ತೆಲಂಗಾಣದಲ್ಲಿ ಡಬಲ್ ಮರ್ಡರ್; ಬಂಡೆಯಿಂದ ಹೊಡೆದು ಬೆಟ್ಟದ ತುದಿ ಜೋಡಿಯ ಕೊಲೆ

|

Updated on: Jan 15, 2025 | 9:48 PM

ತೆಲಂಗಾಣದಲ್ಲಿ ನರಸಿಂಘಿ ಪೊಲೀಸ್ ಠಾಣಾ ವ್ಯಾಪ್ತಿಯ ಪುಪ್ಪಲ್ಗುಡದ ಬೆಟ್ಟದ ತುದಿಯಲ್ಲಿ ಆಘಾತಕಾರಿ ಕೊಲೆ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಪುಪ್ಪಲ್ಗುಡ ಪ್ರದೇಶದಲ್ಲಿ ಬೆಟ್ಟದ ಮೇಲೆ ಕಲ್ಲು ಕ್ರಷರ್‌ನಲ್ಲಿ ಇಬ್ಬರು ವ್ಯಕ್ತಿಗಳನ್ನು ಕಡಿದು ಕೊಲೆ ಮಾಡಲಾಗಿದೆ. ಬೆಟ್ಟದ ತುದಿಯಲ್ಲಿ ಜೋಡಿ ಕೊಲೆ ಪ್ರಕರಣ ನಡೆದಿದ್ದು, ಬಹುಶಃ ಜನವರಿ 11ರ ರಾತ್ರಿ ಪುಪ್ಪಲ್ಗುಡದಲ್ಲಿ ಕಲ್ಲು ಕ್ರಷರ್‌ನಲ್ಲಿ ಈ ಕೊಲೆಗಳು ನಡೆದಿದೆ ಎನ್ನಲಾಗಿದೆ.

ತೆಲಂಗಾಣದಲ್ಲಿ ಡಬಲ್ ಮರ್ಡರ್; ಬಂಡೆಯಿಂದ ಹೊಡೆದು ಬೆಟ್ಟದ ತುದಿ ಜೋಡಿಯ ಕೊಲೆ
Police
Follow us on

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಘಿ ಪೊಲೀಸ್ ಠಾಣಾ ವ್ಯಾಪ್ತಿಯ ಪುಪ್ಪಲ್ಗುಡದಲ್ಲಿರುವ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಬಳಿಯ ಬೆಟ್ಟದ ತುದಿಯಲ್ಲಿ ಯುವಕ ಮತ್ತು ಮಹಿಳೆಯ ಶವಗಳು ಪತ್ತೆಯಾಗಿವೆ. ಈ ಡಬಲ್ ಮರ್ಡರ್ ಸ್ಥಳೀಯರಲ್ಲಿ ಆಕ್ರೋಶ ಮತ್ತು ಭಯವನ್ನು ಹುಟ್ಟುಹಾಕಿದೆ. ಆರಂಭಿಕ ತನಿಖೆಗಳ ಪ್ರಕಾರ ಆ ಜೋಡಿಯನ್ನು ದೊಡ್ಡ ಕಲ್ಲುಗಳನ್ನು ಬಳಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ.

“25ರಿಂದ 30 ವರ್ಷ ವಯಸ್ಸಿನ ಕಾರ್ಮಿಕನಂತೆ ಕಾಣುವ ವ್ಯಕ್ತಿಯೊಬ್ಬನನ್ನು ಇರಿದು ಬಂಡೆಯಿಂದ ತಲೆಗೆ ಹೊಡೆದು ಕೊಂದಿದ್ದಾರೆ. ಅಲ್ಲಿಂದ ಸುಮಾರು 60 ಮೀಟರ್ ದೂರದಲ್ಲಿ ಸುಮಾರು 25ರಿಂದ 30 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ಸಹ ಬಂಡೆಯಿಂದ ತಲೆಗೆ ಹೊಡೆದು ಕೊಂದಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಮದುವೆ ನಾಲ್ಕು ದಿನ ಇರುವಾಗ ಪೊಲೀಸರೆದುರೇ ಗುಂಡಿಕ್ಕಿ ಮಗಳ ಹತ್ಯೆಗೈದ ತಂದೆ

ಮೃತಪಟ್ಟವರನ್ನು ಅಂಕಿತ್ ಸಾಕೇತ್ (25) ಮತ್ತು ಬಿಂದು (25) ಎಂದು ಗುರುತಿಸಲಾಗಿದೆ. ಅನಿಕೇತ್ ಮಧ್ಯಪ್ರದೇಶದವನಾಗಿದ್ದರೆ, ಬಿಂದು ಛತ್ತೀಸ್‌ಗಢದವನಾಗಿದ್ದರೆ. ಗಾಳಿಪಟ ಹಾರಿಸಲು ಬೆಟ್ಟಕ್ಕೆ ಹೋಗಿದ್ದ ಸ್ಥಳೀಯ ಯುವಕರು ಶವಗಳನ್ನು ಕಂಡು ಗಾಬರಿಯಾದರು. ಈ ಭಯಾನಕ ದೃಶ್ಯವನ್ನು ನೋಡಿದ ಯುವಕರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ತಕ್ಷಣ ತನಿಖೆಯನ್ನು ಪ್ರಾರಂಭಿಸಿದರು.

ಈ ಘಟನೆ ವರದಿಯಾದ ಕೂಡಲೇ, ರಾಜೇಂದ್ರನಗರ ಪ್ರದೇಶದ ಡಿಸಿಪಿ ಶ್ರೀನಿವಾಸ್ ತಮ್ಮ ತಂಡದೊಂದಿಗೆ ಅಪರಾಧ ಸ್ಥಳಕ್ಕೆ ತಕ್ಷಣವೇ ತಲುಪಿದರು. ಸಾಕ್ಷ್ಯಗಳನ್ನು ಸಂಗ್ರಹಿಸಲು ಶ್ವಾನ ದಳ ಮತ್ತು ವಿಧಿವಿಜ್ಞಾನ ತಜ್ಞರನ್ನು ಸ್ಥಳಕ್ಕೆ ನಿಯೋಜಿಸಲಾಯಿತು. ಪ್ರಾಥಮಿಕ ತನಿಖೆಯ ಪ್ರಕಾರ, ಜನವರಿ 11ರಂದು ತಡರಾತ್ರಿ ದಾಳಿ ಮಾಡಿ ಕೊಲ್ಲಲಾಯಿತು.

ಇದನ್ನೂ ಓದಿ: 17 ವರ್ಷಗಳ ಹಿಂದೆ ಕೊಲೆಯಾದ ವ್ಯಕ್ತಿ ಜೀವಂತವಾಗಿ ಪತ್ತೆ; ಮಾಡದ ಅಪರಾಧಕ್ಕೆ ಜೈಲು ಶಿಕ್ಷೆ ಅನುಭವಿಸಿದ 4 ಕೈದಿಗಳು

ಪೊಲೀಸ್ ಮೂಲಗಳ ಪ್ರಕಾರ, ಅಂಕಿತ್ ಜನವರಿ 8ರಂದು ಬಿಂದುವನ್ನು ತನ್ನ ನಿವಾಸದಿಂದ ಕರೆತಂದಿದ್ದ. ಬಳಿಕ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡಿದ್ದ. ಜೋಡಿ ಕೊಲೆಯ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ಖಚಿತಪಡಿಸಿಕೊಂಡಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ