ಮುಂಬೈ: ರಸ್ತೆ ಬದಿಯ ಸಣ್ಣ ಹೋಟೆಲ್ಗೆ ಹೋದ ಗ್ರಾಹಕನೊಬ್ಬ ಆಮ್ಲೆಟ್ ಆರ್ಡರ್ ಮಾಡಿದ. ತನಗೆ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ಆತ ರೇಗಾಡಿದ್ದರಿಂದ ಕೋಪಗೊಂಡ ಆ ಅಂಗಡಿಯ ಮಾಲೀಕ ಆ ಗ್ರಾಹಕನ ತಲೆಗೆ ಬಿಸಿಯಾದ ಬಾಣಲೆಯಿಂದ ಹೊಡೆದಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ. ಆಮ್ಲೆಟ್ ಮಾರಾಟಗಾರನೊಬ್ಬ ನೀಡಿದ ಆಮ್ಲೆಟ್ ಸೀದು ಹೋಗಿದೆ ಎಂದು ದೂರಿದ್ದರಿಂದ ಗ್ರಾಹಕನ ತಲೆಗೆ ಬಿಸಿ ಬಾಣಲೆಯಿಂದ ಹೊಡೆದ ಆರೋಪದ ಮೇಲೆ ಆ ಅಂಗಡಿಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ನಾಗ್ಪುರದ ಸಿತಾಬುಲ್ಡಿ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ತನ್ನ ಗ್ರಾಹಕನಿಗೆ ಬಾಣಲಿಯಿಂದ ಹೊಡೆದ ಆರೋಪಿಯನ್ನು ವಿನೋದ್ ರಾಥೋಡ್ (48) ಎಂದು ಗುರುತಿಸಲಾಗಿದ್ದು, ಹಲ್ಲೆಗೊಳಗಾದ ವ್ಯಕ್ತಿ ಅಮರಾವತಿ ನಿವಾಸಿ ಸಂದೀಪ್ ಸಾಯರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಯಾರೆ ಸಮೀಪದ ರೈಲ್ವೇ ನಿಲ್ದಾಣದಲ್ಲಿ ಇಳಿದು ಸಂದೀಪ್ ಸಾಯರೆ 40 ರೂ. ಬೆಲೆಯ ಆಮ್ಲೆಟ್ ಆರ್ಡರ್ ಮಾಡಿದ್ದರು. ಆದರೆ, ಆ ಅಂಗಡಿಯವನು ಕೊಟ್ಟ ಆಮ್ಲೆಟ್ ಸುಟ್ಟು ಹೋಗಿದ್ದರಿಂದ ಅದರ ಬದಲಾಗಿ ಬೇರೆ ಆಮ್ಲೆಟ್ ನೀಡುವಂತೆ ಆತ ಒತ್ತಾಯಿಸಿದ್ದ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಸಣ್ಣ ವಾಗ್ವಾದವೂ ನಡೆದಿತ್ತು. ನಂತರ ಆ ಅಂಗಡಿಯ ಮಾಲೀಕ ಸಂದೀಪ್ ತಲೆಗೆ ಬಿಸಿ ಬಾಣಲೆಯಿಂದ ಹೊಡೆದಿದ್ದಾನೆ.
ಸಂದೀಪ್ ರಾಥೋಡ್ ಸಾಯರೆಗೆ ಹೊಡೆದಿದ್ದಕ್ಕಾಗಿ ಐಪಿಸಿ ಸೆಕ್ಷನ್ 324 ಮತ್ತು 504ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂದೀಪ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Shocking News: ತಣ್ಣಗಾದ ಐಸ್ ಕ್ರೀಂ ಕೊಟ್ಟಿದ್ದಕ್ಕೆ ರೆಸ್ಟೋರೆಂಟ್ನಿಂದ ಹಣ ವಾಪಾಸ್ ಕೇಳಿದ ಗ್ರಾಹಕ!
Viral Photo: ಕುಕ್ಕರ್ ಜೊತೆ ಮದುವೆಯಾಗಿ ಎರಡೇ ದಿನಕ್ಕೆ ಡೈವೋರ್ಸ್ ನೀಡಿದ ಯುವಕ; ಕಾರಣವೇನು ಗೊತ್ತಾ?