Rajasthan Crime: ಯುವತಿಯನ್ನು ಅಪಹರಿಸಿ, ಆ್ಯಸಿಡ್ ಎರಚಿ ಹತ್ಯೆ, ಬಾವಿಯಲ್ಲಿ ಶವ ಪತ್ತೆ

ಯುವತಿಯನ್ನು ಅಪಹರಿಸಿ, ಆ್ಯಸಿಡ್ ಎರಚಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

Rajasthan Crime: ಯುವತಿಯನ್ನು ಅಪಹರಿಸಿ, ಆ್ಯಸಿಡ್ ಎರಚಿ ಹತ್ಯೆ, ಬಾವಿಯಲ್ಲಿ ಶವ ಪತ್ತೆ
ಆ್ಯಸಿಡ್ ದಾಳಿ
Image Credit source: Deccan Herald

Updated on: Jul 14, 2023 | 9:52 AM

ಯುವತಿಯನ್ನು ಅಪಹರಿಸಿ, ಆ್ಯಸಿಡ್ ಎರಚಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ. ಆಕೆಯ ಶವ ಬಾವಿಯೊಳಗೆ ಪತ್ತೆಯಾಗಿದೆ. ಸಂಸದ ಕಿರೋಡಿ ಲಾಲ್ ಮೀನಾ ಸೇರಿದಂತೆ ಪ್ರತಿಪಕ್ಷ ಬಿಜೆಪಿ ನಾಯಕರು ಮತ್ತು ಯುವತಿಯ ಕುಟುಂಬ ಸದಸ್ಯರು ಶವದ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯ ಹೊರಗೆ ಧರಣಿ ನಡೆಸಿದರು.

ಕೂಡಲೇ ಆರೋಪಿಯನ್ನು ಬಂಧಿಸಿ 50 ಲಕ್ಷ ರೂಪಾಯಿ ಪರಿಹಾರ ಕೊಡಿಸಬೇಕು ಹಾಗೂ ತಮ್ಮ ಕುಟುಂಬದಲ್ಲಿ ಯಾರಿಗಾದರೂ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಮತ್ತಷ್ಟು ಓದಿ:ಪ್ರೀತಿಸಿ ಮದುವೆಯಾಗಿದ್ರು ಪತಿಯನ್ನ ಬಿಟ್ಟು ಪ್ರಿಯಕರನ ಜೊತೆ ವಾಸ; ಸಹಿಸದ ಗಂಡ, ಪತ್ನಿಯನ್ನ ಕೊಂದು ಮಗುವಿನ ಜೊತೆ ಎಸ್ಕೇಪ್

ತೋಡಭೀಮ್ ಪ್ರದೇಶದ ಮೋಹನಪುರ ನಿವಾಸಿಯಾಗಿರುವ ಯುವತಿ ಬುಧವಾರ ನಾಪತ್ತೆಯಾಗಿದ್ದಾರೆ ಎಂದು ನಡೌಟಿ ಎಸ್‌ಎಚ್‌ಒ ಬಾಬು ಲಾಲ್ ತಿಳಿಸಿದ್ದಾರೆ.

ಆಕೆಯನ್ನು ಅಪಹರಿಸಿ ನಂತರ ಕೊಲೆ ಮಾಡಲಾಗಿದೆ ಎಂದು ಆಕೆಯ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕಿ ಮೀನಾ, ಮಹಿಳೆಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.

 

ಮತ್ತಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us