ಸ್ಕೂಟಿಯಲ್ಲಿ ಹಿಂಬದಿಯಿಂದ ಬಂದು ಡಿಕ್ಕಿ, ಜಗಳ: ಕರ್ತವ್ಯನಿರತ PSI ತಲೆಗೆ ಕಲ್ಲಿನಿಂದ ಹಲ್ಲೆ
ಬೆಂಗಳೂರು: ಕರ್ತವ್ಯನಿರತ ಪ್ರೊಬೇಷನರಿ PSI ಮೇಲೆ ಚಾಲಕನೊಬ್ಬ ಹಲ್ಲೆಮಾಡಿರುವ ಘಟನೆ ಯಶವಂತಪುರ RTOಕಚೇರಿ ಬಳಿ ನಡೆದಿದೆ. ಯಶವಂತಪುರ ಠಾಣೆ PSI ಷರ್ಫುದ್ದೀನ್ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ, ಹಲ್ಲೆ ನಡೆಸಿದ ಆರೋಪಿ ಉದಯ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಕ್ರೈಂ ಡ್ಯೂಟಿ ಸಂಬಂಧ ಮಫ್ತಿಯಲ್ಲಿದ್ದ PSI ಷರ್ಫುದ್ದೀನ್ RTOಕಚೇರಿ ಬಳಿಯಿರುವ ಶಿವಣ್ಣ ಹೋಟೆಲ್ ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ, ಸ್ಕೂಟಿಯಲ್ಲಿ ಹಿಂಬದಿಯಿಂದ ಬಂದ ಉದಯ್ ಅಧಿಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. […]
ಬೆಂಗಳೂರು: ಕರ್ತವ್ಯನಿರತ ಪ್ರೊಬೇಷನರಿ PSI ಮೇಲೆ ಚಾಲಕನೊಬ್ಬ ಹಲ್ಲೆಮಾಡಿರುವ ಘಟನೆ ಯಶವಂತಪುರ RTOಕಚೇರಿ ಬಳಿ ನಡೆದಿದೆ. ಯಶವಂತಪುರ ಠಾಣೆ PSI ಷರ್ಫುದ್ದೀನ್ ಮೇಲೆ ಹಲ್ಲೆ ನಡೆಸಲಾಗಿದೆ. ಸದ್ಯ, ಹಲ್ಲೆ ನಡೆಸಿದ ಆರೋಪಿ ಉದಯ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ. ಕ್ರೈಂ ಡ್ಯೂಟಿ ಸಂಬಂಧ ಮಫ್ತಿಯಲ್ಲಿದ್ದ PSI ಷರ್ಫುದ್ದೀನ್ RTOಕಚೇರಿ ಬಳಿಯಿರುವ ಶಿವಣ್ಣ ಹೋಟೆಲ್ ಮುಂಭಾಗದಲ್ಲಿ ನಿಂತಿದ್ದರು. ಈ ವೇಳೆ, ಸ್ಕೂಟಿಯಲ್ಲಿ ಹಿಂಬದಿಯಿಂದ ಬಂದ ಉದಯ್ ಅಧಿಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಜಗಳ ತಾರಕಕ್ಕೇರಿದಾಗ ಆರೋಪಿ ಕಲ್ಲಿನಿಂದ PSI ತಲೆಗೆ ಹೊಡೆದಿದ್ದಾನೆ ಎಂದು ಹೇಳಲಾಗಿದೆ.
ಹಲ್ಲೆಯಿಂದ PSI ಷರ್ಫುದ್ದೀನ್ ತಲೆಗೆ ಗಂಭೀರ ಗಾಯಗಳಾಗಿದೆ. ಹಾಗಾಗಿ, ಅಧಿಕಾರಿಯನ್ನು ಸ್ಥಳೀಯ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಷರ್ಫುದ್ದೀನ್ ನೀಡಿದ ದೂರಿನನ್ವಯ ಉದಯ್ ಕುಮಾರ್ ಬಂಧನವಾಗಿದೆ.