Shocking News: ಅಕ್ಕನ ಬಾಯ್​ಫ್ರೆಂಡ್​ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ!

| Updated By: ಸುಷ್ಮಾ ಚಕ್ರೆ

Updated on: Mar 28, 2022 | 9:01 PM

ಆರೋಪಿಯು ತನ್ನ ಗೆಳತಿಯ ಬಳಿ ಆ ಬಾಲಕಿಯನ್ನು ರಾತ್ರಿ ತನ್ನೊಂದಿಗೆ ಬಿಟ್ಟು ಹೋದರೆ ಹೊಸ ಫೋನ್ ಮತ್ತು ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದ. ಅದರಿಂದ ಆತನ ಗೆಳತಿ ತನ್ನ ತಂಗಿಯನ್ನು ಆತನ ಬಳಿ ಬಿಟ್ಟಿದ್ದಳು.

Shocking News: ಅಕ್ಕನ ಬಾಯ್​ಫ್ರೆಂಡ್​ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಗುಪ್ತಾಂಗಕ್ಕೆ ಕೋಲು ತುರುಕಿ ಚಿತ್ರಹಿಂಸೆ!
ಸಾಂದರ್ಭಿಕ ಚಿತ್ರ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯ ಮೇಲೆ ಆಕೆಯ ಕಸಿನ್ (ಅಕ್ಕ) ಬಾಯ್​ಫ್ರೆಂಡ್ ಅತ್ಯಾಚಾರವೆಸಗಿ (Rape), ಆಕೆಯ ಗುಪ್ತಾಂಗಕ್ಕೆ ಕೋಲು ತುರುಕಿ, ವಿಪರೀತ ರಕ್ತಸ್ರಾವವಾಗುವಂತೆ ಮಾಡಿರುವ ಭೀಕರ ಘಟನೆ (Shocking News) ನಡೆದಿದೆ. ಆ ಬಾಲಕಿಯ ಅಕ್ಕನ ಬಾಯ್​ಫ್ರೆಂಡ್ ಗುರುವಾರ ಆಕೆಯ ಮೇಲೆ ಈ ರೀತಿಯ ವಿಕೃತಿ ಮೆರೆದಿದ್ದಾನೆ. ಆ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಕೊಲ್ಕತ್ತಾದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಗಣ ಜಿಲ್ಲೆಯ ಬಸಿರ್‌ಹತ್ ಬಳಿ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ ಬಾಲಕಿಯನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಬಾಲಕಿ ಪತ್ತೆಯಾದಾಗ ಆಕೆಗೆ ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಂದೂಸ್ತಾನ್ ಟೈಮ್ಸ್‌ ವರದಿಯ ಪ್ರಕಾರ, ಆರೋಪಿ ಆ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವುದು ಮಾತ್ರವಲ್ಲದೆ ಆಕೆಯ ಗುಪ್ತಾಂಗದಲ್ಲಿ ಕೋಲು ಹಾಕಿ, ಹಾನಿಗೊಳಿಸಿದ್ದಾನೆ. ಆ ಬಾಲಕಿಗೆ ಚಿತ್ರಹಿಂಸೆ ನೀಡಲಾಗಿದೆ. ನಂತರ ಬಾಲಕಿಯನ್ನು ಕೋಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐದು ವೈದ್ಯರ ತಂಡದಿಂದ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ದುರಂತ ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಹೌರಾದ ಡೊಮ್ಜೂರ್ ಜಿಲ್ಲೆಯಿಂದ ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆಸಿದವನನ್ನು ಬಂಧಿಸಿದ್ದಾರೆ. 22 ವರ್ಷದ ಯುವಕನ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ, ಬಸಿರ್‌ಹತ್‌ನ ನ್ಯಾಯಾಲಯವು ಆರೋಪಿಯನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ತನಿಖೆಯ ಸಮಯದಲ್ಲಿ, ಆರೋಪಿಯು ತನ್ನ ಗೆಳತಿಯ ಬಳಿ ಆ ಬಾಲಕಿಯನ್ನು ರಾತ್ರಿ ತನ್ನೊಂದಿಗೆ ಬಿಟ್ಟು ಹೋದರೆ ಹೊಸ ಫೋನ್ ಮತ್ತು ಹಣವನ್ನು ನೀಡುವುದಾಗಿ ಭರವಸೆ ನೀಡಿದ್ದ. ಅದರಿಂದ ಆತನ ಗೆಳತಿ ತನ್ನ ತಂಗಿಯನ್ನು ಆತನ ಬಳಿ ಬಿಟ್ಟಿದ್ದಳು. ಆಗ ಆತ ಆಕೆಯ ಮೇಲೆ ಅತ್ಯಾಚಾರ ನಡೆಸಿ, ವಿಕೃತಿ ಮೆರೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ರಾತ್ರಿಯಾದರೂ ಮಗಳು ಮನೆಗೆ ಬಾರದೆ ಇದ್ದಾಗ ಆಕೆಯ ಮನೆಯವರು ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಬಾಲಕಿ ಸತ್ತಿದ್ದಾಳೆ ಎಂದುಕೊಂಡು ಆತ ಆ ಸ್ಥಳದಿಂದ ಓಡಿಹೋಗಿರುವುದು ತಿಳಿದುಬಂದಿದೆ. ಆದರೆ, ಆಕೆ ಜೀವಂತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Gang Rape: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಗುಪ್ತಾಂಗಕ್ಕೆ ಚೂಪಾದ ವಸ್ತು ಹಾಕಿದ ಕಾಮುಕರು!

Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!