Shocking News: ರಾಜಸ್ಥಾನ- ಪಾಕಿಸ್ತಾನದ ಗಡಿಯಲ್ಲಿ ಮಾತು ಬಾರದ, ಕಿವಿ ಕೇಳದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

20 ವರ್ಷದ ಯುವತಿ ಹೊಲದ ಬಳಿ ದನಗಳನ್ನು ಮೇಯಿಸಲು ಹೋಗಿದ್ದಾಗ ನಾಲ್ವರು ಯುವಕರು ಬೊಲೆರೊದಲ್ಲಿ ಬಂದು, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

Shocking News: ರಾಜಸ್ಥಾನ- ಪಾಕಿಸ್ತಾನದ ಗಡಿಯಲ್ಲಿ ಮಾತು ಬಾರದ, ಕಿವಿ ಕೇಳದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಸಾಂದರ್ಭಿಕ ಚಿತ್ರ
Edited By:

Updated on: Nov 25, 2022 | 2:12 PM

ಬರ್ಮರ್: ರಾಜಸ್ಥಾನ ಮತ್ತು ಪಾಕಿಸ್ತಾನದ ಗಡಿ ಜಿಲ್ಲೆಯಾದ ಬರ್ಮರ್​ನ (Barmer) ಧೋರಿಮನ್ನಾ ಪಟ್ಟಣದಲ್ಲಿ ಗುರುವಾರ ರಾತ್ರಿ 20 ವರ್ಷದ ಕಿವಿ ಕೇಳದ ಮತ್ತು ಮಾತು ಬಾರದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆಸಲಾಗಿದೆ. ರಕ್ತಸಿಕ್ತ ಸ್ಥಿತಿಯಲ್ಲಿದ್ದ ಆಕೆಯನ್ನು ಬಳಿಕ ರಸ್ತೆಯಲ್ಲಿ ಬಿಸಾಡಿದ ಕಾಮುಕರು ಅಲ್ಲಿಂದ ಪರಾರಿಯಾಗಿದ್ದಾರೆ. ಆಕೆಯನ್ನು ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

ರಾಜಸ್ಥಾನದ ಬರ್ಮರ್ ಜಿಲ್ಲೆಯ ಪೊಲೀಸರ ಪ್ರಕಾರ, ಆ 20 ವರ್ಷದ ಯುವತಿ ಹೊಲದ ಬಳಿ ದನಗಳನ್ನು ಮೇಯಿಸಲು ಹೋಗಿದ್ದಾಗ ನಾಲ್ವರು ಯುವಕರು ಬೊಲೆರೊದಲ್ಲಿ ಬಂದು, ಆಕೆಯನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಅದೇ ಜಾಗಕ್ಕೆ ತಂದು ಬಿಡುವಾಗ ಗ್ರಾಮಸ್ಥರನ್ನು ಕಂಡು ಓಡಿಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೈಸೂರು: ಬಾಲಕಿ ಮೇಲೆ ಅತ್ಯಾಚಾರ ಆರೋಪಿಗೆ 43 ವರ್ಷ ಜೈಲು ಶಿಕ್ಷೆ ವಿಧಿಸಿದ ಪೊಕ್ಸೊ ನ್ಯಾಯಾಲಯ

ಭಾರತ-ಪಾಕಿಸ್ತಾನ ಗಡಿಯಿಂದ 100 ಕಿ.ಮೀ ದೂರದಲ್ಲಿ ಈ ಸಾಮೂಹಿಕ ಅತ್ಯಾಚಾರದ ಘಟನೆ ನಡೆದಿದೆ. ರಕ್ತಸ್ರಾವವಾಗುತ್ತಿದ್ದ ಆಕೆಯನ್ನು ಗ್ರಾಮಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ. ಪೊಲೀಸರು ಮಾಹಿತಿ ಪಡೆದ ನಂತರ ಘಟನಾ ಸ್ಥಳಕ್ಕೆ ಆಗಮಿಸಿ ನಿವಾಸಿಗಳನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ್ದಾರೆ. ವೈದ್ಯರ ಪರೀಕ್ಷೆಯ ನಂತರ ಇದು ಅತ್ಯಾಚಾರ ಎಂದು ದೃಢಪಟ್ಟಿದೆ.

ಆರೋಪಿಗಳ ಪತ್ತೆಗಾಗಿ ಪೊಲೀಸರು 4 ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅತ್ಯಾಚಾರಕ್ಕೊಳಗಾದ ಯುವತಿ ಮೂಗಿಯಾದ್ದರಿಂದ ಆಕೆ ತನ್ನ ಮೇಲಾದ ದೌರ್ಜನ್ಯದ ಮೇಲಾಗಲಿ, ಅತ್ಯಾಚಾರ ನಡೆಸಿದವರ ಬಗ್ಗೆಯಾಗಲಿ ಏನನ್ನೂ ಹೇಳಲು ಸಾಧ್ಯವಾಗಿಲ್ಲ. ಇದು ಪೊಲೀಸರಿಗೆ ದೊಡ್ಡ ಸವಾಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಪುರುಷರೂ ಸುರಕ್ಷಿತರಲ್ಲ! ನಾಲ್ವರು ಯುವತಿಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದರೆಂದು ಪಂಜಾಬ್ ಕಾರ್ಮಿಕನ ಅರೋಪ!

ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಹೆಸರಿಸದ ಪುರುಷ ದುಷ್ಕರ್ಮಿಗಳ ವಿರುದ್ಧ ಪ್ರಕರಣವನ್ನು ಪ್ರಾರಂಭಿಸಲಾಗಿದೆ. ಆರೋಪಿಗಳನ್ನು ಗುರುತಿಸಲು ಘಟನೆ ನಡೆದ ಸುತ್ತಮುತ್ತ ಅಳವಡಿಸಲಾದ ಕ್ಯಾಮೆರಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ