ಮಹಿಳೆಯ ಸ್ನೇಹ ಬೆಳೆಸಿದ ಗಾರೆ ಕೆಲಸಗಾರ; ಊರವರ ಮಾತಿಗೆ ಅಂಜಿ ಸ್ನೇಹ ಬೇಡ ಎಂದಿದ್ದಕ್ಕೆ ಎಸಗಿಯೇ ಬಿಟ್ಟ ಹೇಯ ಕೃತ್ಯ

ಗಾರೆ ಕೆಲಸಕ್ಕೆ ಬಂದವನು ಮನೆಯೊಡತಿಯ ಸ್ನೇಹ ಬೆಳಿಸಿ, ಆಕೆ ಸಂಸಾರವನ್ನೇ ನಾಶ ಮಾಡಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ನಡೆದಿದೆ

ಮಹಿಳೆಯ ಸ್ನೇಹ ಬೆಳೆಸಿದ ಗಾರೆ ಕೆಲಸಗಾರ; ಊರವರ ಮಾತಿಗೆ ಅಂಜಿ ಸ್ನೇಹ ಬೇಡ ಎಂದಿದ್ದಕ್ಕೆ ಎಸಗಿಯೇ ಬಿಟ್ಟ ಹೇಯ ಕೃತ್ಯ
ಆರೋಪಿ ಮೂಡ್ಲಗಿರಿ
Follow us
TV9 Web
| Updated By: ಮದನ್​ ಕುಮಾರ್​

Updated on:Nov 06, 2022 | 11:35 PM

ಆತನ ತಂದೆ ಮೃತಪಟ್ಟು 12 ದಿನ ಕಳೆದಿತ್ತು, ಹನ್ನೊಂದನೇ ದಿನದ ತಿಥಿಕಾರ್ಯ ಮುಗಿಸಿ ನೆಂಟರಿಷ್ಟರೆಲ್ಲಾ ಊರು ಸೇರಿಕೊಂಡಿದ್ದರು. ಮನೆಯಲ್ಲಿ ಅಪ್ಪ ಸತ್ತ ದುಖಃ ಇನ್ನು ಕಮ್ಮಿ ಆಗಿರಲಿಲ್ಲ, ಇಂತಹ ವೇಳೆಯಲ್ಲಿ ನಿನ್ನೆ ಇದ್ದಕ್ಕಿದ್ದಂತೆ ಮನೆ ಬಳಿ ಬಂದಿದ್ದ ದುರುಳನೊಬ್ಬ ಏಕಾ ಏಕಿ ಮನೆಯೊಡತಿಮೇಲೆ ಅಟ್ಯಾಕ್ ಮಾಡಿದ್ದಾನೆ. ನನ್ನ ಹೆಂಡತಿಗೆ ಏಕೆ ಹೊಡಿತೀಯ ಅಂತಾ ಕೇಳೋಕೆ ಹೋದರೇ ಗಂಡ ಹೆಂಡಿರಿಬ್ಬರ ಮೇಲೂ ಪಾಪಿ ದಾಳಿಮಾಡಿದ್ದನಾಎ. ಇದರಿಂದ ದಂಪತಿಗೆ ತೀವೃ ಗಾಯಗೊಂಡಿದ್ದು,ಗಂಡ ಸ್ಥಳದಲ್ಲೇ ಮೃತಪಟ್ಟರೇ, ಪತ್ನಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ದಂಪತಿಗೆ ವ್ಯಕ್ತಿಯೊಬ್ಬ ಚೂರಿಯಿಂದ ಇರದಿದ್ದಾನೆ. ಇದರಿಂದ ಜವರಯ್ಯ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ತೀವೃವಾಗಿ ಗಾಯಗೊಂಡಿದ್ದ ಜವರಯ್ಯ ಪತ್ನಿ ಮಂಜುಳಾ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜವರಯ್ಯ ಇತ್ತೀಚಿಗೆ ತನ್ನ ಮನೆ ನವೀಕರಣ ಕೆಲಸ ಶುರುಮಾಡಿದ್ದರು. ಈ ಹಿನ್ನೆಲೆ ಪಕ್ಕದ ಗ್ರಾಮವಾದ ಮಾಚಗೌಡನಹಳ್ಳಿಯ ಮೂಡ್ಲಗಿರಿ ಎಂಬಾತನಿಗೆ ಮನೆಯ ಗಾರೆ ಕೆಲಸ ಹಾಗು ಎಲೆಕ್ಟ್ರಿಕ್ ಕೆಲಸಕ್ಕೆಂದು ಗುತ್ತಿಗೆ ನೀಡಿದ್ದರು. ಈಗಾಗಲೆ ಇಬ್ಬರು ಪತ್ನಿಯರನ್ನು ಹೊಂದಿರೋ ಮೂಡ್ಲಗಿರಿ ಮಂಜುಳಾ ಜೊತೆ ಸ್ನೇಹ ಬೆಳೆಸಿ ಸಲುಗೆಯಿಂದ ಇರುತ್ತಿದ್ದನು. ಈ ವಿಚಾರ ಊರಿಗೆಲ್ಲಾ ಗೊತ್ತಾಗಿ ಊರಿನ ಜನರು ಏನೇನೋ ಮಾತನಾಡಿಕೊಳ್ಳೋಕೆ ಶುರು ಮಾಡಿದರು. ಈ ವಿಷಯ ಜವರಯ್ಯನ ಕಿವಿಗು ಬಿದ್ದಿತ್ತು, ಇದರಿಂದ ಕುಪಿತನಾದ ಜವರಯ್ಯ ಪತ್ನಿಗೆ ಅವನ ಸ್ನೇಹ ಬಿಟ್ಟುಬಿಡು ಎಂದು ವಾರ್ನ್ ಮಾಡಿದ್ದನು. ಮಂಜುಳಾ ಕೂಡ ಮೂಡ್ಲಗಿರಿಗೆ ನನ್ನ ನಿನ್ನ ಸ್ನೇಹದ ಬಗ್ಗೆ ಊರಿನ ಜನರ ಬೇರೇನೋ ಮಾತನಾಡುತ್ತಿದ್ದಾರೆ, ಇನ್ಮುಂದೆ ನನ್ನ ಮನೆ ಹತ್ತಿರ ಬರಬೇಡ ಎಂದು ಹೇಳಿದ್ದಳು. ಇದರಿಂದ ಸಿಟ್ಟಿಗೆದ್ದಿದ್ದ ಪಾಪಿ ಮೂಡ್ಲಿಗಿರಿ ನಿನ್ನೆ ಬೆಳಿಗ್ಗೆಯೇ ಪಾನಮತ್ತನಾಗಿ ಅವಳಿಗೆ ಬುದ್ದಿ ಕಲಿಸುತ್ತೇನೆ ಎಂದು ಕೈಯಲ್ಲಿ ಚಾಕು ಹಿಡಿದುಕೊಂಡು ಬೈಕ್​ನಲ್ಲಿ ಮನೆ ಬಂದಿದ್ದಾನೆ. ಬಂದವನೇ ಸೀದಾ ಮಂಜುಳಾ ಮೇಲೆ ಹಲ್ಲೆಮಾಡಿದ್ದಾನೆ.

ಆಗ ಜವರಯ್ಯ ನನ್ನ ಹೆಂಡತಿಗೆ ನೀ ಯಾಕೆ ಹೊಡಿತೀಯಾ ಎಂದು ಪ್ರಶ್ನೆ ಮಾಡಿದ್ದಾನೆ. ಇಲ್ಲಿ ಯಾಕೆ ಬಂದ್ದಿದ್ದೀಯಾ ಹೋಗು ಎಂದು ರೇಗಿದ್ದ ಅಷ್ಟೇ, ನೋಡ ನೋಡುತ್ತೆಲೆ ಸೊಂಟದಲ್ಲಿದ್ದ ಚಾಕು ತೆಗೆದು ಮಂಜುಳಾ ಮೇಲೆ ದಾಳಿ ಮಾಡಿದ ಮೂಡ್ಲಗಿರಿ ಕೊಲೆಮಾಡಲು ಮುಂದಾಗಿದ್ದಾನೆ. ಈ ವೇಳೆ ಪತ್ನಿ ರಕ್ಷಣೆಗೆ ಬಂದ ಜವರಯ್ಯನಿಗೂ ಇರಿದಿದ್ದಾನೆ. ಮೂಡ್ಲಗಿರಿ ಕೊಂದವನೇ ಅಲ್ಲಿಂದ ಎಸ್ಕೇಪ್ ಆಗೋಕೆ ಓಡಿದ್ದಾನೆ ಹಿಂಬಾಲಿಸಿ ಹೋದ ಜನರು ಕೂಡಲೆ ಆರೋಪಿಯನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಘಟನೆಯಲ್ಲಿ ತೀವೃವಾಗಿ ಗಾಯಗೊಂಡ ಜವರಯ್ಯ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮಂಜುಳಾ ಹಾಸನದ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಪ್ರಕರಣ ದಾಖಲಿಸಿಕೊಂಡಿರುವ ಹೊಳೆನರಸೀಪುರ ನಗರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದು, ತನಿಖೆ ಬಳಿಕ ಕೊಲೆ ಹಿಂದಿನ ಅಸಲಿ ಸತ್ಯ ಹೊರ ಬರಲಿದೆ.

ಮಂಜುನಾಥ್ ಕೆಬಿ ಟಿವಿ9 ಹಾಸನ

Published On - 8:39 pm, Sun, 6 November 22

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್