ಶಿವಮೊಗ್ಗ: ಒಂಟಿ ಮನೆಯಲ್ಲಿದ್ದ ಅಜ್ಜಿಯ ಭೀಕರ ಕೊಲೆ; 15 ಸಾವಿರಕ್ಕೆ ನಡೀತು ಮರ್ಡರ್

ಒಂಟಿ ಮನೆಯಲ್ಲಿರುವ ಅಜ್ಜಿ ಮನೆಗೆ ನುಗ್ಗಿ ದರೋಡೆ ಮಾಡಿದ ದರೋಡೆಕೋರರು ಅಜ್ಜಿಯನ್ನು ಕೊಲೆ ಮಾಡಿ, ಅಜ್ಜಿ ಬಳಿ ಇದ್ದ 15 ಸಾವಿರ ದೋಚಿಕೊಂಡು ಹೋಗಿದ್ದಾರೆ. ಮಲೆನಾಡಿನ ಹಳ್ಳಿಯಲ್ಲಿ ಅಜ್ಜಿ ಕೊಲೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಒಂಟಿ ಮನೆ ಅಜ್ಜಿ ಮರ್ಡರ್ ಕುರಿತು ಒಂದು ವರದಿ ಇಲ್ಲಿದೆ.

ಶಿವಮೊಗ್ಗ: ಒಂಟಿ ಮನೆಯಲ್ಲಿದ್ದ ಅಜ್ಜಿಯ ಭೀಕರ ಕೊಲೆ; 15 ಸಾವಿರಕ್ಕೆ ನಡೀತು ಮರ್ಡರ್
ಶಿವಮೊಗ್ಗ: ಒಂಟಿ ಮನೆಯಲ್ಲಿದ್ದ ಅಜ್ಜಿಯ ಭೀಕರ ಕೊಲೆ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2024 | 10:17 PM

ಶಿವಮೊಗ್ಗ, ಆ.03: ತೀರ್ಥಹಳ್ಳಿ(Thirthahalli) ತಾಲೂಕಿನ ಮಂಜರಿಕೊಪ್ಪ ಗ್ರಾಮದಲ್ಲಿ ನಿನ್ನೆ(ಶನಿವಾರ) ಬೆಳಗ್ಗೆ ಸುಮಾರು 10. 30 ಘಂಟೆಗೆ ದರೋಡೆಕೋರರು ಒಂಟಿ ಮನೆಗೆ ನುಗ್ಗಿದ್ದಾರೆ. ಮೃತ ಸಾವಿತ್ರಮ್ಮ (60) ಅಜ್ಜಿಯು ಬ್ಯಾಂಕ್​ಗೆ ಹೋಗಿ ಒಂದಿಷ್ಟು ಹಣ ತೆಗೆದುಕೊಂಡು ಬಂದು ಮನೆಯಲ್ಲಿ ಇಟ್ಟಿರುವುದನ್ನು ಕಳ್ಳರು ಗಮನಿಸಿದ್ದರು. ಹೀಗೆ ಅಜ್ಜಿ ಒಬ್ಬಳೇ ಇರುವುದನ್ನು ಅರಿತಿದ್ದ ಖದೀಮರು ಮನೆಗೆ ಎಂಟ್ರಿಕೊಟ್ಟು ಅಜ್ಜಿ ಬಳಿ ಇದ್ದ ನಗದು ಕಿತ್ತುಕೊಂಡಿದ್ದಾರೆ. ಈ ವೇಳೆ ಅಜ್ಜಿ ದರೋಡೆಗೆ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಕುಪಿತಗೊಂಡ ದರೋಡೆಕೋರರು ಅಜ್ಜಿ ಮೇಲೆ ದೊಣ್ಣೆಯಿಂದ ದಾಳಿ ನಡೆಸಿ, ಹತ್ಯೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

ಅಕ್ಕ-ಪಕ್ಕದ ಗ್ರಾಮಸ್ಥರು ಸಂಜೆ ನೋಡಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕುಂಸಿ ಪೊಲೀಸ್ ಠಾಣೆಗೆ ಕೊಲೆಯ ಕುರಿತು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕುಂಸಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಅಜ್ಜಿಗೆ ಮೂವರು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಮತ್ತು ಓರ್ವ ಪುತ್ರ ಇದ್ದಾನೆ. ಮೃತ ಅಜ್ಜಿ, ಮನೆಯಲ್ಲಿ ಒಂಟಿಯಾಗಿ ವಾಸ ಮಾಡುತ್ತಿದ್ದು, ಕಳೆದ ಆರು ತಿಂಗಳ ಹಿಂದೆ ಅಜ್ಜಿ ಮನೆಯಲ್ಲಿದ್ದ 50 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಇದರ ನಂತರ ಹಣಕ್ಕಾಗಿ ಅಜ್ಜಿಯನ್ನೇ ಮರ್ಡರ್ ಮಾಡಿ ಅವರು ಎಸ್ಕೇಪ್ ಆಗಿದ್ದಾರೆ. ಗ್ರಾಮಸ್ಥರು ಈ ಕೊಲೆ ಪ್ರಕರಣದಿಂದ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಸಾಲದ ವಿಚಾರಕ್ಕೆ ಕೊಲೆ; ಸುತ್ತಿಗೆಯಿಂದ ಹೊಡೆದು ಪಕ್ಕದ ಮನೆಯಾಕೆಯನ್ನು ಕೊಂದ ಮಹಿಳೆ

15 ಸಾವಿರ ಹಣಕ್ಕಾಗಿ ಅಜ್ಜಿಯ ಮರ್ಡರ್

ಅಜ್ಜಿ ಕೊಲೆ ಪ್ರಕರಣದಿಂದ ಇಡೀ ಗ್ರಾಮಸ್ಥರೆಲ್ಲರೂ ಬೆಚ್ಚಿಬಿದ್ದಿದ್ದಾರೆ. ಬೆಳ್ಳಂ ಬೆಳಗ್ಗೆ ಒಂಟಿ ಮನೆಗೆ ನುಗ್ಗಿ ದರೋಡೆಕೊರರು ಕೇವಲ 15 ಸಾವಿರ ಹಣಕ್ಕಾಗಿ ಅಜ್ಜಿಯ ಮರ್ಡರ್ ಮಾಡಿದ್ದಾರೆ. ಅಜ್ಜಿಯನ್ನು ಗಮನಿಸಿದ ದರೋಡೆಕೋರರು ಪ್ಲ್ಯಾನ್ ಮಾಡಿ ಮರ್ಡರ್ ಮಾಡಿದ್ದಾರೆ. ಅಜ್ಜಿ ಬಳಿ ಇದ್ದ 15 ಸಾವಿರ ನಗದು ದೋಚಿದ್ದಾರೆ. ಅಜ್ಜಿ ಮನೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಎರಡು ಸಾವಿರ ಹಣ ಮತ್ತು ಎರಡು ಚೀಲ ತೆಂಗಿನಕಾಯಿ ಕಳ್ಳತನವಾಗಿತ್ತು. ಒಂಟಿ ಅಜ್ಜಿ ಮನೆಯನ್ನೇ ಕಳ್ಳರು ದರೋಡೆಕೋರರು ಟಾರ್ಗೇಟ್ ಮಾಡಿದ್ದರು.

ಈ ಕಳ್ಳತನ ಕುರಿತು ಅಜ್ಜಿಯು ದೂರು ನೀಡಿರಲಿಲ್ಲ. ಈ ಘಟನೆ ನಡೆದು ಎರಡು ದಿನಗಳ ಬಳಿಕ ಅಜ್ಜಿ ಮರ್ಡರ್ ಆಗಿದೆ. ಹಾಲಿನ ಸಬ್ಸಿಡಿ ಹಣ ಅಜ್ಜಿ ಖಾತೆಗೆ ಜಮಾ ಆಗಿತ್ತು. ಈ ಸಬ್ಸಿಡಿ 15 ಸಾವಿರ ರೂಪಾಯಿ ಹಣವನ್ನು ಹತ್ತಿರದ ಸಿರಿಗೆರೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಂದ ತೆಗೆದುಕೊಂಡು ಹೋಗಿದ್ದಳು. ಈ ಹಣ ತೆಗೆದುಕೊಂಡು ಹೋಗಿರುವುದು ನೋಡಿದ ದರೋಡೆಕೋರರು ಅಜ್ಜಿಯ ಮನೆಗೆ ನುಗ್ಗಿ ಕೊಲೆ ಮಾಡಿದ್ದರು. ಯಾರೋ ಪರಿಚಯಸ್ಥರೇ ಅಜ್ಜಿಯ ಕೊಲೆ ಮಾಡಿರುವ ಅನುಮಾನ ಪೊಲೀಸರಿಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಅಜ್ಜಿಯ ಕೊಲೆ ಪ್ರಕರಣದ ಕುರಿತು ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆದಷ್ಟು ಬೇಗ ಹಂತಕರನ್ನು ಪೊಲೀಸರು ಪತ್ತೆ ಮಾಡುವ ಮೂಲಕ ಗ್ರಾಮಸ್ಥರ ಆಂತಕವನ್ನು ದೂರ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?