ಪೆರೋಲ್ ಮೇಲೆ ಹೊರ ಬಂದು, 15 ವರ್ಷಗಳ ನಂತರ ಸೆರೆ ಸಿಕ್ಕವನ ರೋಚಕ ಕಹಾನಿ

15 ವರ್ಷಗಳ ಹಿಂದೆ ಪೆರೋಲ್ ಮೇಲೆ ಪರಪ್ಪನ ಅಗ್ರಹಾರದಿಂದ ಹೊರಬಂದು ಎಸ್ಕೇಪ್ ಆಗಿದ್ದವನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೆರೋಲ್ ಮೇಲೆ ಹೊರ ಬಂದು, 15 ವರ್ಷಗಳ ನಂತರ ಸೆರೆ ಸಿಕ್ಕವನ ರೋಚಕ ಕಹಾನಿ
ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್​ನನ್ನು ಬಂಧಿಸಿದ ಪೊಲೀಸರು
Follow us
TV9 Web
| Updated By: ವಿವೇಕ ಬಿರಾದಾರ

Updated on:Dec 21, 2022 | 12:40 AM

ಆತ ಬರೋಬ್ಬರಿ 15 ವರ್ಷಗಳ ಹಿಂದೆ 2007 ರಲ್ಲಿ ಪೆರೋಲ್ ಮೇಲೆ ಪರಪ್ಪನ ಅಗ್ರಹಾರದಿಂದ  ಹೊರಬಂದು ಎಸ್ಕೇಪ್ ಆಗಿದ್ದನು. ಇದುವರೆಗು ಪತ್ತೆಯಾಗಿರದ ಅಸಾಮಿಯನ್ನು ಇದೀಗ ಮಡಿವಾಳ ಠಾಣೆ ಪಿಎಸ್ಐ ಕಿಶೋರ್ ಬಿ.ಟಿ. ಮತ್ತು ಸಿಬ್ಬಂದಿ ಅಶೋಕ್ ರಾಠೋಡ್, ನಾರಾಣಪ್ಪ ತಂಡ ಬಂಧಿಸಿ ಕರೆತಂದಿದ್ದಾರೆ. 15 ವರ್ಷಗಳ ಕಾಲ ಆತ ಎಲ್ಲಿದ್ದ..? ಏನೇನ್ ಮಾಡ್ತಿದ್ದ..? ಸಣ್ಣ ಕ್ಲ್ಯೂ ಕೂಡ ಸಿಗದಂತೆ ಮದ್ವೆ ಮಾಡಿಕೊಂಡು ಮಡದಿ, ಇಬ್ಬರ ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದವನನ್ನು ಮಡಿವಾಳ ಪೊಲೀಸರು ಇದೀಗ ಬಂಧಿಸಿ ಕರೆತಂದಿದ್ದಾರೆ. ಇಷ್ಟಕ್ಕೂ ಈ ವ್ಯಕ್ತಿ ಯಾರು…..? ಹೇಗೆ ತಲೆಮರೆಸಿಕೊಂಡಿದ್ದ ಅನ್ನೋ ಇಂಟ್ರೆಸ್ಟಿಂಗ್ ಡಿಟೇಲ್ಸ್ ಇಲ್ಲಿದೆ ನೋಡಿ.

ಅವನೊಬ್ಬ ಬೆಂಗಳೂರಿನ ನಟೋರಿಯಸ್ ಕ್ರಿಮಿನಲ್, ಕಳೆದ 20 ವರ್ಷಗಳ ಹಿಂದೆ ಶೇಷಾದ್ರಿಪುರಂನಲ್ಲಿ ಡಕಾಯಿತಿ, ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಸೇರಿದಂತೆ, ಶಿವಾಜಿನಗರದಲ್ಲೂ ತನ್ನದೆ ಸಹಚರರೊಂದಿಗೆ ಕ್ರೈಂ ಕೃತ್ಯಗಳನ್ನು ನಡೆಸಿ ಅಟ್ಟಹಾಸ ಮೆರೆದಿದ್ದನು. 2000-2007 ರ ನಡುವೆ ಕ್ರಿಮಿನಲ್ ಪ್ರಕರಣಗಳಲ್ಲಿ ತೊಡಗಿದ್ದವನನ್ನು ಒಮ್ಮೆ ಮಡಿವಾಳ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಆ ಬಳಿಕ ಕೊಲೆ, ಡಕಾಯಿತಿ ಕೇಸ್ ಗಳಲ್ಲಿ ಜೈಲು ಸೇರಿದ್ದನು.

ಪೆರೋಲ್ ಮೇಲೆ ಹೊರಬರುವ ಮುನ್ನವೇ ಡಿಫರೆಂಟ್ ಮ್ಯಾನರಿಸಂ ನಿಂದ ಗಮನ ಸೆಳೆದಿದ್ದ ಕ್ರಿಮಿನಲ್

ಅದು 2007 ರ ಸಮಯ ತನ್ನ ಡಿಫರೆಂಟ್ ಮ್ಯಾನರಿಸಂ ನಿಂದ ಜೈಲರ್ ಮತ್ತು ಪರಪ್ಪನ ಅಗ್ರಹಾರ ಬಂಧಿಖಾನೆ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಗಳ ಮೆಚ್ಚುಗೆ ಗಳಿಸಿದ್ದನು. ಕಣ್ಣುಮುಚ್ಚಿ ಚದುರಂಗ ಆಟವಾಡಿ ಗೆದ್ದು ನಿಬ್ಬೆರಾಗಾಗುವಂತೆ ಮಾಡುತ್ತಿದ್ದನು. ಗಂಟೆಗಟ್ಟಲೆ ಧ್ಯಾನಾರೂಢನಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದುಕೊಂಡು ಪುಸ್ತಕಗಳನ್ನು ಓದುತ್ತಾ ನಿರಂತರ ಅಭ್ಯಾಸದಲ್ಲಿ ನಿರತನಾಗಿರುತ್ತಿದ್ದನು. ಹೀಗೆ ಇತರೆ ಖೈದಿಗಳಿಗಿಂತ ಭಿನ್ನವಾಗಿ ಜೈಲಿನ ಅಧಿಕಾರಿಗಳಲ್ಲಿ ಸನ್ನಡತೆಯುಳ್ಳ ಖೈದಿ ಎನಿಸಿದ್ದನು. ಆದರೆ ಅದೊಂದು ದಿನ ತನ್ನ ಬೆಂಗಳೂರಿನ ಮಂಗನಪಾಳ್ಯದಲ್ಲಿರುವ ತಾಯಿಗೆ ಅನಾರೋಗ್ಯ ಎಂದು 30  ದಿನಗಳ ಪೆರೋಲ್ ಮೇಲೆ ತೆರಳಿದ್ದವ ವಾಪಾಸ್ ಆಗದೆ ಎಸ್ಕೇಪ್ ಆಗಿದ್ದವ ಮತ್ತೆ ಮಡಿವಾಳ ಪೊಲೀಸರಿಗೆ ಸೆರೆಸಿಕ್ಕಿದ್ದು ಉಪ್ಪಿನಂಗಡಿಯ ಅಲಕ್ಕಿ ಗ್ರಾಮದಲ್ಲಿ.

ಇದನ್ನೂ ಓದಿ: ಒಂದೇ ಕುಟುಂಬದ ಮೂರು ಜನರ ಸಾವು: ಆತ್ಮಹತ್ಯೆಯ ಹಿಂದಿದೆ ನಿಗೂಢ ಕಾರಣ

43 ವರ್ಷದ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ 15 ವರ್ಷದ ಬಳಿಕ ಸೆರೆಸಿಕ್ಕಿದ್ದೆ ರೋಚಕ

ಮೂಲತಃ ಬೆಂಗಳೂರಿನ ಮಂಗನಪಾಳ್ಯ ನಿವಾಸಿ, ಬರೋಬ್ಬರಿ 15 ವರ್ಷಗಳ ಕಾಲ ಪೊಲೀಸರಿಗೆ ಸಣ್ಣ ಕ್ಲ್ಯೂ ಕೂಡ ಸಿಗದಂತೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಅಲಕ್ಕಿ ಗ್ರಾಮದಲ್ಲಿ ಆಯುರ್ವೇದಿಕ್ ಮೆಡಿಸಿನ್ ಕೊಡುವುದರಲ್ಲಿ ಪರಿಣಿತನಾಗಿದ್ದ. ಕೇಸ್ ಪೈಲ್ ರೀ ಓಪನ್‌ ಮಾಡಿದ ಮಡಿವಾಳ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ. ಮೊದಲಿಗೆ 2000ನೇ ಇಸ್ವಿಯಲ್ಲಿ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿ ಕೇವಲ 2000 ಹಣಕ್ಕಾಗಿ ಮಗನೊಂದಿಗೆ ಗೂಡ್ಸ್ ಲಾರಿ ಚಾಲನೆ ಮಾಡಿಕೊಂಡು ಬರ್ತಿದ್ದ ಚಾಲಕನನ್ನ ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ ನಡೆಸಿ ಡಕಾಯಿತಿ ನಡೆಸಿದ್ದನು. ಇದರಿಂದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದನು. ಈ ಪ್ರಕರಣದಲ್ಲಿ ಆರೋಪಿಗಳೊಂದಿಗೆ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ ಕೂಡ ಬಂಧಿತನಾಗಿದ್ದನು. ಆ ಬಳಿಕ 2007 ರಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಪೆರೋಲ್ ಮೇಲೆ ತೆರಳಿ ಎಸ್ಕೇಪ್ ಆಗಿದ್ದ. ಈ ಹಿನ್ನೆಲೆ ಇದೆ ಕೃತ್ಯದಲ್ಲಿ ಪೊಲೀಸರು ಕ್ಲ್ಯೂ ಸಿಗಬಹುದೆಂದು ಅಂದಾಜಿಸಿ ವಿಚಾರಣೆ ನಡೆಸಿದ್ದರು, ಸುಹೇಲ್ ಅಲಿಯಾಸ್ ಮಹಮ್ಮದ್ ಅಯಾಜ್ ಕುರಿತು ದೇಹದ ಮೇಲಿನ ಗುರುತುಗಳ ಬಗ್ಗೆ ಮಾಹಿತಿ ನೀಡಿದ್ದ ವೇಣುಗೋಪಾಲ್.

ಸುಹೇಲ್ ಅಲಿಯಾಸ್​ ಮಹಮ್ಮದ್ ಅಯಾಜ್​ನ ಮತ್ತೊರ್ವ ಸಹಚರ 2017 ರಲ್ಲಿ ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅನಾಥ ಶವವಾಗಿ ಪತ್ತೆಯಾಗಿದ್ದನು. UDR ದಾಖಲಾದ ಪ್ರಕಾರದಲ್ಲಿ ಬಾಡಿ ದಫನ್ ಮಾಡುವ ವೇಳೆಗೆ ಶಂಕರ್ ಅನ್ನೋದನ್ನು ಗುರುತು ಪತ್ತೆ ಹಚ್ಚಿದ್ದನು. ಶಂಕರ್ ಪರಿಚಿತನೊಬ್ಬ ಚಾಮರಾಜನಗರ ಮೂಲದ ಸ್ನೇಹಿತ ದಿನೇಶ್ ಎಂಬಾತ ಉಪ್ಪಿನಂಗಡಿ ಕುರಿತು ಲಿಂಕ್ ಕೊಟ್ಟಿದ್ದನು. ಸಾಗರ್ ಎಂಟರ್ ಪ್ರೈಸಸ್ ಶಂಕರ್​ಗು ಲಿಂಕ್ ಇದ್ದು, ಆಗಾಗ ಉಪ್ಪಿನಂಗಡಿ ಹೋಗಿ ಬರ್ತಿದ್ದನೆಂದು ಡಿಜೆ ಹಳ್ಳಿಯ ಸ್ಟೇಟ್ ಮೆಂಟ್​ನಲ್ಲಿ ದಿನೇಶ್ ದಾಖಲು ಮಾಡಿದ್ದನು. GST ಕ್ಲ್ಯೂ ಆಧರಿಸಿ ಇಡೀ ಕೇಸ್ ಟ್ವಿಸ್ಟ್ ಪಡೆದುಕೊಳ್ಳತ್ತೆ. ಟೆಕ್ನಿಕಲ್ ಅನಾಲಿಸಿಸ್ ನಡೆಸಿ ಬ್ಯಾಗ್ ವ್ಯಾಪಾರ ಮಾಡ್ತಿದ್ದ ವ್ಯಕ್ತಿ ಯಾರು ಅನ್ನೋದನ್ನ ಪೊಲೀಸರು ಪತ್ತೆ ಹಚ್ಚಲು ಶುರುಮಾಡುತ್ತಾರೆ.

ಇದನ್ನೂ ಓದಿ: ಅತಿಥಿ ಶಿಕ್ಷಕನಿಂದ ವಿದ್ಯಾರ್ಥಿಯ ಕೊಲೆ, ಶಿಕ್ಷಕಿ ಮೇಲೆ ಹಲ್ಲೆ ಪ್ರಕರಣ: ಆರೋಪಿ ಮುತ್ತಪ್ಪನ ಬಂಧನ

ಹೆಸರು ಬದಲಿಸಿಕೊಂಡು, ಸುಹೇಲ್ ಅಲಿಯಾಸ್ ಮಹಮ್ಮದ್ ಅಯಾಜ್ ತಂದೆಯ ಹೆಸರನ್ನು ಶೇಕ್ ಸುಲೇಮಾನ್ ಎಂದು ಬದಲಿಸಿಕೊಂಡಿದ್ದನು. 2007 ರಲ್ಲಿ ಪೆರೋಲ್ ಮೇಲೆ ಹೊರ ಬಂದಿದ್ದವ, ಒಂದೆರಡು ವರ್ಷ ಶಿವಾಜಿನಗರದಲ್ಲಿ ತಲೆಮರೆಸಿಕೊಂಡು ಆ ಬಳಿಕ ಹಾಸನ ಸೇರಿ ಆಟೋ ಚಾಲಕನಾಗಿದ್ದನಂತೆ. ಹಾಸನದಲ್ಲಿ ಅಕ್ರಮ್ ಎಂಬಾತ ಪರಿಚಯವಾಗಿದ್ದನು. ಈ ಅಕ್ರಮ್ ಅಲಕ್ಕಿಯ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್​ನಿಗೆ ಕನ್ಯ ನೋಡಿ ಮದುವೆ ಮಾಡಿಸುತ್ತಾನೆ. ಆ ಬಳಿಕ ಹಾಸದಿಂದ ದಕ್ಣಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಗೆ ತೆರಳಿ ಬ್ಯಾಗ್ ಸೇಲ್ಸ್ ಬ್ಯುಸಿನೆಸ್ ಮಾಡುತ್ತಾ ಜತೆ ಜತೆಗೆ ಆಯುರ್ವೇದಿಕ್ ಮೆಡಿಸಿನ್ ಸೇಲ್ ಮಾಡುವ ಕೆಲಸದಲ್ಲಿ ಸುಹೇಲ್ ಅಲಿಯಾಸ್ ಮಹಮದ್ ಅಯಾಜ್ ಮಡದಿ ಮತ್ತು ಇಬ್ಬರ ಮಕ್ಕಳೊಂದಿಗೆ ಅಲಕ್ಕಿ ಗ್ರಾಮದಲ್ಲಿ ಸೆಟಲ್ ಆಗಿರ್ತಾ‌ನೆ. ಅಲಕ್ಕಿ ಗ್ರಾಮ ಪಂಚಾಯಿತಿ ಮೊರೆ ಹೋಗಿ ಮಹಮ್ಮದ್ ಅಯಾಜ್ ಮಾಹಿತಿ ಕಲೆಹಾಕಿದ್ದ ಮಡಿವಾಳ ಪೊಲೀಸರು.

ಟೆಕ್ನಿಕಲ್ ಅನಾಲಿಸಿಸ್ ನಡೆಸಿ ಕೊನೆಗೂ ಇದೇ ವ್ಯಕ್ತಿ ಸುಹೇಲ್ ಅಲಿಯಾಸ್ ಮೊಹಮ್ಮದ್ ಅಯಾಜ್ ಅನ್ನೋದನ್ನ ಖಾತರಿ ಪಡಿಸಿಕೊಂಡು‌ ಮಡಿವಾಳಠಾಣೆ ಪಿಎಸ್ ಐ. ಕಿಶೋರ್‌.ಬಿ.ಟಿ. ಅಂಡ್ ಟೀಂ ದಕ್ಣಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸ್ಥಳೀಯ ಪೊಲೀಸರ ನೆರವು ಪಡೆದು ಅಲಕ್ಕಿ ಗ್ರಾಮದ ಮನೆಗೆ ತೆರಳಿ ಕೊನೆಗೂ‌ ಲಾಕ್ ಮಾಡಿದ್ದಾರೆ. ಪೊಲೀಸರು ಲಾಕ್ ಮಾಡಿದ್ದ ಖಾತರಿಯಾಗಿದ್ದ ಕೂಡಲೇ ಆಯುರ್ವೇದಿಕ್ ಮೆಡಿಸನ್ ಕೊಡುವ ಪರಿಣತಿ ಹೊಂದಿದ್ದ ಪಾತಕಿ ಸಿಕ್ಕಿಬಿದ್ದು ನೀವೂ ಮಡಿವಾಳ ಪೊಲೀಸರು ಅಲ್ವೇ ಎಂದು ನಾನೇ ಸುಹೇಲ್ ಅಲಿಯಾಸ್ ಮಹಮ್ಮದ್ ಅಯಾಜ್ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮಡಿವಾಳ ಪೊಲೀಸರ 15 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ಹಂತಕನನ್ನ ಬಂಧಿಸಿ ಕರೆತಂದದ್ದನ್ನ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಸೇರಿದಂತೆ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವರದಿ- ಶಿವಪ್ರಸಾದ್ ಟಿವಿ9 ಬೆಂಗಳೂರು

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 am, Wed, 21 December 22

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ