Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕಲೇಶಪುರ ಪೊಲೀಸ್​ ಕಾನ್ಸ್​ಟೇಬಲ್​ ಆತ್ಮಹತ್ಯೆ

ಹಾಸನ ಸಕಲೇಶಪುರದ ಪೊಲೀಸ್​ ಕ್ವಾರ್ಟರ್ಸ್​ನಲ್ಲಿ ಕಾನ್ಸ್​ಟೇಬಲ್​ ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಕಲೇಶಪುರದಲ್ಲಿ 112 ಪೊಲೀಸ್ ವಾಹನದ ಚಾಲಕನಾಗಿ ಸೋಮಶೇಖರ್ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಕಲೇಶಪುರ ಪೊಲೀಸ್​ ಕಾನ್ಸ್​ಟೇಬಲ್​ ಆತ್ಮಹತ್ಯೆ
ಸಕಲೇಶಪುರ ಪೊಲೀಸ್​ ಕಾನ್ಸ್​ಟೇಬಲ್​ ಆತ್ಮಹತ್ಯೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 19, 2024 | 11:08 AM

ಹಾಸನ, ಜನವರಿ 19: ಸಕಲೇಶಪುರದ (Sakleshpur) ಪೊಲೀಸ್​ ಕ್ವಾರ್ಟರ್ಸ್​ನಲ್ಲಿ ಕಾನ್ಸ್​ಟೇಬಲ್​ (police constable) ಸೋಮಶೇಖರ್ (39) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಕಲೇಶಪುರದಲ್ಲಿ 112 ಪೊಲೀಸ್ ವಾಹನದ ಚಾಲಕನಾಗಿ ಸೋಮಶೇಖರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿ ಸೋಮಶೇಖರ್ ವಿರುದ್ಧ ಕಿರುಕುಳ ಆರೋಪ ಮಾಡಿ ಪತ್ನಿ DySPಗೆ ದೂರು ನೀಡಿದ್ದರು. ಇದರಿಂದ ಮನನೊಂದು ಸೋಮಶೇಖರ್ ಆತ್ಮಹತ್ಯೆ (suicide) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಲೋನ್ ಪಡೆದಿದ್ದ ಐವರ ಗ್ಯಾಂಗ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಲೋನ್ ಪಡೆದಿದ್ದ ಐವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವೃದ್ಧೆಯೊಬ್ಬರ ಮನೆಯ ಮೇಲೆ ಲೋನ್ ಪಡೆದು ಈ ಗ್ಯಾಂಗ್​​ನವರು ವಂಚನೆ ಎಸಗಿದ್ದರು.

ಇದನ್ನೂ ಓದಿ: ಛೇ! ಪ್ರೇಮ ಕಾವ್ಯದ ದುರಂತ ಅಂತ್ಯ… ಮದುವೆಯಾದ 8 ತಿಂಗಳಿಗೆ ಸುಂದರಿಯೊಬ್ಬಳು ನೇಣಿಗೆ ಶರಣು: ಕಾರಣವೇನು ಗೊತ್ತಾ!?

ವೃದ್ಧೆ ಮನೆ ಮಾರಾಟ ಮಾಡಿ‌ ವಿದೇಶಕ್ಕೆ‌ ತೆರಳಲು ತೀರ್ಮಾನಿದ್ದರು. ಈ ವಿಚಾರವನ್ನು ಪಕ್ಕದ ಮನೆಯ ನಿವಾಸಿ ಮಂಜುನಾಥ್ ಬಳಿ ಹೇಳಿಕೊಂಡಿದ್ದರು. ಈ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡ ಮಂಜುನಾಥ, ತನ್ನ ಸ್ನೇಹಿತರ ಜೊತೆಗೆ ಸೇರಿ ಲೋನ್ ಪಡೆದು ವಂಚನೆ ಎಸಗಿದ್ದಾನೆ. ಪ್ರಕರಣದ ತನಿಖೆ ನಡೆಸಿದಾಗ ಬ್ಯಾಂಕ್ ಮ್ಯಾನೇಜರ್ ಗಳ ಯಡವಟ್ಟು ಬಯಲಿಗೆ ಬಂದಿದೆ.

ಕಪಿಲಾ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲು:

ಕಪಿಲಾ ನದಿಯಲ್ಲಿ ಮುಳುಗಿ ಮೂವರು ಅಯ್ಯಪ್ಪ ಮಾಲಾಧಾರಿಗಳು ಜಲಸಮಾಧಿಯಾಗಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡಿನ ಹೆಜ್ಜಿಗೆ ಸೇತುವೆ ಬಳಿ ಘಟನೆ ನಡೆದಿದೆ. ಮೃತ ಮೂವರು ತುಮಕೂರು ಮೂಲದ ನಿವಾಸಿಗಳು. ಸ್ನಾನ ಮಾಡಲು 6 ಮಂದಿ ನದಿಗೆ ಇಳಿದಿದ್ದಾಗ ದುರಂತ ನಡೆದಿದೆ. ಅದರಲ್ಲಿ ಮೂವರು ಮಾಲಾಧಾರಿಗಳು ನದಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಉಳಿದ ಮೂವರು ಕೊಡಗು ಮೂಲದವರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:29 am, Fri, 19 January 24