ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಇಬ್ಬರು ಪ್ರಮುಖ ಶೂಟರ್​​ಗಳನ್ನು ಬಂಧಿಸಿದ ದೆಹಲಿ ಪೊಲೀಸ್

| Updated By: ರಶ್ಮಿ ಕಲ್ಲಕಟ್ಟ

Updated on: Jun 20, 2022 | 4:54 PM

Sidhu Moosewala murder case ಇಬ್ಬರು ಆರೋಪಿಗಳನ್ನು ಪ್ರಿಯವ್ರತ್ ಫೌಜಿ (26) ಮತ್ತು ಕಾಶಿಶ್ (24) ಎಂದು ಗುರುತಿಸಲಾಗಿದೆ. ಪ್ರಿಯವ್ರತ್ ಪ್ರಮುಖ ಶೂಟರ್ ಮತ್ತು ಘಟನೆಯ ಸಮಯದಲ್ಲಿ ಕೆನಡಾ ಮೂಲದ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್ ಜತೆ ನೇರವಾಗಿ ಸಂಪರ್ಕದಲ್ಲಿದ್ದ...

ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಇಬ್ಬರು ಪ್ರಮುಖ ಶೂಟರ್​​ಗಳನ್ನು ಬಂಧಿಸಿದ ದೆಹಲಿ ಪೊಲೀಸ್
ಸಿಧು ಮೂಸೆ ವಾಲಾ
Follow us on

ದೆಹಲಿ: ಮೇ 29 ರಂದು ಪಂಜಾಬ್‌ನ ಹಳ್ಳಿಯೊಂದರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moosewala) ಅವರ ಹತ್ಯೆಯಲ್ಲಿ ಭಾಗಿಯಾಗಿರುವ ಇಬ್ಬರು ಪ್ರಮುಖ ಶೂಟರ್‌ಗಳನ್ನು ದೆಹಲಿ ಪೊಲೀಸರು (Delhi Police) ಸೋಮವಾರ ಬಂಧಿಸಿದ್ದಾರೆ. ಪೊಲೀಸರು ಬಂಧಿಸುವ ಸಂದರ್ಭದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಬ್ಬರು ಆರೋಪಿಗಳನ್ನು ಪ್ರಿಯವ್ರತ್ ಫೌಜಿ (26) ಮತ್ತು ಕಾಶಿಶ್ (24) ಎಂದು ಗುರುತಿಸಲಾಗಿದೆ. ಪ್ರಿಯವ್ರತ್ ಪ್ರಮುಖ ಶೂಟರ್ ಮತ್ತು ಘಟನೆಯ ಸಮಯದಲ್ಲಿ ಕೆನಡಾ ಮೂಲದ ಗ್ಯಾಂಗ್​​ಸ್ಟರ್ ಗೋಲ್ಡಿ ಬ್ರಾರ್ (Goldy Brar) ಅವರೊಂದಿಗೆ ನೇರವಾಗಿ ಸಂಪರ್ಕದಲ್ಲಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಯಾಣ ಮೂಲದ ಫೌಜಿ ಈ ಹಿಂದೆ ರಾಮ್‌ಕರಣ್ ಗ್ಯಾಂಗ್‌ನ ಸದಸ್ಯನಾಗಿದ್ದು, ಶಾರ್ಪ್ ಶೂಟರ್ ಆಗಿ ಕೆಲಸ ಮಾಡುತ್ತಿದ್ದ. ಈತ ಮೂಸೆ ವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ಶೂಟರ್‌ಗಳ ತಂಡವನ್ನು ಮುನ್ನಡೆಸಿದ್ದು ಬ್ರಾರ್ ಜತೆ ಗೆ ನೇರ ಸಂಪರ್ಕದಲ್ಲಿದ್ದರು ಎಂದು ವರದಿಯಾಗಿದೆ. ಫೌಜಿ ಈ ಹಿಂದೆ ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, 2015ರಲ್ಲಿ ಬಂಧಿತನಾಗಿದ್ದ. ಮೂಸೆ ವಾಲಾರನ್ನು ಮೇ 29 ರಂದು ಗುಂಡಿಕ್ಕಿ ಕೊಲ್ಲಲಾಗಿತ್ತು. ಬ್ರಾರ್ ಈ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

ಬ್ರಾರ್ ಹೇಳಿಕೆಯು ಜೈಲಿನಲ್ಲಿರುವ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಪಾತ್ರವನ್ನು ವಿಚಾರಣೆಗೆ ತರುವಂತೆ ಮಾಡಿತು. ವಿಚಾರಣೆಯ ಸಮಯದಲ್ಲಿ, ಬಿಷ್ಣೋಯ್ ಹತ್ಯೆಯಲ್ಲಿ ತನ್ನ ಗ್ಯಾಂಗ್ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ.

ಕಳೆದ ವಾರ, ಮೊಹಾಲಿಯಲ್ಲಿ ಮೊಹಾಲಿ ಅಪರಾಧ ತನಿಖಾ ಸಂಸ್ಥೆ (CIA) ಶಾಖೆಯಲ್ಲಿ ಬಿಷ್ಣೋಯಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಮುಂದಿನ ತನಿಖೆಗಾಗಿ ಪಂಜಾಬ್ ಪೊಲೀಸರಿಗೆ ಏಳು ದಿನಗಳ ಕಸ್ಟಡಿಗೆ ತೆಗೆದುಕೊಳ್ಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ. ಅವರನ್ನು ಮಾನಸ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಡ್ಯೂಟಿ ಮ್ಯಾಜಿಸ್ಟ್ರೇಟ್ ಮುಂದೆ ಅನುಸರಣೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಪೊಲೀಸರಿಗೆ ಹೇಳಿದೆ.

ಇದನ್ನೂ ಓದಿ
ಸಿಧು ಮೂಸೆವಾಲಾ ಹಂತಕ ಎಂದು ಹೇಳಿಕೊಂಡ ವ್ಯಕ್ತಿಯಿಂದ ಎಐಎಂಐಎಂ ಗುಜರಾತ್ ಮುಖ್ಯಸ್ಥರಿಗೆ ಕೊಲೆ ಬೆದರಿಕೆ
Sidhu Moose Wala Murder: ಮೂಸೆವಾಲಾ ಕೊಲೆ ಪ್ರಕರಣ; ಲಾರೆನ್ಸ್​ ಬಿಷ್ಣೋಯ್​ಗೆ ಬುಲೆಟ್ ಪ್ರೂಫ್ ವಾಹನ, 100 ಪೊಲೀಸರಿಂದ ಭದ್ರತೆ
ಪಂಜಾಬಿ ಗಾಯಕ ಮೂಸೆವಾಲಾ ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿಯ ಬಂಧನ

ಮೂಸೆವಾಲಾ ಸಾವಿಗೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಇಲ್ಲಿಯವರೆಗೆ ಒಂಬತ್ತು ಶಂಕಿತರನ್ನು ಬಂಧಿಸಿದ್ದಾರೆ. ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್​​ಗಳ ಹೆಸರುಗಳು ಮನ್‌ಪ್ರೀತ್ ಸಿಂಗ್ ಮನ್ನಾ, ಸರಾಜ್ ಸಂಧು, ಅಕಾ ಮಿಂಟೂ,ಮೋನು ದಗ್ಗರ್, ನಸೀಬ್ ಖಾನ್, ಪವನ್ ಬಿಷ್ಣೋಯ್, ಮನ್‌ಪ್ರೀತ್ ಸಿಂಗ್ ಭಾವು, ಸಂದೀಪ್ ಸಿಂಗ್, ಅಕಾ ಕೆಕ್ರಾ,ಚರಣಜಿತ್ ಸಿಂಗ್, ಅಕಾ ಚೇತನ್ ಸಂಧು,ತ್ತು ಪ್ರಭದೀಪ್ ಸಿಂಗ್ ಪಬ್ಬಿ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:31 pm, Mon, 20 June 22