ಆನೇಕಲ್: ಪ್ರತಿಷ್ಠಿತ ಕಾಲೇಜಿನಲ್ಲಿ ವಿಡಿಯೋ ವಿಚಾರಕ್ಕೆ ತಮಿಳು ವಿದ್ಯಾರ್ಥಿಗಳು ಮಾರಮಾರಿ (Fight) ಮಾಡಿರುವಂತಹ ಘಟನೆ ನಡೆದಿದೆ. ಕಾಲೇಜಿನ 25ನೇ ವರ್ಷ ಸಂಭ್ರಮಚರಣೆ ವೇಳೆ ಗಲಾಟೆ ನಡೆದಿದ್ದು, ಚೇರನ್ ಎಂಬ ವಿದ್ಯಾರ್ಥಿಗೆ ರಾಕೇಶ್, ಸುನೀಲ್, ಕಾರ್ತಿಕ್, ಫರ್ಜಿನ್, ಗೌರವ್ ಪ್ರವೀಣ್ರಿಂದ ಹಲ್ಲೆ ಮಾಡಲಾಗಿದೆ. ತಮಿಳುನಾಡು ಶಾಸಕನ ಪುತ್ರ ಪ್ರವೀಣ್ ಗಲಾಟೆಯಲ್ಲಿ ಭಾಗಿಯಾಗಿದ್ದು, ಸಂಭ್ರಮದ ಕಾರಣ ಪೊಲೀಸರ ಪರ್ಮೀಷನ್ ಇಲ್ಲದೇ ಡಿ.ಜೆ ನೈಟ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಪ್ರವೀಣ್ ಅಲಾಯನ್ಸ್ ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಹಿಂದೆ ಅತ್ಯಾಚಾರ ಕೇಸಿನಲ್ಲಿ ಆರೋಪಿಯಾಗಿದ್ದ. ಗಲಾಟೆ ಕುರಿತು ಆನೇಕಲ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕುಡಿದ ಅಮಲಿನಲ್ಲಿ ಶೂಟ್ ಮಾಡಿಕೊಂಡು ವೃದ್ಧ ಅತ್ಮಹತ್ಯೆ
ಬೆಂಗಳೂರು: ಕುಡಿದ ಅಮಲಿನಲ್ಲಿ ಶೂಟ್ ಮಾಡಿಕೊಂಡು ವೃದ್ಧ ಅತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾವೇರಿ ನಗರದಲ್ಲಿ ಬಿಡ್ಡಪ್ಪ(60) ಆತ್ಮಹತ್ಯೆಗೆ ಶರಣಾದ ವೃದ್ಧ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗನ್ನಿಂದ ಶೂಟ್ಮಾಡಿಕೊಂಡು ಬಿಡ್ಡಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸಿಡಿಲು ಬಡಿದು ಕರಕಲಾದ ಮೇವಿನ ಬಣವೆ
ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುಡುಗು ಸಿಡಲು ಸಹಿತ ಆಲೀಕಲ್ಲು ಮಳೆಯಾಗಿದ್ದು, ಸಿಡಿಲು ಬಡಿದು ಮೇವಿನ ಬಣವೆಗಳು ಹೊತ್ತಿ ಉರಿದಿದೆ. ಜಿಲ್ಲೆಯ ಬಲೇಶ್ವರ ಪಟ್ಟಣದ ಹೊರ ಭಾಗದಲ್ಲಿ ಘಟನೆ ನಡೆದಿದೆ. ಜಾನುವಾರಿಗಳಿಗಾಗಿ ಸಂಗ್ರಹಿಟ್ಟಿದ್ದ ಮೇವಿನ ಬಣವೆಗಳಿಗೆ ಬಡಿದ ಸಿಡಿಲು
ನಾಲ್ಕು ಮೇವಿನ ಬಣವೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಹನಮಂತ ಬಿಜ್ಜರಗಿ, ದುಂಡಪ್ಪ ಪೂಜಾರಿ, ಚೇತನ ನಾವಿ, ಗುರು ಕನಮುಡಿ ಎಂಬ ರೈತರಿಗೆ ಬಣವೆಗಳು ಸೇರಿದ್ದು. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಇದನ್ನೂ ಓದಿ;
‘ನಿಮ್ಮ ಅಜ್ಞಾನ ನಿಜಕ್ಕೂ ದಿಗ್ಭ್ರಮೆಗೊಳಿಸಿದೆ’; ಕಡ್ಡಿ ಮುರಿದಂತೆ ಹೇಳಿದ ನಟಿ ರಮ್ಯಾ
ಅಯೋಧ್ಯೆಯಲ್ಲಿ ಮಸೀದಿ ಬಳಿ ಆಕ್ಷೇಪಾರ್ಹ ಪೋಸ್ಟರ್ ಅಂಟಿಸಿ, ಮಾಂಸ ಎಸೆದಿದ್ದ 7 ಮಂದಿ ಅರೆಸ್ಟ್ !