ಪಿಎಸ್​ಐ ಮನೆಯಲ್ಲೇ ದರೋಡೆ, ಎಫ್​ಐಆರ್​ ದಾಖಲು: ಅನುಮಾನ ಹುಟ್ಟಿಸಿದ ಪೊಲೀಸರ ನಡೆ

| Updated By: ವಿವೇಕ ಬಿರಾದಾರ

Updated on: Aug 04, 2024 | 12:55 PM

ಅಶೋಕನಗರ ಪೊಲೀಸ್​ ಠಾಣೆ ಪಿಎಸ್ಐ ಪುಟ್ಟಸ್ವಾಮಿ ಮನೆ ದರೋಡೆಯಾಗಿ 25 ದಿನಗಳ ಕಳೆದಿದೆ. ಆದರೂ ಕೂಡ ಪೊಲೀಸರು ಇನ್ನೂ ವರೆಗೆ ಒಬ್ಬರನ್ನು ಬಂಧಿಸಿಲ್ಲ. ಮತ್ತು ಪ್ರಕರಣದ ತನಿಕೆ ಪ್ರಾರಂಭಿಕ ಹಂತದಲ್ಲಿದ್ದು ಪೊಲೀಸರ ಮೇಲೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪಿಎಸ್​ಐ ಮನೆಯಲ್ಲೇ ದರೋಡೆ, ಎಫ್​ಐಆರ್​ ದಾಖಲು: ಅನುಮಾನ ಹುಟ್ಟಿಸಿದ ಪೊಲೀಸರ ನಡೆ
ಪಿಎಸ್​ಐ ಪುಟ್ಟಸ್ವಾಮಿ
Follow us on

ಬೆಂಗಳೂರು, ಆಗಸ್ಟ್​ 04: ಅಶೋಕನಗರ ಪೊಲೀಸ್​ ಠಾಣೆ ಪಿಎಸ್ಐ ಪುಟ್ಟಸ್ವಾಮಿ (PSI Puttaswamy) ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ (Kormangala) ಪೊಲೀಸ್ (Police)​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕೋರಮಂಗಲ‌ ಪೊಲೀಸ್ ಠಾಣೆ ಹಿಂಭಾಗ ಪಿಎಸ್​ಐ ಪುಟ್ಟಸ್ವಾಮಿ ಮನೆ ಇದೆ. ಮನೆಗೆ ನುಗ್ಗಿದ ದರೋಡೆಕೋರರು ಪಿಎಸ್ಐ ಪುಟ್ಟಸ್ವಾಮಿ ಪತ್ನಿ ಅವರ ಕೈ, ಕಾಲು ಕಟ್ಟಿ, ಮನೆಯಲ್ಲಿದ್ದ 12 ಲಕ್ಷ ರೂ. ಹಣ ಕಳ್ಳತನ ಮಾಡಲಾಗಿದೆ ಎಂದು ಎಫ್ಐಆರ್​ನಲ್ಲಿ ದಾಖಲಾಗಿದೆ.

25 ದಿನದ ಹಿಂದೆ ಕಳ್ಳತನ ಆಗಿದೆ ಅಂತ ಎಫ್ಐಆರ್​ನಲ್ಲಿ ದಾಖಲಾಗಿದೆ. ಆದರೆ, ಪೊಲೀಸ್ ವೆಬ್ ಸೈಟ್​ನಲ್ಲಿ ಎಫ್ಐಆರ್ ಮಾಹಿತಿ ಇಲ್ಲ. ಕಳ್ಳತನವಾಗಿ 25 ದಿನಗಳೆದರೂ ಪ್ರಕರಣ ಪ್ರಾರಂಭಿಕ ಹಂತದಲ್ಲೇ ಇದೆ. ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪೊಲೀಸರ ಈ ನಡೆಯಿಂದ ಪಿಎಸ್ಐ ಮನೆಯಲ್ಲಿ ಕಳ್ಳತನವಾಗಿದ್ದು 12 ಲಕ್ಷ ಮಾತ್ರನಾ ಅಥವಾ 12 ಲಕ್ಷಕ್ಕೂ ಅಧಿಕ ಹಣ ಕಳತನವಾಗಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. 12 ಲಕ್ಷಕ್ಕಿಂತ ಹೆಚ್ಚಿನ ಹಣ ಇದ್ದಿದ್ದೇ ಆದರೆ ಯಾರಿಗೆ ಸೇರಿದ್ದು? ರಾಜಕಾರಣಿಯದ್ದಾ? ಪೊಲೀಸ್ ಅಧಿಕಾರಿಯದ್ದಾ? ಅಥವಾ ಉದ್ಯಮಿಗಳದ್ದಾ? ಎಂಬ ಮಾಹಿತಿ ನೀಡಲು ಪೊಲೀಸ್ ಇಲಾಖೆ ಹಿಂದೇಟು ಹಾಕುತ್ತಿರುವುದು ಯಾಕೆ? ಪ್ರಕರಣ ದಾಖಲಾಗಿ 20 ದಿನ ಕಳೆದರೂ ಕೋರಮಂಗಲ ಪೊಲೀಸರ ಮೌನವೇಕೆ? ಲಕ್ಷ ಲಕ್ಷ ಹಣದಲ್ಲಿ ಯಾರದ್ದೆಲ್ಲ ಪಾಲಿದೆ? ಎಂಬ ಪ್ರಶ್ನೆ ಉದ್ಭವವಾಗಿದೆ.

ಇದನ್ನೂ ಓದಿ: ಒಂಟಿ ಮನೆಯಲ್ಲಿದ್ದ ಅಜ್ಜಿಯ ಭೀಕರ ಕೊಲೆ; 15 ಸಾವಿರಕ್ಕೆ ನಡೀತು ಮರ್ಡರ್

ಇನ್ನೂವರೆಗು ಕಳ್ಳನನ್ನು ಪತ್ತೆ ಮಾಡಿಲ್ಲ ಯಾಕೆ? ಕೋರಮಂಗಲ ಪೊಲೀಸರ ಮೇಲೆಯೇ ಹಲವು ಅನುಮಾನ ಮೂಡಿವೆ. ಹಣ ಸಂಬಂಧಿಕರಿಗೆ ನೀಡಿ ಕಳ್ಳತನ ನಾಟಕವಾಡಿದರಾ ಪಿಎಸ್ಐ ಕುಟುಂಬಸ್ಥರು? ಪ್ರಕರಣದ ಸತ್ಯಾಸತ್ಯತೆಯನ್ನು ಕೋರಮಂಗಲ ಪೊಲೀಸರು ಹೊರ ಹಾಕುತ್ತಿಲ್ಲ.

ಸಿಸಿಟಿವಿ‌ ದೃಶ್ಯ ಪರಿಶೀಲನೆ ವೇಳೆ ಯಾರ ಸುಳಿವು ಇಲ್ಲ. ಪ್ರಕರಣದ ಮಾಹಿತಿ ಹಂಚಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪೊಲೀಸರೆಲ್ಲರು ಸೇರಿಕೊಂಡು ನಾಟಕ ಮಾಡಿದ್ರಾ? ಎಂಬ ಚರ್ಚೆ ಪೊಲೀಸ್ ಇಲಾಖೆಯಲ್ಲಿಯೇ ಆರಂಭವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:19 pm, Sun, 4 August 24