ಬೆಂಗಳೂರು: ನಸಿಕನ ಜಾವ 5 ಗಂಟೆಗೆ ಸುಲಿಗೆಗೆ ಇಳಿದಿದ್ದ ಆಟೋ (Auto) ಡ್ರೈವರ್ ಹಾಗೂ ಮೂವರು ಮಂಗಳಮುಖಿಯರನ್ನು (Transgender) ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸ್ನೇಹಾ, ಅವಿಷ್ಕಾ, ದೀಪಿಕಾ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳು ಇತ್ತೀಚೆಗೆ ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿ ಹಣ ಕೇಳುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ ವೇಳೆ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ತಂಡ ಬೇರೆ ಬೇರೆ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೃತ್ಯ ಎಸಗಿದ್ದಾರೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಸರ್ಕಾರಿ ಕಚೇರಿ, ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಮನೆಗಳಲ್ಲಿನ ಯುಪಿಎಸ್ ಇನ್ನಿತರೆ ಬ್ಯಾಟರಿಗಳನ್ನು ಕದಿಯುತ್ತಿದ್ದ ಆರೋಪಿಗಳನ್ನು ಜೆಪಿ ನಗರ ಪೊಲೀಸರು ಬಂಧಸಿದ್ದಾರೆ. ಮಹಮದ್ ಹರ್ಷದ್, ಸೈಯದ್ ಯಾರಬ್, ಸಿದ್ಧಿಕಿ ಬಂಧಿತ ಆರೋಪಿಗಳು. ಕಳೆದ ಆರು ತಿಂಗಳಲ್ಲಿ 50ಕ್ಕೂ ಅಧಿಕ ಬ್ಯಾಟರಿಗಳನ್ನು ಕದ್ದಿದ್ದಾರೆ.
ಇದನ್ನೂ ಓದಿ: 15 ಮಹಿಳೆಯರನ್ನು ಮದುವೆಯಾದ ವ್ಯಕ್ತಿ ಅರೆಸ್ಟ್; ವಯಸ್ಸಾದ ಅವಿವಾಹಿತ ಮಹಿಳೆಯರೇ ಈತನ ಟಾರ್ಗೆಟ್
ಜಲಮಂಡಳಿ ಸೇವಾ ಠಾಣೆಯಲ್ಲಿ ಒಂದೇ ಕಡೆ ಐದು ಬ್ಯಾಟರಿ ಕದ್ದಿದ್ದಾರೆ. ಈ ಸಂಬಂಧ ದೂರು ನೀಡಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ವಿಚಾರಣೆ ವೇಳೆ ಸರಣಿ ಕಳ್ಳತನದ ಕಹಾನಿ ಬಾಯಿಬಿಟ್ಟಿದ್ದಾರೆ. ಸಣ್ಣಪುಟ್ಟ ಶೋಕಿ ಜೀವನಕ್ಕೆ ಕಳ್ಳತನ ಮಾಡುತ್ತಿದ್ದರು. ಆರೋಪಿಗಳಿಂದ 57 ಬ್ಯಾಟರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೆಪಿನಗರ ಪೊಲೀಸರಿಂದ ತನಿಖೆ ಮುಂದುವರಿದಿದೆ.
ನೆಲಮಂಗಲ: ಹೊರ ರಾಜ್ಯದ ವಿದ್ಯಾರ್ಥಿಯ ಎರಡು ಲ್ಯಾಪ್‌ಟಾಪ್, ಮೊಬೈಲ್ಗಳನ್ನು ಕಳುವು ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವಾರ ಎಜಿಬಿ ಲೇಔಟ್ನಲ್ಲಿ ನಡೆದಿದೆ. ಸಪ್ತಗಿರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ನಿಖಿಲ್ ಅವರ ವಸ್ತುಗಳು ಕಳ್ಳತನವಾಗಿವೆ. ರಾತ್ರಿ ಪಾಳೆಯ ಮುಗಿಸಿ ಬೆಳಗಿನ ಜಾವ ಬಾಗಿಲು ಹಾಕದೆ ಮಲಗಿದ್ದಾಗ ಘಟನೆ ನಡೆದಿದೆ. ಕಳ್ಳನ ಚಲನವಲನ ಸಿಸಿಕ್ಯಾಮಾರದಲ್ಲಿ ಸೆರೆಯಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 am, Tue, 11 July 23