ಪತ್ನಿಯನ್ನು ಕೊಂದು ಆಕೆಯ ಇನ್ಶುರೆನ್ಸ್​ ಹಣದಲ್ಲಿ ಸೆಕ್ಸ್​ ಡಾಲ್​ ಖರೀದಿಸಿದ ಗಂಡ

ಪತಿಯೊಬ್ಬ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ಆಕೆಯ ಇನ್ಶುರೆನ್ಸ್​ ಹಣದಲ್ಲಿ ಸೆಕ್ಸ್​ ಟಾಯ್ ಖರೀದಿಸಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಆತ ಕೊಲೆ ಮಾಡಿ ವರ್ಷಗಳ ಬಳಿಕ ಆತ ಅಪರಾದಿ ಎಂಬುದು ತಿಳಿದುಬಂದಿದ್ದು ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಪತ್ನಿಯನ್ನು ಕೊಂದು ಆಕೆಯ ಇನ್ಶುರೆನ್ಸ್​ ಹಣದಲ್ಲಿ ಸೆಕ್ಸ್​ ಡಾಲ್​ ಖರೀದಿಸಿದ ಗಂಡ
Follow us
ನಯನಾ ರಾಜೀವ್
|

Updated on: Apr 29, 2024 | 9:37 AM

ಇದು 2019ರಲ್ಲಿ ಅಮೆರಿಕದ ಕಾನ್ಸಾಸ್​ನ ಹೇಸ್​ನಲ್ಲಿ ನಡೆದ ಘಟನೆ. ಕೋಲ್ಬಿ ಟ್ರಿಕಲ್​ ಎಂಬಾತ 911ಗೆ ಕರೆ ಮಾಡಿ ತನ್ನ ಪತ್ನಿ ಗುಂಡು ಹಾರಿಸಿಕೊಂಡಿದ್ದಾಳೆ ಬೇಗ ಬನ್ನಿ ಎಂದು ಹೇಳಿದ್ದ. ಪೊಲೀಸರು ತಕ್ಷಣಕ್ಕೆ ಅವರ ಮನೆ ತಲುಪಿದ್ದರು ಸಾವು ಅನುಮಾನಾಸ್ಪದವಾಗಿದ್ದರೂ ಕೋಲ್ಬಿ ಅವರನ್ನು ಬಿಡಲಾಯಿತು. ಏಕೆಂದರೆ ಡಾ. ನೂರ್ಧೋಕ್ ಅವರು ಕ್ರಿಸ್ಟನ್​ ಟ್ರಿಕಲ್ ಅವರ ಸಾವನ್ನು ಆತ್ಮಹತ್ಯೆ ಎಂದು ಘೋಷಿಸಿದ್ದರು.

ಪತಿಯನ್ನು ಬಿಟ್ಟು ಕಳುಹಿಸಿದ್ದರೂ ಕೂಡ ಪೊಲೀಸರಿಗಿದ್ದ ಅನುಮಾನ ಹಾಗೆಯೇ ಇತ್ತು, ಪತ್ನಿ ಸಾವಿಗೂ ಅವರಿಗೂ ಏನೋ ಸಂಬಂಧವಿದೆ ಎಂದೇ ಅಂದುಕೊಂಡಿದ್ದರು. ಕೆಲವು ತಿಂಗಳ ಬಳಿಕ ಕೋಲ್ಬಿ ಟ್ರಿಕಲ್, ತನ್ನ ಪತ್ನಿಯ 120,000 ಡಾಲರ್​ಗಿಂತ ಹೆಚ್ಚು ಮೊತ್ತದ ಎರಡು ಜೀವ ವಿಮಾ ಪಾಲಿಸಿಗಳ ಹಣ ನಗದೀಕರಿಸಿದ್ದ, ಅದಾದ ಬಳಿಕ 2,000ಡಾಲರ್​ ಖರ್ಚು ಮಾಡಿ ಅಂದರೆ ಸುಮಾರು 1.6 ಲಕ್ಷ ರೂ ಮೌಲ್ಯದ ಸೆಕ್ಸ್​ ಡಾಲ್​(Sex Doll)ನ್ನು ಕೂಡ ಖರೀದಿ ಮಾಡಿದ್ದ ಇದು ಪೊಲೀಸರಿಗೆ ಆಶ್ಚರ್ಯವನ್ನುಂಟು ಮಾಡಿತ್ತು.

ಕೋಲ್ಬಿ ಟ್ರಿಕಲ್ ತನ್ನ ಪತ್ನಿಯ ಸಾವಿನ ಬಳಿಕ ನೋವಿನಲ್ಲಿದ್ದಂತೆ ಕಾಣುತ್ತಿರಲಿಲ್ಲ, ತಮ್ಮ ಪ್ರೀತಿ ಪಾತ್ರರು ಮೃತಪಟ್ಟರೆ ಯಾರಾದರೂ ನೋವಿನಲ್ಲಿರುವುದು ಸಾಮಾನ್ಯ. ಪತ್ನಿ ಮೃತಪಟ್ಟು ಕೆಲವೇ ತಿಂಗಳುಗಳಲ್ಲಿ ಆತ ಆ ಗೊಂಬೆಯನ್ನು ಆರ್ಡರ್ ಮಾಡಿದ್ದ.

ಮತ್ತಷ್ಟು ಓದಿ: ವೈರಲ್ ವಿಡಿಯೋ: ಸೆಕ್ಸ್ ಟಾಯ್​​ ಕದಿಯಲು ಹೋಗಿ ಯಡವಟ್ಟು ಮಾಡಿಕೊಂಡ ಕಳ್ಳ!

ಪೊಲೀಸರು ಬಂದೂಕಿನ ಗಾತ್ರ, ಆಕೆ ಧರಿಸಿದ್ದ ಬಟ್ಟೆಗಳ ಬಗ್ಗೆ ಅನುಮಾನ ಹೊಂದಿದ್ದರು. ಅಷ್ಟೇ ಅಲ್ಲದೆ ಆ ದೊಡ್ಡ ಮೊತ್ತದ ವಿಮಾನ ಹಣವನ್ನು ಅವರು ಕೇವಲ 8 ತಿಂಗಳಲ್ಲಿ ಖರ್ಚು ಮಾಡಿದ್ದ, ಸಾವಿರಾರು ಡಾಲರ್​ಗಳನ್ನು ಖರ್ಚು ಮಾಡಿ ವಿಡಿಯೋ ಗೇಮ್​ ಹಾಗೂ ಸಂಗೀತ ಉಪಕರಣಗಳನ್ನು ಖರೀದಿಸಿದ್ದ.

ಸಾಯಲು ಯೋಚಿಸಿದವರ್ಯಾರು ಅಲಾರಂ ಇಡುವುದಿಲ್ಲ, ಅವರು ಕೆಲಸಕ್ಕೆ ಹೋಗಲು ನಿತ್ಯ ಅಲಾರಂ ಇಟ್ಟುಕೊಂಡಿರುತ್ತಿದ್ದರು. ಇನ್ನೂ ಕೆಲವು ಮಾನದಂಡಗಳನ್ನು ಬಳಸಿ ಕೊನೆಗೂ ಕೋಲ್ಬಿಯನ್ನು ತಪ್ಪಿತಸ್ಥನೆಂದು ತೀರ್ಪು ನೀಡಿದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್