ತುಮಕೂರು: ಜಲ್ಲಿ ಕ್ರಷರ್​ನಲ್ಲಿ ಕೆಲಸ ಮಾಡುವಾಗ ಕಲ್ಲುಗಳು ಬಿದ್ದು ಕಾರ್ಮಿಕರಿಬ್ಬರ ಸಾವು

ತುಮಕೂರು ತಾಲೂಕಿನ ಕೌತಮಾರನಹಳ್ಳಿ ಗ್ರಾಮದ ಬಳಿ ಜಲ್ಲಿ ಕ್ರಷರ್​ನಲ್ಲಿ ಕೆಲಸ ಮಾಡುವಾಗ ಕಲ್ಲುಗಳು ಬಿದ್ದು ಬಿಹಾರ ಮೂಲದ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಕ್ವಾರಿಯಲ್ಲಿ ಕಲ್ಲು ಕೊರೆಯುವಾಗ ಮೇಲಿಂದ ಕಲ್ಲುಗಳು ಬಿದ್ದು ದುರಂತ ಸಂಭವಿಸಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

ತುಮಕೂರು: ಜಲ್ಲಿ ಕ್ರಷರ್​ನಲ್ಲಿ ಕೆಲಸ ಮಾಡುವಾಗ ಕಲ್ಲುಗಳು ಬಿದ್ದು ಕಾರ್ಮಿಕರಿಬ್ಬರ ಸಾವು
ಮೃತರು
Follow us
ಮಹೇಶ್ ಇ, ಭೂಮನಹಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 23, 2024 | 6:48 PM

ತುಮಕೂರು, ಜನವರಿ 23: ಜಲ್ಲಿ ಕ್ರಷರ್​ನಲ್ಲಿ ಕೆಲಸ ಮಾಡುವಾಗ ಕಲ್ಲುಗಳು ಬಿದ್ದು ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವಂತಹ (death) ಘಟನೆ ತುಮಕೂರು ತಾಲೂಕಿನ ಕೌತಮಾರನಹಳ್ಳಿ ಗ್ರಾಮದ ಬಳಿ ನಡೆದಿದೆ. ಮೊಹಮ್ಮದ್ ಅಬ್ದುಲ್(29), ಮನು(25) ಮೃತ ಕಾರ್ಮಿಕರು. ಕ್ವಾರಿಯಲ್ಲಿ ಕಲ್ಲು ಕೊರೆಯುವಾಗ ಮೇಲಿಂದ ಕಲ್ಲುಗಳು ಬಿದ್ದು ದುರಂತ ಸಂಭವಿಸಿದೆ. ಮೃತ ಮೊಹಮ್ಮದ್, ಮನು ಇಬ್ಬರೂ ಬಿಹಾರ ಮೂಲದವರು. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ 2 ಕುಟುಂಬಗಳ ನಡುವೆ ಗಲಾಟೆ

ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ 2 ಕುಟುಂಬಗಳ ನಡುವೆ ಗಲಾಟೆ ಉಂಟಾಗಿದ್ದು, ಕೋಲು, ಇಟ್ಟಿಗೆ ಹಿಡಿದು ಹೊಡೆದಾಡಿಕೊಂಡಿರುವಂತಹ ಘಟನೆ ಶಿವಶಂಕರ ಕಾಲೋನಿಯಲ್ಲಿ ಪೊಲೀಸರ ಮುಂದೆಯೇ ನಡೆದಿದೆ.  ಮದುವೆ ವಿಚಾರವಾಗಿ ಕೌದಿ ಕುಟುಂಬಸ್ಥರು, ಅಂಚಟಗೇರಿ ಕುಟುಂಬಸ್ಥರ ನಡುವೆ ಗಲಾಟೆ ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಜಮೀನಿಗೆ ನೀರು ಹಾಯಿಸುವ ಗಲಾಟೆ ಅಣ್ಣನ ಕೊಲೆಯಲ್ಲಿ ಅಂತ್ಯ, 60 ವರ್ಷದ ಸಂಬಂಧಕ್ಕೆ ದಾರುಣ ಅಂತ್ಯ

ನಡು ರಸ್ತೆಯಲ್ಲೇ 2 ಕುಟುಂಬಸ್ಥರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಗಲಾಟೆಯಲ್ಲಿ 6 ಜನರಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎರಡು ಕುಟುಂಬಗಳ ಗಲಾಟೆ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕಂಡುಬಂದಿದೆ.

ರಾಮಮಂದಿರ ಮೇಲೆ ಪಾಕಿಸ್ತಾನ ಧ್ವಜ: ಯುವಕನ ಬಂಧನ

ರಾಯಚೂರು: ನಿನ್ನೆ ಲೋಕಾರ್ಪಣೆಯಾದ ರಾಮಮಂದಿರ ಮೇಲೆ ಪಾಕಿಸ್ತಾನ ಧ್ವಜದ ರೀತಿ ಎಡಿಟ್​  ಮಾಡಿ ಸ್ಟೇಟಸ್ ಹಾಕಿ ಕತ್ತಿ ಪ್ರದರ್ಶನ ಮಾಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸೈಯದ್ ಇಸಾಕ್(20)ಬಂಧಿತ ಯುವಕ. ಜಿಲ್ಲೆಯ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ನಿವಾಸಿ.

ವಾಟ್ಸಪ್, ಇನ್ಸ್ಟಾಗ್ರಾಮ್ ಪೇಜ್​ನಲ್ಲಿ ವಿಡಿಯೋ ವೈರಲ್​ ಮಾಡಲಾಗಿತ್ತು. ಇದು ಹಿಂದೂ ಯುವಕರು ಕೆರಳಿಸಿದೆ. ಠಾಣೆ ಮುಂದೆ ಭಜನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಟಿಪ್ಪರ್​​ಗೆ ಬೈಕ್​ ಡಿಕ್ಕಿ: ವಿದ್ಯಾರ್ಥಿ ಸಾವು

ಬೆಂಗಳೂರು: ಟಿಪ್ಪರ್​​ಗೆ ಬೈಕ್​ ಡಿಕ್ಕಿಯಾಗಿ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ಉಲ್ಲಾಳ ಕೆರೆ ಬಳಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದ ಲಿಖಿತ್ (22) ಮೃತ ಬೈಕ್​ ಸವಾರ. ಲಾರಿ ಓವರ್​ಟೇಕ್ ಮಾಡುವಾಗ ಡಿಕ್ಕಿಯಾಗಿ ಲಿಖಿತ್ ಕೆಳಗೆ ಬಿದ್ದಿದ್ದು, ಬಳಿಕ ಲಾರಿ ಆತನ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ: ಆನೇಕಲ್ ನಲ್ಲಿ ಪುನಃ ಶುರವಾದ ಸರಗಳ್ಳತನ, ಇರಾನಿ ಗ್ಯಾಂಗ್ ಸಕ್ರಿಯಗೊಂಡಿರುವ ಬಗ್ಗೆ ಶಂಕೆ

ಬೈಕ್ ಹಿಂಬದಿ ಸವಾರ ಜ್ಞಾನೇಶ್​ಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಂಗೇರಿ‌ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಮಹಿಳೆ ಶವ ಪತ್ತೆ

ಮಂಡ್ಯ: ಮೇಲಕೋಟೆ ಬೆಟ್ಟದ ತಪ್ಪಲಿನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ದುಷ್ಕರ್ಮಿಗಳು ಕೊಲೆಗೈದು ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮೇಲುಕೋಟೆ‌ಯಲ್ಲಿ ಘಟನೆ ನಡೆದಿದೆ. ದೀಪಿಕಾ (28) ಕೊಲೆಯಾದ ಮಹಿಳೆ. ಪಾಂಡವಪುರ ತಾಲ್ಲೂಕಿನ ಮಾಣಿಕ್ಯಹಳ್ಳಿ ಗ್ರಾಮದ ನಿವಾಸಿಯಾದ ದೀಪಿಕಾ ಮೇಲುಕೋಟೆಯ ಎಸ್​ಇಟಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:32 pm, Tue, 23 January 24

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್