ಚಿನ್ನಾಭರಣ ವ್ಯಾಪಾರಿಯ ಕಾರಿನ ಕಿಟಕಿ ಒಡೆದು 10 ಲಕ್ಷ ನಗದು ಕಳವು, ಯಾವೂರಲ್ಲಿ?

ವ್ಯಾಪಾರಕ್ಕಾಗಿ ಹಣದ ಜೊತೆ ಮೈಸೂರಿಗೆ ಬಂದಿದ್ದ ವೇಳೆ ಈ ಕೃತ್ಯ ಎಸಗಿದ್ದಾರೆ. ಕಾರು ನಿಲ್ಲಿಸಿ ಬ್ಯಾಂಕ್‌ನಲ್ಲಿ ಸ್ಟೇಟ್‌ಮೆಂಟ್ ಪಡೆಯಲು ಹೋಗಿದ್ದ ವೇಳೆ ಕೈಚಳಕ ತೋರಿರುವ ಕಳ್ಳರು ಕಾರಿನ ಕಿಟಕಿ ಗಾಜು ಹೊಡೆದು ಕಳ್ಳತನ ಮಾಡಿದ್ದಾರೆ.

ಚಿನ್ನಾಭರಣ ವ್ಯಾಪಾರಿಯ ಕಾರಿನ ಕಿಟಕಿ ಒಡೆದು 10 ಲಕ್ಷ ನಗದು ಕಳವು, ಯಾವೂರಲ್ಲಿ?
Edited By: ಸಾಧು ಶ್ರೀನಾಥ್​

Updated on: Nov 28, 2020 | 11:11 AM

ಮೈಸೂರು: ಕಾರಿನ ಕಿಟಕಿ ಗಾಜು ಹೊಡೆದು ಚಿನ್ನ ಬೆಳ್ಳಿ ವ್ಯಾಪಾರಿಯ 10 ಲಕ್ಷ ಕಳವು ಮಾಡಿರುವ ಘಟನೆ ಮೈಸೂರಿನ ವಿವಿ ಪುರಂನಲ್ಲಿ ನಡೆದಿದೆ.

ಪಿರಿಯಾಪಟ್ಟಣದಲ್ಲಿ ಚಿನ್ನ ಬೆಳ್ಳಿ ವ್ಯಾಪಾರಿಯಾಗಿರುವ ಮನೋಜ್ ಕುಮಾರ್ ಅವರಿಗೆ ಸೇರಿದ ಹಣ ಕಳುವಾಗಿದ್ದು, ವ್ಯಾಪಾರಕ್ಕಾಗಿ ಹಣದ ಜೊತೆ ಮೈಸೂರಿಗೆ ಬಂದಿದ್ದ ವೇಳೆ ಈ ಕೃತ್ಯ ಎಸಗಿದ್ದಾರೆ.

ಕಾರು ನಿಲ್ಲಿಸಿ ಬ್ಯಾಂಕ್‌ನಲ್ಲಿ ಸ್ಟೇಟ್‌ಮೆಂಟ್ ಪಡೆಯಲು ಹೋಗಿದ್ದ ವೇಳೆ ಕೈಚಳಕ ತೋರಿರುವ ಕಳ್ಳರು ಕಾರಿನ ಕಿಟಕಿ ಗಾಜು ಹೊಡೆದು ಕಳ್ಳತನ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ವಿ ವಿ ಪುರಂ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us