AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu: ಏಳು ಮಂದಿ ಕಾಲೇಜು ವಿದ್ಯಾರ್ಥಿಗಳಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಅಪ್ರಾಪ್ತ ಬಾಲಕಿ ಮೇಲೆ ಏಳು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 17 ವರ್ಷದ ಬಾಲಕಿ ಸ್ನಾಪ್​ಚಾಟ್ ಮೂಲಕ್ ಪರಿಚಯವಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಳು. ನಂತರ ಆಕೆಯ ಮೇಲೆ 7 ವಿದ್ಯಾರ್ಥಿಗಳು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸ್ನೇಹಿತನನ್ನು ಭೇಟಿಯಾಗಲು ಮನೆಯಿಂದ ಹೋಗಿದ್ದಳು, ಬಳಿಕ ಒಂದು ದಿನದವರೆಗೆ ನಾಪತ್ತೆಯಾಗಿದ್ದಳು. ಸೋಮವಾರ ಹಿಂದಿರುಗಿದ್ದಳು.

Tamil Nadu: ಏಳು ಮಂದಿ ಕಾಲೇಜು ವಿದ್ಯಾರ್ಥಿಗಳಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಕ್ರೈಂImage Credit source: Telegraph India
Follow us
ನಯನಾ ರಾಜೀವ್
|

Updated on:Feb 19, 2025 | 12:17 PM

ಏಳು ಮಂದಿ ಕಾಲೇಜು ವಿದ್ಯಾರ್ಥಿಗಳು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಆಕೆ ಸಾಮಾಜಿಕ ಜಾಲತಾಣಗಳ ಮೂಲಕ ಓರ್ವ ವಿದ್ಯಾರ್ಥಿಗೆ ಸ್ನೇಹಿತೆಯಾಗಿದ್ದಳು. ಇದೀಗ ಪ್ರಕರಣ ದಾಖಲಾಗಿದ್ದು, ಏಳು ಆರೋಪಿಗಳನ್ನು ಬಂಧಿಸಲಾಗಿದೆ.

17 ವರ್ಷದ ಬಾಲಕಿ ಸ್ನಾಪ್​ಚಾಟ್ ಮೂಲಕ್ ಪರಿಚಯವಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದಳು. ನಂತರ ಆಕೆಯ ಮೇಲೆ 7 ವಿದ್ಯಾರ್ಥಿಗಳು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರವೆಸಗಿದ್ದರು. ಸ್ನೇಹಿತನನ್ನು ಭೇಟಿಯಾಗಲು ಮನೆಯಿಂದ ಹೋಗಿದ್ದಳು, ಬಳಿಕ ಒಂದು ದಿನದವರೆಗೆ ನಾಪತ್ತೆಯಾಗಿದ್ದಳು. ಸೋಮವಾರ ಹಿಂದಿರುಗಿದ್ದಳು.

ಮನೆಗೆ ಹಿಂದುರಿಗಿದ ಬಳಿಕ ಅಜ್ಜಿಯ ಬಳಿ ಹುಡುಗನೊಬ್ಬ ತನ್ನ ಕೋಣೆಯಲ್ಲಿ ಬಂಧಿಸಿ ತನ್ನ ಆರು ಸ್ನೇಹಿತರ ಜತೆ ಸೇರಿ ಅತ್ಯಾಚಾರ ಮಾಡಿದ್ದಾನೆಂದು ತಿಳಿಸಿದಳು. ಬಾಲಕಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ತನ್ನ ಮನೆಯಲ್ಲಿ ಮಾಹಿತಿ ನೀಡಿದ ನಂತರ, ಪೋಕ್ಸೋ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ತನಿಖೆ ನಡೆಯುತ್ತಿದ್ದು, ಪೊಲೀಸರು ಎಲ್ಲಾ 7 ವಿದ್ಯಾರ್ಥಿಗಳಾದ 19 ವರ್ಷದ ರಕ್ಷಿತ್, ಅಭಿನೇಶ್ವರನ್ ಮತ್ತು ನಿತೀಶ್ ಮತ್ತು 20 ವರ್ಷದ ದೀಪಕ್, ಯಾದವ್ ರಾಜ್, ಮುತ್ತು ನಾಗರಾಜ್ ಮತ್ತು ಜೆಬಿನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾಲಕಿ ನ್ಯಾಯ ಒದಗಿಸಿಕೊಡುವಂತೆ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾಳೆ.

ಮತ್ತಷ್ಟು ಓದಿ: ಗುಜರಾತ್: ಬೇಟಿ ಬಚಾವೋ, ಬೇಟಿ ಪಢಾವೋ ಬಗ್ಗೆ ಅದ್ಭುತ ಭಾಷಣ, ಕೆಲವೇ ದಿನಗಳಲ್ಲಿ ಬಾಲಕಿ ಮೇಲೆ ಶಿಕ್ಷಕನಿಂದ ಅತ್ಯಾಚಾರ

ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ, ಆಡಳಿತಾರೂಢ ಡಿಎಂಕೆಗೆ ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಆರೋಪಿಸಿದ್ದಾರೆ.

ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಹೋರಾಡಲು ಅಥವಾ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಡಿಎಂಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:13 pm, Wed, 19 February 25

ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಟೈಲರ್​ ಬಳಿ ಹೋಗಿ ಪತ್ನಿ ಬಾಯಿಗೆ ಹೊಲಿಗೆ ಹಾಕ್ತೀರಾ ಎಂದು ಕೇಳಿದ ಪತಿ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಹೆಚ್​ಎಎಲ್ ಬೇರೆ ರಾಜ್ಯಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಅಶೋಕ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ಕನ್ನಡಿಗರು ಸಹನಶೀಲರು ಆದರೆ ಕಣಕಿದರೆ ಸುಮ್ಮನಿರಲ್ಲ: ನಾರಾಯಣಗೌಡ, ಕರವೇ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ನಟ ಕಮಲ್​ ಹಾಸನ್​ಗೆ ಕನ್ನಡದ ಇತಿಹಾಸ ಗೊತ್ತಿಲ್ಲ: ವ್ಯಂಗ್ಯವಾಡಿದ ಸಿಎಂ
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಆರ್ಮಿ ಜಾಕೆಟ್ ತೊಟ್ಟು ಬೀಗಿದ ಸಿದ್ದರಾಮಯ್ಯ ಮತ್ತು ಶಿವಕುಮಾರ್
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ಮೇಕೆಗೆ ಸುತ್ತಿಕೊಂಡಿತ್ತು ವಿಷಕಾರಿ ಹಾವು
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ರಜೆ ಮೇಲೆ ತೆರಳಿದ್ದ ಸಿಬ್ಬಂದಿಯನ್ನು ವಾಪಸ್ಸು ಕರೆಸಿಕೊಳ್ಳಲಾಗಿದೆ: ವೈದ್ಯ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ