ಆನೇಕಲ್: ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ವ್ಯಕ್ತಿಗೆ ಚಾಕು ಇರಿದ ಸ್ನೇಹಿತರು
ಮದ್ಯದ ಪಾರ್ಟಿಯಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದೀಗ, ಬೆಂಗಳೂರು ಹೊರವಲಯದ ಆನೇಕಲ್ ಬಳಿಯ ನಾರಾಯಣಪುರದಲ್ಲಿ ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರೇ ಚಾಕು ಇರಿದ ಘಟನೆ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆನೇಕಲ್, ಫೆ.22: ಮದ್ಯದ ಪಾರ್ಟಿಯಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಇದೀಗ, ಬೆಂಗಳೂರು (Bengaluru) ಹೊರವಲಯದ ಆನೇಕಲ್ (Anekal) ಬಳಿಯ ನಾರಾಯಣಪುರದಲ್ಲಿ ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಬೇಗ ಕೊಡದ ಯುವಕನಿಗೆ ಸ್ನೇಹಿತರೇ ಚಾಕು ಇರಿದ ಘಟನೆ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ನಾರಾಯಣಪುರ ನಿವಾಸಿ ಮುರುಗೇಶ್ (42) ಇರಿತಕ್ಕೊಳಗಾದ ವ್ಯಕ್ತಿ. ಇದೇ ಊರಿನ ನಿವಾಸಿಗಳಾದ ಸತೀಶ್ ಮತ್ತು ನವೀನ್ ಎಂಬುವವರು ಚಾಕು ಇರಿದ ಆರೋಪಿಗಳಾಗಿದ್ದಾರೆ. ನಾರಾಯಣಪುರ ಸಮೀಪದ ಗುಲ್ಲಣ್ಣ ಲೇವೇಟ್ ಬಡಾವಣೆಯೊಂದರಲ್ಲಿ ಆರೋಪಿಗಳು ರಾತ್ರಿ ವೇಳೆ ಎಣ್ಣೆ ಪಾರ್ಟಿ ನಡೆಸುತ್ತಿದ್ದರು.
ಇದನ್ನೂ ಓದಿ: ಬೆಂಗಳೂರು: ತನ್ನ ತಂಗಿಯ ಎಂಗೇಜ್ಮೆಂಟ್ಗೆ ಬರ್ಲಿಲ್ಲ ಎಂದು ಪತ್ನಿಗೆ ಚಾಕು ಇರಿದು ಜೈಲು ಸೇರಿದ ಪತಿ
ರಾತ್ರಿ 12:30ರ ಸುಮಾರಿಗೆ ನೀರಿಗಾಗಿ ಮುರುಗೇಶ್ ಮನೆ ಬಾಗಿಲು ತಟ್ಟಿದ್ದಾರೆ. ಆದರೆ ನೀರು ಬೇಗ ಕೊಡಲಿಲ್ಲ ಎಂಬ ಕಾರಣಕ್ಕೆ ಆರೋಪಿಗಳು ಚಾಕುವಿನಿಂದ ತಲೆ, ಮುಖದ ಭಾಗಕ್ಕೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಾಳುವಿಗೆ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ