ರಾಯಚೂರು: ಸರ್ಕಾರಿ ಬಸ್ ಡಿಕ್ಕಿ: ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಸಾವು

ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ರಾಯಚೂರು ತಾಲೂಕಿನ ಮಿಟ್ಟಿಮಲಕಾಪುರ ಬಳಿ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ. 

ರಾಯಚೂರು: ಸರ್ಕಾರಿ ಬಸ್ ಡಿಕ್ಕಿ: ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ಸಾವು
ಅಪಘಾತ
Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on:Feb 21, 2024 | 10:49 PM

ರಾಯಚೂರು, ಫೆಬ್ರವರಿ 21: ಸರ್ಕಾರಿ ಬಸ್ ಡಿಕ್ಕಿ (accident) ಹೊಡೆದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ರಾಯಚೂರು ತಾಲೂಕಿನ ಮಿಟ್ಟಿಮಲಕಾಪುರ ಬಳಿ ದುರ್ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಯರಗೇರಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಪರಶುರಾಮ್(30), ಗೋವಿಂದ(32), ರಾಘವೇಂದ್ರ(35) ಮೃತರು. ಮೃತಪಟ್ಟವರು ರಾಯಚೂರಿನ ಇಂದಿರಾನಗರದ ಕೃಷಿ ಕಾರ್ಮಿಕರು. ರಾಯಚೂರಿನಿಂದ ಮಂತ್ರಾಲಯ ಮಾರ್ಗವಾಗಿ ಬಸ್ ಹೊರಟಿದ್ದು, ರಾಯಚೂರು ಮಾರ್ಗವಾಗಿ ಬೈಕ್​ನಲ್ಲಿ ಸವಾರರು ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಮೂವರ ಶವಗಳು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ.

ರಾಯಚೂರು ವಿಶ್ವವಿದ್ಯಾಲಯ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್​ ಸವಾರ ಪ್ರಾಣೇಶ್(24)​ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ಆಂಜನೇಯನಿಗೆ ಗಾಯಗಳಾಗಿದ್ದು, ರಿಮ್ಸ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಓವರ್​ಟೇಕ್ ಮಾಡಲು ಹೋಗಿ ಲಾರಿಗೆ ಸಿಲುಕಿ ಸವಾರರಿಬ್ಬರ ಸಾವು

ಬೆಳಗಾವಿ: ಓವರ್​ಟೇಕ್ ಮಾಡಲು ಹೋಗಿ ಲಾರಿಗೆ ಸಿಲುಕಿ ಸವಾರರಿಬ್ಬರು ಸಾವನ್ನಪ್ಪಿರುವಂತಹ ಘಟನೆ  ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಬಳಿ ನಡೆದಿದೆ. ಬೈಕ್ ಸವಾರರಾದ ಬಾಳಪ್ಪ ಹೂಗಾರ, ಗದಗಯ್ಯ ಹಿರೇಮಠ ಮೃತರು. ಮೃತಪಟ್ಟ ಸವಾರರು ಮೂಡಲಗಿ ತಾಲೂಕಿನ ಅರಭಾವಿ ನಿವಾಸಿಗಳು. ಓವರ್​ಟೇಕ್ ಮಾಡುವಾಗ ಆಯತಪ್ಪಿ ಲಾರಿ ಕೆಳಗೆ ಬಿದಿದ್ದಾರೆ. ಸ್ಥಳಕ್ಕೆ ಯಮಕನಮರಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೆಡ್​ರೂಮ್​ಗೆ ನುಗ್ಗಿದ ಅಪರಿಚಿತನನ್ನು ಕೊಂದು ಪೊಲೀಸರಿಗೆ ಶರಣು

ಚಿಕ್ಕಬಳ್ಳಾಪುರ: ಬೆಡ್​ ರೂಮ್​ನಲ್ಲಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವಂತಹ ಘಟನೆ ಇಂದಿರಾ ನಗರದಲ್ಲಿ ನಡೆದಿದೆ. ವ್ಯಕ್ತಿಯ ಕೊಂದು ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆ. ರಾಘವೇಂದ್ರ ಕೊಲೆ ಮಾಡಿದ ಆರೋಪಿ. ಸಾದಲಿ ಮೂಲದ ಆಂಜಿನಪ್ಪ (35) ಕೊಲೆಯಾದ ವ್ಯಕ್ತಿ. ಮೃತ ವ್ಯಕ್ತಿ ಮನೆಯಲ್ಲಿ ಗೃಹಿಣಿ ಆಶಾ ಒಬ್ಬರೆ ಇದ್ದಾಗ ಬೆಡ್ ರೂಮ್​ಗೆ ನುಗ್ಗಿದ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಧಾರವಾಡ: ಆಸ್ತಿ ವಿವಾದ: ರಾಜಿ ಸಂಧಾನ ಮಾಡಿದ್ರೂ ತಮ್ಮನನ್ನೇ ಕೊಂದ ಅಣ್ಣ

ಮನೆಗೆ ವ್ಯಕ್ತಿ ನುಗ್ಗಿದ್ದನ್ನು ಕಂಡು ಆಶಾ ಮೈದನನಿಗೆ ಕರೆ ಮಾಡಿದ್ದಾರೆ. ತಕ್ಷಣ ಮನೆಗೆ ಬಂದ ರಾಘವೇಂದ್ರ ರಾಡ್​ನಿಂದ ಆಂಜಿನಪ್ಪಗೆ ಹೊಡೆದು ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ವಿಷಪೂರಿತ ಕಾಯಿ ತಿಂದು 25 ಮೇಕೆಗಳ ಸಾವು

ಕೊಪ್ಪಳ: ಗೌರಿಪುರದಲ್ಲಿ ವಿಷಪೂರಿತ ಕಾಯಿ ತಿಂದು 25 ಮೇಕೆಗಳು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ. ಲಕ್ಷಾಂತರ ರೂ. ಮೌಲ್ಯದ ಮೇಕೆಗಳನ್ನು ಕಳೆದುಕೊಂಡ ರೈತ ದ್ಯಾಮಣ್ಣ ಕಣ್ಣೀರು ಹಾಕಿದ್ದಾರೆ. ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ರೈತ ದ್ಯಾಮಣ್ಣ ಆಗ್ರಹ ಮಾಡಿದ್ದಾರೆ.

ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಬೆಂಗಳೂರು: ನಗರದಲ್ಲಿ ಸ್ಪ್ಲೆಂಡರ್ ಬೈಕ್​ಗಳನ್ನು ಕದ್ದು ಗ್ರಾಮಾಂತರ ಪ್ರದೇಶದಲ್ಲಿ ಮಾರಾಟ ಮಾಡುತ್ತಿದ್ದ ಶರತ್​ ಬಾಬುನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 20 ಲಕ್ಷ ರೂಪಾಯಿ ಮೌಲ್ಯದ 19 ಬೈಕ್​ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಹುಲಿವೇಷ ತಂಡದ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರಕ್ಕೆ ಸ್ಕೆಚ್​: ನಾಲ್ವರು ಪೊಲೀಸ್ ವಶಕ್ಕೆ

ಮತ್ತೊಂದು ಪ್ರಕರಣದಲ್ಲಿ ನೆಲಮಂಗಲ ಕೌಟುಂಬಿಕ ಕಲಹ ಹಿನ್ನೆಲೆ ರೈಲಿಗೆ ಸಿಲುಕಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆ ತರಬನಹಳ್ಳಿಯಲ್ಲಿ ನಡೆದಿದೆ. ಸುರೇಶ್ (43)ಮೃತ ದುರ್ದೈವಿ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:50 pm, Wed, 21 February 24