ಮಾಜಿ ಗೆಳತಿಯ ಕುತ್ತಿಗೆಗೆ 9 ಬಾರಿ ಇರಿದ ಪ್ರೇಮಿ, ಕೊಲ್ಲುವುದು ಹೇಗೆ ಎಂದು ಗೂಗಲ್​​ನಲ್ಲಿ ಹುಡುಕಿದ್ದ ಪಾಪಿ

2022ರಲ್ಲಿ ಲಂಡನ್ ರೆಸ್ಟೋರೆಂಟ್‌ನಲ್ಲಿ ತನ್ನ ಮಾಜಿ ಗೆಳತಿಯನ್ನು ಒಂಬತ್ತು ಬಾರಿ ಇರಿದಿದು ಕೊಲೆ ಮಾಡಲು ಪ್ರಯತ್ನಸಿದ್ದಾನೆ. ಈ ಕೃತ್ಯ ಮಾಡಲು ಆತ ಗೂಗಲ್​​​​​ ಸಹಾಯ ತೆಗೆದುಕೊಂಡಿದ್ದಾನೆ. ಈ ಬಗ್ಗೆ ಆತನ ಆನ್​ಲೈನ್​​ ಹಿಸ್ಟರಿ ನೋಡಿದಾಗ ಗೊತ್ತಾಗಿದೆ. ಈ ಬಗ್ಗೆ ಸಂಪೂರ್ಣ ಸ್ಟೋರಿ ಇಲ್ಲಿದೆ.

ಮಾಜಿ ಗೆಳತಿಯ ಕುತ್ತಿಗೆಗೆ 9 ಬಾರಿ ಇರಿದ ಪ್ರೇಮಿ, ಕೊಲ್ಲುವುದು ಹೇಗೆ ಎಂದು ಗೂಗಲ್​​ನಲ್ಲಿ ಹುಡುಕಿದ್ದ ಪಾಪಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Apr 29, 2024 | 10:33 AM

ನಮ್ಮ ತಂತ್ರಜ್ಞಾನಗಳು ಎಷ್ಟು ಮುಂದುವರಿದೆ ಎಂದರೆ, ಅದರಲ್ಲೂ ಸೋಶಿಯಲ್​​​ ಮೀಡಿಯಾ ಎಲ್ಲವನ್ನು ತಲುಪಿಸುವುದರಲ್ಲಿ ಮುಂದು, ಅದು ಕೆಟ್ಟದಾಗಿರಲಿ, ಒಳ್ಳೆಯದಾಗಿರಲಿ. ಇಲ್ಲಿ ಒಬ್ಬ ಗೂಗಲ್ ನೋಡಿಕೊಂಡು ತನ್ನ ಗೆಳತಿಗೆ ಚಾಕುವಿನಿಂದ ಒಂಬತ್ತು ಬಾರಿ ಇರಿದಿದ್ದಾನೆ. ಈ ಘಟನೆ 2022ರಲ್ಲಿ ನಡೆದಿದೆ. ಆದರೆ ಕೊಲೆ ಮಾಡಲು ಆತನು ಗೂಗಲ್​ನಲ್ಲಿ ಹುಡುಕಿದ್ದಾನೆ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ. 2022 ರಲ್ಲಿ ಲಂಡನ್ ರೆಸ್ಟೋರೆಂಟ್‌ನಲ್ಲಿ ತನ್ನ ಮಾಜಿ ಗೆಳತಿಯನ್ನು ಒಂಬತ್ತು ಬಾರಿ ಇರಿದಿದ್ದಾನೆ. ಈ ಕೃತ್ಯ ಮಾಡಲು ಆತ ಗೂಗಲ್​​ ಸಹಾಯ ತೆಗೆದುಕೊಂಡಿದ್ದಾನೆ. ಈ ಬಗ್ಗೆ ಆತನ ಆನ್​ಲೈನ್​​ ಹಿಸ್ಟರಿ ನೋಡಿದಾಗ ಗೊತ್ತಾಗಿದೆ.

ಹೈದರಾಬಾದ್‌ನ 25 ವರ್ಷದ ಶ್ರೀರಾಮ್ ಅಂಬರಲಾ ಎಂಬಾತ ತನ್ನ ಮಾಜಿ ಗೆಳತಿ ಸೋನಾ ಬಿಜು (23) ಎಂಬಾಕೆ ಕೆಲಸ ಮಾಡುತ್ತಿದ್ದ ರೆಸ್ಟೊರೆಂಟ್‌ನಲ್ಲಿ ಮದುವೆಯಾಗುವಂತೆ ಪಿಡಿಸಿದ್ದಾನೆ, ಇದಕ್ಕೆ ಆಕೆ ಒಪ್ಪಿಲ್ಲ, ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ, ಸೋನಾ ಬಿಜು “ನಾನು ನಿನ್ನ ಜತೆಗೆ ಜೀವನ ಮಾಡಲು ಸಾಧ್ಯವಿಲ್ಲ” ಎಂದು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಶ್ರೀರಾಮ್ ಅಂಬರಲಾ ಆಕೆ ಕುತ್ತಿಗೆಯನ್ನು ಹಿಡಿದು ಒಂಬತ್ತು ಬಾರಿ ಇರಿದಿದ್ದಾನೆ. ಆದರೆ ಆಕೆಯನ್ನು ತಕ್ಷಣ ಆಸ್ಪತ್ರೆ ಕರೆದೊಯ್ಯುದ ಕಾರಣ ಬದುಕಿದ್ದಾಳೆ. ಸ್ಥಿತಿ ಮಾತ್ರ ಗಂಭೀರವಾಗಿತ್ತು. ಆಕೆ ಒಂದು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿಯೇ ಕಳೆಯಬೇಕಿತ್ತು.

ಲಂಡನ್‌ನಲ್ಲಿ ಅಂಬರ್ಲಾ ತಪ್ಪಿತಸ್ಥರೆಂದು ಸಾಬೀತಾಗಿದ್ದು, 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯ ವಿಚಾರಣೆಯ ಸಂದರ್ಭದಲ್ಲಿ, ಅಂಬರಲಾ ಈ ಕೃತ್ಯ ಮಾಡುವ ಕೆಲವೇ ಕ್ಷಣಗಳ ಮೊದಲು ಆನ್‌ಲೈನ್‌ನಲ್ಲಿ ಯುಕೆಯಲ್ಲಿ ವಿದೇಶಿಯರನ್ನು ಕೊಂದರೆ ಏನಾಗುತ್ತದೆ, ಚಾಕುವಿನಿಂದ ಯಾರನ್ನಾದರೂ ಕೊಲ್ಲುವುದು ಎಷ್ಟು ಸುಲಭ ಮತ್ತು ಒಬ್ಬನನ್ನು ಹೇಗೆ ಕೊಲ್ಲುವುದು ಎಂದು ಹುಡುಕಿದ್ದಾನೆ ಎಂದು ಕೋರ್ಟ್​​ ಮುಂದೆ ಹೇಳಲಾಗಿದೆ.

ಇದನ್ನೂ ಓದಿ: ಪತ್ನಿಯನ್ನು ಕೊಂದು ಆಕೆಯ ಇನ್ಶುರೆನ್ಸ್​ ಹಣದಲ್ಲಿ ಸೆಕ್ಸ್​ ಡಾಲ್​ ಖರೀದಿಸಿದ ಗಂಡ ಸೋನಾ ಬಿಜು ಮೇಲೆ ದಾಳಿ ಮಾಡುವ ಮೊದಲು, ಆಕೆಯನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಂದಿಸಿದ್ದಾನೆ. ಈ ಕಾರಣಕ್ಕೆ ಅವಳು ಆತನನ್ನು ಮದುವೆಯಾಗಲು ಒಪ್ಪಿಲ್ಲ ಎಂದು ಹೇಳಲಾಗಿದೆ. 2017ರಲ್ಲಿ ಹೈದರಾಬಾದ್ ಕಾಲೇಜಿನಲ್ಲಿ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿಯಾಗಿದೆ. ಕೆಲವು ದಿನಗಳ ನಂತರ ಇಬ್ಬರ ಸಂಬಂಧದಲ್ಲಿ ಬಿರುಕು ಉಂಟಾಗಿದೆ. ಪದೇ ಪದೇ ಅಂಬರಲಾ ಆಕೆಯ ಮನೆಗೆ ಅನಿರೀಕ್ಷಿತವಾಗಿ ಬರುವುದು, ಅವನನ್ನು ಮದುವೆಯಾಗುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ.

ಯುಕೆಯಲ್ಲಿ ನಡೆದಿದ್ದೇನು? ಇಲ್ಲಿದೆ ನೋಡಿ

ಸ್ವಲ್ಪ ದಿನಗಳ ನಂತರ ಇಬ್ಬರ ಸಂಬಂಧ ಸೇರಿ ಹೋಗಿತ್ತು. ಪದೇ ಪದೇ ಇಂತಹ ಜಗಳಗಳು ನಡೆಯುತ್ತಿತ್ತು. ಈ ಸಮಯದಲ್ಲಿ 2022ರಲ್ಲಿ, ಅಂಬರ್ಲಾ ಮತ್ತು ಬಿಜು ಇಬ್ಬರೂ ಈಸ್ಟ್ ಲಂಡನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿವನ್ನು ಪಡೆದು, 2022 ರಲ್ಲಿ UK ಗೆ ತೆರಳಿದರು, ಅಲ್ಲಿಯು ಕೂಡ ಈ ಜಗಳ ಮುಂದುವರಿದಿತ್ತು. ಅವಳು ಕೆಲಸ ಮಾಡುತ್ತಿದ್ದ ರೆಸ್ಟೊರೆಂಟ್​​ಗೆ ಆಗ್ಗಾಗೆ ಬರುತ್ತಿದ್ದ, ಒಂದು ದಿನ ಆಕೆಯ ಮನೆಯವರಿಗೆ ತನ್ನ ಮದುವೆಯಾಗುವ ಬಗ್ಗೆ ಹೇಳುವಂತೆ ಒತ್ತಾಯ ಮಾಡುತ್ತಿದ್ದ, ಈ ಚಿತ್ರಹಿಂಸೆಯನ್ನು ಕಂಡು ಆಕೆ ತನ್ನ ಮನೆಯವರಲ್ಲಿ ಹೇಳುತ್ತಾಳೆ. ಆದರೆ ಆಕೆಯ ಮನೆಯವರು ಕೂಡ ಈ ಮದುವೆಗೆ ಒಪ್ಪುವುದಿಲ್ಲ. ಅಂಬರ್ಲಾ ನಿನ್ನ ಮನೆಯವರನ್ನು ನಾನು ಭೇಟಿ ಮಾಡಬೇಕು ಎಂದು ಹೇಳುತ್ತಾನೆ. ನಂತರ ತನ್ನ ಪೋಷಕರನ್ನು ಬಿಜು ಅಂಬರ್ಲಾಗೆ ಭೇಟಿ ಮಾಡಿಸುತ್ತಾಳೆ. ಆದರೆ ಆತನ ಅಲ್ಲಿ ಅವರ ಜತೆಗೆ ತುಂಬಾ ಕೋಪದಿಂದ ಮಾತನಾಡಿ, ನಿಮ್ಮ ಮಗಳನ್ನು ನನ್ನ ಜತೆಗೆ ಮದುವೆ ಮಾಡಿಸಿ, ಇಲ್ಲವೆಂದರೆ ಆಕೆಯನ್ನು ಕೊಲ್ಲುವುದಾಗಿ ಹೇಳುತ್ತಾನೆ, ಬಿಜು ಕೂಡ ಇದಕ್ಕೆ ಒಪ್ಪುವುದಿಲ್ಲ. ತಕ್ಷಣ ಆಕೆಯ ಕುತ್ತಿಗೆಯನ್ನು ಹಿಡಿದು ಒಂಬತ್ತು ಬಾರಿ ಚಾಕುವಿನಿಂದ ಇರಿಯುತ್ತಾನೆ. ಆಕೆ ಪೋಷಕರ ಮುಂದೆಯೇ ಈ ಕೃತ್ಯವನ್ನು ಮಾಡುತ್ತಾನೆ ಎಂದು ಪೊಲೀಸರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:18 am, Mon, 29 April 24

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್