AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೆಲ್ಲಾ ರಾಜಕೀಯ; ದೇವೇಗೌಡರ ಕುಟುಂಬದ ಮೇಲೆ ಆರೋಪ ಇದೇ ಮೊದಲಲ್ಲ: ಎಚ್.ಡಿ. ರೇವಣ್ಣ ಪ್ರತಿಕ್ರಿಯೆ

HD Revanna Reaction on Sexual Assault Allegations: ಪ್ರಜ್ವಲ್ ರೇವಣ್ಣ ರಾಸಲೀಲೆ ವಿಡಿಯೋಗಳ ಪೆನ್ ಡ್ರೈವ್ ಹಗರಣದಲ್ಲಿ ಎಚ್.ಡಿ. ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಇಂಥ ಆರೋಪಗಳು ದೇವೇಗೌಡರ ಕುಟುಂಬಕ್ಕೆ ಹೊಸದಲ್ಲ. ಇದೆಲ್ಲಾ ರಾಜಕೀಯ ಎಂದು ಹೇಳಿದ್ದಾರೆ. ಸರ್ಕಾರ ಅವರದ್ದಿದೆ. ತನಿಖೆ ಮಾಡ್ತಾರೆ, ಮಾಡಲಿ. ಕಾನೂನಿನ ಪ್ರಕಾರ ಏನಿದೆಯೋ ಹಾಗೆ ಆಗಲಿ ಎಂದು ರೇವಣ್ಣ ಹೇಳಿದ್ದಾರೆ. ತಮ್ಮ ಮಗ ಪ್ರಜ್ವಲ್ ನಾಪತ್ತೆಯಾಗಿರುವ ಬಗ್ಗೆ ಹೇಳಿದ ರೇವಣ್ಣ, ತಾವೆಲ್ಲೂ ಓಡಿ ಹೋಗಿಲ್ಲ. ಆತ ವಿಚಾರಣೆಗೆ ಕರೆದರೆ ಬರುತ್ತಾನೆ ಎಂದಿದ್ದಾರೆ.

ಇದೆಲ್ಲಾ ರಾಜಕೀಯ; ದೇವೇಗೌಡರ ಕುಟುಂಬದ ಮೇಲೆ ಆರೋಪ ಇದೇ ಮೊದಲಲ್ಲ: ಎಚ್.ಡಿ. ರೇವಣ್ಣ ಪ್ರತಿಕ್ರಿಯೆ
3 ದಿನ ಆಪ್ತರು, ಕುಟುಂಬಸ್ಥರಿಗಿಲ್ಲ ರೇವಣ್ಣ ಭೇಟಿಗೆ ಅವಕಾಶ
TV9 Web
| Edited By: |

Updated on: Apr 29, 2024 | 2:20 PM

Share

ಬೆಂಗಳೂರು, ಏಪ್ರಿಲ್ 29: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ (Prajwal Revanna sex scandal) ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣದಲ್ಲಿ ಕೇಳಿಬಂದಿರುವ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ಅವರು ತಳ್ಳಿಹಾಕಿದ್ದಾರೆ. ತಮ್ಮ ಮಗ ಪ್ರಜ್ವಲ್ ರೇವಣ್ಣ ನಾಪತ್ತೆಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ರೇವಣ್ಣ, ಆತ ಎಲ್ಲೋ ಹೋಗಿರಬಹುದು. ಆದರೆ ವಿಚಾರಣೆಗೆ ಕರೆದರೆ ಬರುತ್ತಾನೆ ಎಂದು ಮಾಜಿ ಸಚಿವರೂ ಆದ ರೇವಣ್ಣ ಸ್ಪಷ್ಟಪಡಿಸಿದ್ದಾರೆ.

‘ನಾನೆಲ್ಲೂ ಓಡಿ ಹೋಗಿಲ್ಲ. ತನಿಖೆ ನಡೆಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ನಾವು ಕಾನೂನು ರೀತಿ ಈ ಪ್ರಕರಣವನ್ನು ಎದುರಿಸುತ್ತೇವೆ. ಪ್ರಜ್ವಲ್ ಹೋಗಬೇಕಿತ್ತು ಹೋಗಿದಾನೆ. ಕರೆದರೆ ಬರುತ್ತಾನೆ. ತನಿಖೆಗೆ ಕರೆದಾಗ ಪ್ರಜ್ವಲ್ ಬರ್ತಾನೆ’ ಎಂದು ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ಬಲತ್ಕಾರ ಮಾಡಿದ್ದಾರೆ: ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ

ದೇವೇಗೌಡರ ಫ್ಯಾಮಿಲಿ ಮೇಲೆ ಅಪವಾದ ಇದೇನು ಹೊಸದಲ್ಲ

ಇದೆಲ್ಲಾ ರಾಜಕೀಯ. ಸರ್ಕಾರ ಅವರದ್ದಿದೆ, ಏನು ಬೇಕಾದರೂ ಮಾಡಲಿ. ತನಿಖೆ ನಡೆಸಿ ಕಾನೂನಿನ ರೀತಿ ಏನಿದೆ ಅದಾಗಲಿ. ದೆವೇಗೌಡರ ಕುಟುಂಬದ ಮೇಲೆ ಆರೋಪ ಇವೇನೂ ಹೊಸದಲ್ಲ. ಮೊದಲಿಂದಲೂ ಇಂಥವನ್ನು ಎದುರಿಸಿದ್ದೇವೆ. ದೇವೇಗೌಡರ ಕುಟುಂಬದ ಮೇಲೆ ಲೋಕಾಯುಕ್ತ, ಸಿಐಡಿ ತನಿಖೆ ಇವೆಲ್ಲವನ್ನೂ ಎದುರಿಸಿದ್ದೇವೆ ಎಂದು ಹೊಳೆನರಸೀಪುರ ಶಾಸಕರಾದ ಅವರು ತಿಳಿಸಿದ್ದಾರೆ.

ಕಳೆದ ವಾರ ಚುನಾವಣೆಗೆ ಮುನ್ನ ಪ್ರಜ್ವಲ್ ರೇವಣ್ಣರ ಲೈಂಗಿಕ ದೌರ್ಜನ್ಯದ ಹಲವು ವಿಡಿಯೋಗಳಿದ್ದ ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬಂದಿತ್ತು. ನೂರಾರು ಮಹಿಳೆಯರ ಜೊತೆ ಪ್ರಜ್ವಲ್ ರಾಸಲೀಲೆ ನಡೆಸಿದ ವಿಡಿಯೋಗಳು ಇವು. ಕೆಲಸದ ಆಮಿಷ ಇತ್ಯಾದಿ ವಿಚಾರಗಳಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಪ್ರಜ್ವಲ್ ದುರುಪಯೋಗಪಡಿಸಿಕೊಂಡಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ಪೊಲೀಸ್​ ಅಧಿಕಾರಿಗಳು ಸೇರಿದಂತೆ 300-400 ಹೆಣ್ಣುಮಕ್ಕಳ ಮೇಲೆ ವಿಕೃತಿ ಮೆರೆದಿದ್ದಾರೆ: ಹೆಬ್ಬಾಳ್ಕರ್​

ಎಚ್ ಡಿ ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯದ ಆರೋಪಗಳಿವೆ. ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಅಪ್ಪ ಮತ್ತು ಮಗ ಪ್ರಮುಖ ಆರೋಪಿಗಳಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ