Delhi crime: ಪತ್ನಿಗೆ ಪಕ್ಕದ ಮನೆಯ ಯುವಕನ ಜತೆಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಇಬ್ಬರ ಕಥೆ ಮುಗಿಸಿದ ಪತಿ
ಪಕ್ಕದ ಮನೆಯ ಯುವಕನ ಜತೆಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ, ಹೆಂಡತಿಯ ಜತೆಗೆ, ನೆರೆ ಮನೆಯ ಯುವಕನ ಕಥೆಯನ್ನು ಮುಗಿಸಿದ ಪತಿ.
ದೆಹಲಿ: ಪತ್ನಿ ನೆರೆ ಮನೆಯ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ, ಪತ್ನಿಯನ್ನು ಕತ್ತು ಹಿಸುಕಿ ಮತ್ತು ಪಕ್ಕದ ಮನೆಯ ಯುವಕನಿಗೆ ಚಾಕು ಇರಿದು ಕೊಂದಿರುವ ಘಟನೆ ದೆಹಲಿಯ ದಕ್ಷಿಣ ರೋಹಿಣಿಯಲ್ಲಿ ಗುರುವಾರ (ಜು.13) ನಡೆದಿದೆ. ಇಮ್ರಾನ್ ಎಂಬ ವ್ಯಕ್ತಿ ಆತನ ಹೆಂಡತಿಯನ್ನು ಆಕೆಯ ದುಪಟ್ಟಾದಿಂದ ಕತ್ತು ಹಿಸುಕಿ ಕೊಂದಿದ್ದಾನೆ. ಪತ್ನಿ ಪಕ್ಕದ ಮನೆಯ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿದ್ದು, ಇದೇ ಸಮಯದಲ್ಲಿ ಪಕ್ಕದ ಮನೆಯ 22 ವರ್ಷದ ಯುವಕನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿ ಪೊಲೀಸರು, ಸ್ಥಳದಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪತ್ನಿ (28) ಜತೆಗೇ ಇಮ್ರಾನ್ ಕೂಡ ಪತ್ತೆಯಾಗಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಇದೇ ವೇಳೆ ಸಂಜಿತ್ ಅಲಿಯಾಸ್ ರಂಜಿತ್ನ್ನು ಚಾಕುವಿನಿಂದ ಇರಿದಿರುವ ಬಗ್ಗೆ ಪೊಲೀಸರಿಗೆ ಸುದ್ದಿ ಬಂದಿದೆ . 32 ವರ್ಷದ ಇಮ್ರಾನ್ ತನ್ನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಮಂಗೋಲ್‌ಪುರ ಕಲಾನ್ ನಿವಾಸಿ ಸಂಜಿತ್ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತನಿಖಾ ವರದಿಯಲ್ಲಿ ತಿಳಿಸಿದ್ದಾರೆ. ಸಂಜಿತ್ನ್ನು ಕುಟುಂಬ ಸದಸ್ಯರು ಬಿಎಸ್‌ಎ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತನು ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಇದನ್ನೂ ಓದಿ:55 ವರ್ಷದ ಮಹಿಳೆಯನ್ನು ಗುಂಡಿಕ್ಕಿ ಕೊಂದ ಮಗಳ ಮಾಜಿ ಪ್ರಿಯಕರ
ಇಮ್ರಾನ್ ವಿರುದ್ಧ ದಕ್ಷಿಣ ರೋಹಿಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಇಮ್ರಾನ್ ಸಂಬಂಧವಿದೆ ಎಂಬ ಶಂಕೆಯ ಮೇರೆಗೆ ಇಬ್ಬರನ್ನೂ ಕೊಂದಿರುವುದು ಎಂದು ಹೇಳಲಾಗಿದೆ. ಪೊಲೀಸರು ಇಮ್ರಾನ್‌ನನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.