ಪೋತ್ತನ್​​ಕೋಡ್ ಸುಧೀಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಒಟ್ಟಕಂ ರಾಜೇಶ್ ಬಂಧನ

Pothencode Sudheesh murder case ಡಿ.11ರಂದು ಪೋತ್ತನ್​​ಕೋಡ್ ಕಾಲೇಜಿನಲ್ಲಿ ಬೈಕ್‌ ಮತ್ತು ಆಟೋದಲ್ಲಿ ಬಂದಿದ್ದ ವ್ಯಕ್ತಿಗಳ ತಂಡ ಸುಧೀಶ್‌ನನ್ನು ಕಡಿದು ಹತ್ಯೆ ಮಾಡಿತ್ತು. ಗುಂಪಿನಿಂದ ತಪ್ಪಿಸಿಕೊಳ್ಳಲು ಮನೆಯೊಂದಕ್ಕೆ ಓಡಿಹೋದ ಜನರ ಗುಂಪು ಸುಧೀಶ್ ಅವರನ್ನು ಬೆನ್ನಟ್ಟಿದ್ದು, ದೇಹಕ್ಕೆ ಇರಿದು ಎರಡೂ ಕಾಲುಗಳನ್ನು ಕತ್ತರಿಸಿತ್ತು.

ಪೋತ್ತನ್​​ಕೋಡ್ ಸುಧೀಶ್ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಒಟ್ಟಕಂ ರಾಜೇಶ್ ಬಂಧನ
ಒಟ್ಟಕಂ ರಾಜೇಶ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 20, 2021 | 3:22 PM

ತಿರುವನಂತಪುರಂ: ಪೋತ್ತನ್​​ಕೋಡ್ ಸುಧೀಶ್ ಹತ್ಯೆ ಪ್ರಕರಣದ (Pothencode Sudheesh murder case) ಎರಡನೇ ಆರೋಪಿ ಒಟ್ಟಕಂ ರಾಜೇಶ್‌ನನ್ನು(‘Ottakam’ Rajesh) ಪೋತ್ತನ್​​ಕೋಡ್ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ರಾಜೇಶ್‌ನನ್ನು ಪೋತೆನ್‌ಕೋಡ್‌ಗೆ ಕರೆತರಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಪೊಲೀಸರನ್ನು ಇಲ್ಲಿ ನಿಯೋಜಿಸಲಾಗಿತ್ತು. ಬಂಧನವನ್ನು ದಾಖಲಿಸಿ ಸೋಮವಾರವೇ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪೊಲೀಸರ ಪ್ರಕಾರ ಸುಧೀಶ್​​ನನ್ನು ಕೊಂದು ನಾಪತ್ತೆಯಾಗಿದ್ದ ರಾಜೇಶ್ ಕೊಲ್ಲಂನಿಂದ ಪೊಲೀಸರು ಸೆರೆ ಹಿಡಿದಿದ್ದಾರೆ. ಪೊಲೀಸರ ಪ್ರಕಾರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ಕೇರಳಕ್ಕೆ(Kerala) ಮರಳುತ್ತಿದ್ದಾಗ ಕೊಲ್ಲಂ ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾನೆ.  ಡಿ.11ರಂದು ಪೋತ್ತನ್​​ಕೋಡ್ ಕಾಲೇಜು ಬಳಿ ಬೈಕ್‌ ಮತ್ತು ಆಟೋದಲ್ಲಿ ಬಂದಿದ್ದ ವ್ಯಕ್ತಿಗಳ ತಂಡ ಸುಧೀಶ್‌ನನ್ನು ಕಡಿದು ಹತ್ಯೆ ಮಾಡಿತ್ತು. ಗುಂಪಿನಿಂದ ತಪ್ಪಿಸಿಕೊಳ್ಳಲು ಮನೆಯೊಂದಕ್ಕೆ ಓಡಿಹೋದ ಜನರ ಗುಂಪು ಸುಧೀಶ್ ಅವರನ್ನು ಬೆನ್ನಟ್ಟಿದ್ದು, ದೇಹಕ್ಕೆ ಇರಿದು ಎರಡೂ ಕಾಲುಗಳನ್ನು ಕತ್ತರಿಸಿತ್ತು. ದಾಳಿಕೋರರು ಈ ಕಾಲುಗಳಲ್ಲಿ ಒಂದನ್ನು ಒಯ್ದಿದ್ದು, ನಂತರ ತುಂಡರಿಸಿದ ಕಾಲನ್ನು ರಸ್ತೆಯಲ್ಲಿ ಬಿಸಾಡಿದ್ದಾರೆ.

ಪ್ರಕರಣದಲ್ಲಿ ಒಟ್ಟು 11 ಆರೋಪಿಗಳಿದ್ದಾರೆ. ಈ ಪೈಕಿ ಹತ್ತು ಮಂದಿಯನ್ನು ಕಳೆದ ಕೆಲ ದಿನಗಳಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ ಎರಡನೇ ಆರೋಪಿ ಒಟ್ಟಕಂ ರಾಜೇಶನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಈತನಿಗಾಗಿ ಪೊಲೀಸರು ತಿರುವನಂತಪುರ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದರು. ಒಟ್ಟಕಂ ರಾಜೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಬೋಟ್‌ ಮುಳುಗಿ ಪೊಲೀಸ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ವರ್ಕಳ ಕ್ಯಾಶ್ ರಿಜಿಸ್ಟರ್ ಬಳಿ ಬೋಟ್ ಮಗುಚಿ ಬಿದ್ದಿದ್ದು, ಎಸ್.ಎ.ಪಿ. ಶಿಬಿರದಲ್ಲಿದ್ದ ಪೊಲೀಸ್ ಬಾಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟಕಂ ರಾಜೇಶ್ ದ್ವೀಪವೊಂದರಲ್ಲಿ ಅಡಗಿ ಕುಳಿತಿರುವ ಮಾಹಿತಿ ಪಡೆದ ಪೊಲೀಸ್ ತಂಡ ದೋಣಿ ಶೋಧಕ್ಕೆ ತೆರಳಿತ್ತು. ಅದೇ ವೇಳೆಗೆ ಕಳೆದ ಕೆಲ ದಿನಗಳಿಂದ ರಾಜೇಶ್ ಬಗ್ಗೆ ಪೊಲೀಸರಿಗೆ ಬಂದಿರುವ ಹಲವು ಮಾಹಿತಿಗಳು ತಪ್ಪು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ವೈರತ್ವದಿಂದಾಗಿ ಚೆಂಬಕಮಂಗಲಂ ಪುನ್ನೈಕ್ಕುನ್ನಂ ಉರುಕೋಣಂ ಲಕ್ಷಂವೀಡು ಕಾಲೋನಿಯಲ್ಲಿ ಹಾಡಹಗಲೇ ಸುಧೀಶ್ (32) ಎಂಬಾತನನ್ನು ಕೊಲೆಗೈದ ಪ್ರಕರಣದ ಹಿಂದೆ ಸಂಚು ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಡಿಐಜಿ ಸಂಜಯ್ ಕುಮಾರ್ ಗುರುದಿನ್ ಹೇಳಿದ್ದಾರೆ. ರಾಜೇಶ್ ಬಂಧನದ ನಂತರ ಪ್ರಕರಣದ ಎಲ್ಲಾ 11 ಆರೋಪಿಗಳನ್ನು ಬಂಧಿಸಲಾಗಿದೆ. ಭೀಕರ ಹತ್ಯೆ ನಡೆದ ಹತ್ತು ದಿನಗಳಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸಲಾಗಿತ್ತು. ಮೊದಲನೇ ಆರೋಪಿ ಸುಧೀಶ ಉಣ್ಣಿ ಎಂಬಾತನನ್ನು ಊರುಪೊಯ್ಕ ಮಂಕಟ್ಟುಮುಳ ಸ್ನೇಹಪುರಂ ಎಸ್‌ಎಸ್ ಭವನದಲ್ಲಿ ಹಾಗೂ ಮೂರನೇ ಆರೋಪಿ ಚೆಂಬಕಮಂಗಲಂ ಉರುಕೋಣಂ ಲಕ್ಷಂವೀಡು ಮುಠಾಯಿ ಶ್ಯಾಮಕುಮಾರ್​​ನ್ನುಭಾನುವಾರ ಬಂಧಿಸಲಾಗಿದೆ.

ಇದನ್ನೂ ಓದಿ: Omicron ದೆಹಲಿ, ಕರ್ನಾಟಕ, ಕೇರಳದಲ್ಲಿ ಮತ್ತಷ್ಟು ಒಮಿಕ್ರಾನ್ ಪ್ರಕರಣ ಪತ್ತೆ, ದೇಶದಲ್ಲಿ ಪ್ರಕರಣಗಳ ಸಂಖ್ಯೆ 167ಕ್ಕೆ ಏರಿಕೆ

Published On - 2:30 pm, Mon, 20 December 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್