ಬೆಂಗಳೂರು: ನಕಲಿ ನೋಟ್ ಮುದ್ರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸೂರ್ಯಸಿಟಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಮೂಲದ ಸುರೇಶ್ ಹಾಗೂ ನರೇಶ್ ಬಂಧಿತ ಆರೋಪಿಗಳು.
ಬಂಧಿತರಿಂದ ನೋಟ್ಪ್ರಿಂಟ್ ಮಷಿನ್ ಹಾಗೂ 6 ಸಾವಿರ ರೂಪಾಯಿಯನ್ನು ವಶಕ್ಕೆ ಪಡೆಯಲಾಗಿದೆ. 100, 200, 500 ಮುಖಬೆಲೆಯ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.
ಕಲರ್ ಮಷಿನ್ ಮೂಲಕ ನಕಲಿ ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ವಂಚಕರು ಸಂತೆ ಸೇರಿದಂತೆ ಅಂಗಡಿಗಳಲ್ಲಿ ಇದನ್ನು ಬಳಸುತ್ತಿದ್ದರು. ಅಂತೆಯೇ, ಈ ಸಲ ಸಂತೆ ಅಂಗಡಿಗಳಿಗೆ ನೋಟು ನೀಡುತ್ತಿದ್ದಾಗ ಆರೋಪಿಗಳು ಅಂದರ್ ಆಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸೂರ್ಯನಗರ ಠಾಣೆಯ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಸಿಟಿ ಇನ್ಸ್ಟಿಟ್ಯೂಟ್ ಮುಂದೆ.. ಜಿಂಕೆ ಕೊಂಬು ಮಾರಲು ಯತ್ನಿಸುತ್ತಿದ್ದ ಕಿರಾತಕ ಅಂದರ್