ತುಂಬಾ ಫೇಮಸ್ ಆಗ್ಬೇಕು ಅಂತಾ ಪಾಪಿ ಆರೋಪಿ ಫರಾನ್ ಹೀಗಾ ಮಾಡೋದು!?

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧಿಸಿ ಬಂಧಿತ ಆರೋಪಿ ಫರಾನ್ ಪಾಷಾನನ್ನು 12 ದಿನ ಪೊಲೀಸರ ವಶಕ್ಕೆ ನೀಡಲಾಗಿದೆ. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗೆ 15 ದಿನಗಳ ವಶಕ್ಕೆ ಕೇಳಿದ್ದರು ಆದರೆ 12 ದಿನ ಪೊಲೀಸರ ವಶಕ್ಕೆ ನೀಡಿ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಚುರುಕುಗೊಳಿಸಿರುವ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ. ತುಂಬಾ ಫೇಮಸ್ […]

ತುಂಬಾ ಫೇಮಸ್ ಆಗ್ಬೇಕು ಅಂತಾ ಪಾಪಿ ಆರೋಪಿ ಫರಾನ್ ಹೀಗಾ ಮಾಡೋದು!?
Follow us
ಸಾಧು ಶ್ರೀನಾಥ್​
|

Updated on:Nov 19, 2019 | 12:38 PM

ಮೈಸೂರು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧಿಸಿ ಬಂಧಿತ ಆರೋಪಿ ಫರಾನ್ ಪಾಷಾನನ್ನು 12 ದಿನ ಪೊಲೀಸರ ವಶಕ್ಕೆ ನೀಡಲಾಗಿದೆ.

ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದ ಪೊಲೀಸರು ಹೆಚ್ಚಿನ ವಿಚಾರಣೆಗೆ 15 ದಿನಗಳ ವಶಕ್ಕೆ ಕೇಳಿದ್ದರು ಆದರೆ 12 ದಿನ ಪೊಲೀಸರ ವಶಕ್ಕೆ ನೀಡಿ ಮೈಸೂರಿನ ಜೆಎಂಎಫ್‌ಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಚುರುಕುಗೊಳಿಸಿರುವ ಪೊಲೀಸರು ಹಲವರ ವಿಚಾರಣೆ ನಡೆಸುತ್ತಿದ್ದಾರೆ.

ತುಂಬಾ ಫೇಮಸ್ ಆಗ್ಬೇಕು ಅಂತಾ ಪಾಪಿ ಹೀಗಾ ಮಾಡೋದು!? ಇನ್ನು ಯಾಕಪ್ಪಾ ನಿಮ್ಮ ಫ್ರೆಂಡ್ ಫರಾನ್ ಹೀಗೆ ಶಾಸಕ ತನ್ವೀರ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಏನು ಕಾರಣ ಇರಬಹುದು ಅಂತಾ ಹೇಳಿ ಎಂದು ಆರೋಪಿ ಫರಾನ್​ನ ಗೆಳೆಯರನ್ನು ಪೊಲೀಸರು ರುಬ್ಬಿದ್ದಕ್ಕೆ ಗಣ್ಯರನ್ನ ಕೊಲೆ ಮಾಡಿ ಹೆಸರು ಮಾಡ್ತೀನಿ ಅಂತಾ ಹೇಳ್ತಿದ್ನಂತೆ. ಹಾಗಾಗಿ ಹಲ್ಲೆ ಮಾಡಿದ್ದಾನೆ ಎಂದಿದ್ದಾರೆ. ಆರೋಪಿ ಫರಾನ್ ತನ್ನ ಆಸೆಯನ್ನ ಆಪ್ತರು ಹಾಗೂ ಗೆಳೆಯರೊಂದಿಗೆ ಹೇಳಿಕೊಂಡಿದ್ದನಂತೆ.

ಫರಾನ್‌ಗೆ ಇತ್ತಿಚಿಗೆ ಹೆಸರು ಮಾಡುವ ಹುಚ್ಚು ಹಿಡಿದಿತ್ತು. ತುಂಬಾ ಫೇಮಸ್ ಆಗ್ಬೇಕು ಅಂತ ಹೇಳ್ತಿದ್ದ. ನಮ್ಮ‌ ಜೊತೆನು ವಿಐಪಿ ಒಬ್ಬರನ್ನ ಕೊಲೆ ಮಾಡಿ ಫೇಮಸ್ ಆಗ್ತಿನಿ ಅಂತಿದ್ದ. ಆದ್ರೆ ಯಾರು ಆ ವಿಐಪಿ ಯಾವಾಗ ಮಾಡ್ತಾನೆ ಅಂತ ಹೇಳಿರಲಿಲ್ಲ. ಆತ ತಮಾಷೆಗೆ ಹೇಳ್ತಾನೆ ಅಂತ ಅಂದುಕೊಂಡಿದ್ದೆವು ಅಂತಾ ಪೊಲೀಸರಿಗೆ ಗೆಳೆಯರು ಮಾಹಿತಿ ನೀಡಿದ್ದಾರೆ. ತನ್ವೀರ್ ಸೇಠ್ ಮೇಲಿನ ಕೊಲೆ‌ಯತ್ನ ಕಂಡು ಫರಾನ್ ಗೆಳೆಯರು ದಿಗ್ಬ್ರಾಂತರಾಗಿದ್ದಾರೆ.

ಕರ್ತವ್ಯಲೋಪ ಹಿನ್ನೆಲೆ ಸೇಠ್ ಗನ್‌ಮ್ಯಾನ್ ಅಮಾನತು: ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಕೇಸ್​​ನಲ್ಲಿ ಕರ್ತವ್ಯಲೋಪವೆಸಗಿರುವ ಸೇಠ್ ಗನ್‌ಮ್ಯಾನ್​ ಫಿರೋಜ್ ಖಾನ್​ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಲಾಗಿದೆ. ಈ ಸಂಬಂಧ, ಮೈಸೂರು ನಗರ ಪೊಲೀಸ್ ಆಯುಕ್ತರು CAR ಪೊಲೀಸ್ ಪೇದೆಯಾಗಿರುವ ಫಿರೋಜ್ ಅವರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.

Published On - 9:06 am, Tue, 19 November 19

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?