Rajasthan: ಮಸೀದಿಯೊಳಗೆ ನುಗ್ಗಿ ಧರ್ಮಗುರುವನ್ನು ಹೊಡೆದು ಕೊಂದ ಮೂವರು ಮುಸುಕುಧಾರಿಗಳು

ಮಸೀದಿಯೊಳಗೆ ಬಂದು ಮೂವರು ಮುಸುಕುಧಾರಿಗಳು ಧರ್ಮಗುರುವನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ಮಹಿರ್ ಅವರು ಮಸೀದಿಯೊಳಗೆ ಆರು ಮಕ್ಕಳೊಂದಿಗೆ ಮಲಗಿದ್ದಾಗ ಈ ದಾಳಿ ಮಾಡಿದ್ದಾರೆ. ಮೂವರು ಮುಸುಕುಧಾರಿಗಳು ಮಸೀದಿಗೆ ನುಗ್ಗಿ ಮಕ್ಕಳನ್ನು ಬೆದರಿಸಿ, ಹೊರಗೆ ಓಡಿಸಿದ್ದಾರೆ. ಬಳಿಕ ಧರ್ಮಗುರು ಮೊಹಮ್ಮದ್ ಮಹಿರ್ ಅವರನ್ನು ಕೋಲುಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

Rajasthan: ಮಸೀದಿಯೊಳಗೆ ನುಗ್ಗಿ ಧರ್ಮಗುರುವನ್ನು ಹೊಡೆದು ಕೊಂದ ಮೂವರು ಮುಸುಕುಧಾರಿಗಳು

Updated on: Apr 29, 2024 | 5:14 PM

ಅಜ್ಮೀರ್‌, ಏ.29: ರಾಜಸ್ಥಾನದ (Rajasthan) ಅಜ್ಮೀರ್‌ನಲ್ಲಿ ಮಸೀದಿಯೊಳಗೆ ಬಂದು ಮೂವರು ಮುಸುಕುಧಾರಿಗಳು ಧರ್ಮಗುರುವನ್ನು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೊಹಮ್ಮದ್ ಮಹಿರ್ ಅವರು ಮಸೀದಿಯೊಳಗೆ ಆರು ಮಕ್ಕಳೊಂದಿಗೆ ಮಲಗಿದ್ದಾಗ ಈ ದಾಳಿ ಮಾಡಿದ್ದಾರೆ. ಮೂವರು ಮುಸುಕುಧಾರಿಗಳು ಮಸೀದಿಗೆ ನುಗ್ಗಿ ಮಕ್ಕಳನ್ನು ಬೆದರಿಸಿ, ಹೊರಗೆ ಓಡಿಸಿದ್ದಾರೆ. ಬಳಿಕ ಧರ್ಮಗುರು ಮೊಹಮ್ಮದ್ ಮಹಿರ್ ಅವರನ್ನು ಕೋಲುಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳೀಯರು ಮತ್ತು ಇತರ ಸಮುದಾಯದವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಮೊಹಮ್ಮದ್ ಮಹಿರ್ ಎರಡು ದಿನಗಳ ಹಿಂದೆಯಷ್ಟೇ ಅಜ್ಮೀರ್‌ಗೆ ಆಗಮಿಸಿ ಮಕ್ಕಳಿಗೆ ಪಾಠ ಮಾಡುತ್ತಿದ್ದರು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ; ಮಾಜಿ ಗೆಳತಿಯ ಕುತ್ತಿಗೆಗೆ 9 ಬಾರಿ ಇರಿದ ಪ್ರೇಮಿ, ಕೊಲ್ಲುವುದು ಹೇಗೆ ಎಂದು ಗೂಗಲ್​​ನಲ್ಲಿ ಹುಡುಕಿದ್ದ ಪಾಪಿ

ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಹೇಳಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us