುರೋಪಿಯನ್ ಸಂಸ್ಕೃತಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದಳು. ಕೆಲವು ಸಮಯದಿಂದ ಆಕೆ ಸಾವಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಳು ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ.

ಸಾವಿನ ಬಳಿಕ ಏನಾಗುತ್ತದೆ ಎಂದು ಸರ್ಚ್ ಮಾಡಿದ ಯುವತಿಯ ನಿಗೂಢ ಸಾವು
Death
ಸುಷ್ಮಾ ಚಕ್ರೆ
|

Updated on: Jan 28, 2025 | 5:01 PM

Share

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ 17 ವರ್ಷದ ಯುವತಿಯೊಬ್ಬಳು “ಸಾವಿನ ನಂತರ ಏನಾಗುತ್ತದೆ?” ಎಂಬ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ಮೃತ ಯುವತಿ ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದಳು. ಆಕೆ ಯುರೋಪಿಯನ್ ಸಂಸ್ಕೃತಿಯಲ್ಲೂ ಆಸಕ್ತಿ ಹೊಂದಿದ್ದಳು. ಆಕೆ ಸಾವಿನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಳು ಎಂದು ತಿಳಿದುಬಂದಿದೆ. ಇದರಿಂದ ಆಕೆ ಹಲವಾರು ವಾರಗಳಿಂದ ಆತ್ಮಹತ್ಯೆಗೆ ಪ್ಲಾನ್ ಮಾಡುತ್ತಿದ್ದಳು ಎಂದು ತಿಳಿದುಬರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಮೃತ ಯುವತಿ ಸಾವು ಮತ್ತು ವಿದೇಶಿ ಸಂಸ್ಕೃತಿಗಳ ಬಗ್ಗೆ ಮಾಹಿತಿಯನ್ನು ಆಗಾಗ ಗೂಗಲ್​ನಲ್ಲಿ ಹುಡುಕುತ್ತಿದ್ದಳು. ಖಾಸಗಿ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಆಕೆ ನಾಗ್ಪುರದ ಆರ್‌ಬಿಐನ ಪ್ರಾದೇಶಿಕ ನಿರ್ದೇಶಕರ ಏಕೈಕ ಮಗಳಾಗಿದ್ದಳು.

ಸಾವನ್ನಪ್ಪಿದ ಆಕೆಯ ಮಣಿಕಟ್ಟಿನ ಮೇಲೆ ಚಾಕುವಿನಿಂದ ಅಡ್ಡಲಾಗಿ ಕಟ್ ಮಾಡಿಕೊಂಡ ಗುರುತುಗಳಿವೆ. ಆಕೆ ಮೊದಲು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡು, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಬ್ಲೇಡ್​ನಿಂದ ಅಡ್ಡಲಾಗಿ ಕಟ್ ಮಾಡಿಕೊಂಡು ಗುರುತುಗಳನ್ನು ಮಾಡಿದ್ದಳು. ನಂತರ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ಕತ್ತು ಸೀಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸೂಟ್‌ಕೇಸ್‌ನಲ್ಲಿ ದೆಹಲಿ ಮಹಿಳೆಯ ಸುಟ್ಟ ಶವ ಪತ್ತೆ; ಒಂದೇ ದಿನದಲ್ಲಿ ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?

ಗೃಹಿಣಿಯಾಗಿರುವ ಆಕೆಯ ತಾಯಿ, ಛತ್ರಪತಿ ನಗರ ಪ್ರದೇಶದಲ್ಲಿರುವ ತಮ್ಮ ಮನೆಯ ಮಲಗುವ ಕೋಣೆಯಲ್ಲಿ ಸುಮಾರು 5 ಗಂಟೆಗೆ ಆಕೆ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಗಾಬರಿಯಾದರು. ಸೋಮವಾರ ಬೆಳಿಗ್ಗೆ ಆಕೆ ಎಚ್ಚರಿಕೆ ನೀಡಿ, ಫೋನ್ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆಕೆಯ ಮೊಬೈಲ್ ಫೋನ್ ವಶಪಡಿಸಿಕೊಂಡರು. ಅದನ್ನು ಪರಿಶೀಲಿಸಿದಾಗ “ಸಾವಿನ ನಂತರ ಏನಾಗುತ್ತದೆ?” ಎಂಬ ಮಾಹಿತಿಗಾಗಿ ಆಕೆ ಗೂಗಲ್‌ನಲ್ಲಿ ಹುಡುಕುತ್ತಿದ್ದಾಳೆ ಎಂದು ತಿಳಿದುಬಂದಿತು.

ಇದನ್ನೂ ಓದಿ: ಹುಬ್ಬಳ್ಳಿ: ಪತ್ನಿ ಕಿರುಕುಳ ತಾಳಲಾರದೆ ಡೆತ್​ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ

ತನಿಖೆಯ ಪ್ರಕಾರ, ಯುವತಿ ಆನ್‌ಲೈನ್ ಗೇಮಿಂಗ್‌ಗೆ ವ್ಯಸನಿಯಾಗಿದ್ದಳು ಮತ್ತು ಸಾವು ಮತ್ತು ವಿದೇಶಿ ಸಂಸ್ಕೃತಿಗಳ ಬಗ್ಗೆ ಮಾಹಿತಿಯನ್ನು ಆಗಾಗ ಹುಡುಕುತ್ತಿದ್ದಳು. ಆಕೆ ತನ್ನ ಜೀವನವನ್ನು ಕೊನೆಗೊಳಿಸಲು ಬಳಸಿದ ಕಲ್ಲಿನ ಬ್ಲೇಡ್ ಮತ್ತು ಮರದ ಹಿಡಿಕೆಯನ್ನು ಹೊಂದಿರುವ ಚಾಕು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಹೀಗಾಗಿ, ಆಕೆ ಆನ್‌ಲೈನ್‌ನಲ್ಲಿ ಚಾಕುವನ್ನು ಆರ್ಡರ್ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆ ಯುವತಿ ತನ್ನ ಹೆತ್ತವರೊಂದಿಗೆ ಅವರ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದಳು. ಆದರೆ, ಮೊದಲ ಮಹಡಿಯಲ್ಲಿ ಅವಳ ಚಿಕ್ಕಪ್ಪನ ಕುಟುಂಬ ಮತ್ತು ಅಜ್ಜಿ ವಾಸಿಸುತ್ತಿದ್ದರು. ಧಂತೋಲಿ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ