ಹುಬ್ಬಳ್ಳಿ, ಜನವರಿ 23: ತಂದೆ-ತಾಯಿಗೆ ತೊಂದರೆ ಮಾಡಿದ್ದಾರೆ ಎಂದು ಹೇಳಿ ಮಿನಿ ವಿಧಾನಸೌಧ (Mini vidhana soudha) ದಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಹೊಡೆದಾಟ ನಡೆದಿರುವಂತಹ ಘಟನೆ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹನಮಂತಪ್ಪ ಹಾಗೂ ಮಹೇಶ್ ಗೌಡ ನಡುವೆ ಹೊಡೆದಾಟ ಮಾಡಲಾಗಿದೆ. ನಮ್ಮ ತಂದೆ ತಾಯಿಗೆ ತೊಂದರೆ ಮಾಡಿದ್ದಾರೆ ಅದಕ್ಕೆ ಹೊಡೆದಿದ್ದೇನೆ ಎಂದು ಮಹೇಶ್ ಗೌಡ ಹೇಳಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಹನಮಂತಪ್ಪ ಉಪನಗರ ಪೊಲೀಸ್ ಠಾಣೆಗೆ ಓಡಿಹೋಗಿದ್ದಾರೆ. ಬಳಿಕ ಉಪನಗರ ಪೊಲೀಸರು ಜಗಳವನ್ನು ಬಿಡಿಸಿದ್ದಾರೆ.
ಮಂಡ್ಯ: ಸಂಸಾರ ಎಂಬ ನೌಕೆಯಲ್ಲಿ ಕೌಟುಂಬಿಕ ಕಲಹದಿಂದ ಮಹಿಳೆಯೊಬ್ಬಳು ನೇಣಿಗೆ ಶರಣಾಗಿರುವಂತಹ ಘಟನೆ ಮಂಡ್ಯ ನೆಹರು ನಗರದ ಪೂರ್ವ ಬಡಾವಣೆಯಲ್ಲಿ ಇತ್ತೀಚೆಗೆ ನಡೆದಿತ್ತು. ಪದ್ಮ(36) ಮೃತ ಮಹಿಳೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದರು.
ಇದನ್ನೂ ಓದಿ: ಮಲತಂದೆಯಿಂದಲೇ ಮಗಳನ್ನು ವೇಶ್ಯೆವಾಟಿಕೆಗೆ ತಳ್ಳಿದ್ದ ಆರೋಪ: ಆರೋಪಿಗಳ ಬಂಧನ
ಮೃತ ಮಹಿಳೆ ಪದ್ಮ ಪತಿ ಸಿದ್ದರಾಜು ಎಂಬಾತನ ಮೇಲೆ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ಅಂದ ಹಾಗೆ ರಾಮನಗರ ತಾಲೂಕಿನ ಅಂಕನಹಳ್ಳಿ ನಿವಾಸಿಯಾಗಿದ್ದ ಪದ್ಮ ಹಾಗೂ ಮಂಡ್ಯ ಮೂಲದ ಸಿದ್ದರಾಜು ನಡುವೆ ಪ್ರೀತಿ ಉಂಟಾಗಿ 13 ವರ್ಷದ ಕೆಳಗೆ ಪ್ರೀತಿಸಿ ಮದುವೆಯಾಗಿದ್ದರು.
ಇಬ್ಬರು ಮುದ್ದಾದ ಮಕ್ಕಳು ಸಹ ಇವೆ. ಆದರೆ ಆನಂತರ ಹಣಕ್ಕಾಗಿ ಸಿದ್ದರಾಜು ಎಂಬಾತ ಸಾಕಷ್ಟು ಪೀಡಿಸುತ್ತಿದ್ದನಂತೆ. ಆಗಾಗ ಗಲಾಟೆ ಸಹ ನಡೆಯುತ್ತಿತ್ತು. ಹಲವು ಬಾರಿ ಹಲ್ಲೆ ಕೂಡ ನಡೆಸಿದ್ದನಂತೆ. ಹೀಗಾಗಿಯೇ ಇದರಿಂದ ಮನನೊಂದು ಆತ್ಮಹತ್ಯೆಗೆ ಪದ್ಮ ಶರಣಾಗಿದ್ದಾಳೆ. ಆದರೆ ಕುಟುಂಬಸ್ಥರು ಮಾತ್ರ ಪತಿ
ಸಿದ್ದರಾಜುನೇ ಕೊಲೆ ಮಾಡಿ ನೇಣು ಹಾಕಿದ್ದಾನೆ ಎನ್ನುತ್ತಿದ್ದಾರೆ.
ಬೆಂಗಳೂರು: ವಿವಾಹಿತ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವಂತಹ ಘಟನೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ನಡೆದಿದೆ. ಪತಿ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಂಜಿತಾ(27) ಶವ ಪತ್ತೆ ಆಗಿದೆ. ಪತಿ ಮಧು ಮತ್ತು ಕುಟುಂಬಸ್ಥರ ವಿರುದ್ಧ ರಂಜಿತಾ ಪೋಷಕರು ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ತುಮಕೂರು: ಜಲ್ಲಿ ಕ್ರಷರ್ನಲ್ಲಿ ಕೆಲಸ ಮಾಡುವಾಗ ಕಲ್ಲುಗಳು ಬಿದ್ದು ಕಾರ್ಮಿಕರಿಬ್ಬರ ಸಾವು
ಮಂಡ್ಯ ಜಿಲ್ಲೆಯ ನಾಗಮಂಗಲ ಮೂಲದ ರಂಜಿತಾಗೆ 5 ವರ್ಷದ ಹಿಂದೆ ತುಮಕೂರು ಜಿಲ್ಲೆಯ ತುರುವೇಕೆರೆ ಮೂಲದ ಮಧು ಜೊತೆ ಮದುವೆ ಆಗಿತ್ತು. ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಸಹ ಇದೆ. ವೃತ್ತಿಯಲ್ಲಿ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಮಧು ಕೆಲಸ ಮಾಡುತ್ತಿದ್ದರು.
ವರದಕ್ಷಿಣೆ ಕಿರುಕುಳದ ಬಗ್ಗೆ ರಂಜಿತಾ ಆಗಾಗ ತಾಯಿ ಬಳಿ ಹೇಳಿದ್ದಳು. ಸಾವಿಗೂ ಮುನ್ನ ತಾಯಿಗೆ ವಿಡಿಯೋ ಕಾಲ್ ಮಾಡಿದ್ದರು. ಅದಾದ ಬಳಿಕ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ರಂಜಿತಾ ಪೋಷಕರಿಗೆ ಮಧು ಕರೆ ಮಾಡಿದ್ದಾರೆ. ಸ್ಥಳಕ್ಕೆ ಜ್ಞಾನಭಾರತಿನಗರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.