Crime News: ಸ್ನೇಹಿತರ ಜೊತೆ ಈಜಲು ತೆರಳಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: May 19, 2022 | 10:36 AM

ಮಗನನ್ನು ಕಳೆದುಕೊಂಡ ಕುಟುಂಬ ದುಃಖತಪ್ತರಾಗಿದ್ದಾರೆ. ಪೀಣ್ಯಾ ಅಗ್ನಿಶಾಮಕ ದಳದಿಂದ ಕೆರೆಯಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

Crime News: ಸ್ನೇಹಿತರ ಜೊತೆ ಈಜಲು ತೆರಳಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವು
ಮೃತ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿರುವುದು, ಸಯ್ಯದ್ ಆಕಿಬ್ ಮೃತ ಬಾಲಕ.
Follow us on

ನೆಲಮಂಗಲ: ಸ್ನೇಹಿತರ ಜೊತೆ ಈಜಲು ತೆರಳಿದ್ದ ಬಾಲಕ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಕೆರೆಯಲ್ಲಿ ನಡೆದಿದೆ. ಎಂ.ಎಸ್.ಪಾಳ್ಯದ ಸಯ್ಯದ್ ಆಕಿಬ್ (16) ಮೃತ ಬಾಲಕ. ಅಮೀನ್ ಮಹಮ್ಮದ್, ಅನ್ವರ್ ಮಹಮ್ಮದ್ ಸ್ನೇಹಿತರ ಜೊತೆ ಈಜಲು ತೆರಳಿದ್ದ. ಮೃತ ಬಾಲಕ ಅನ್ಸರ್ ಪಾಶ ಮತ್ತು ಶಿಕ್ಷಕಿ ಅಭೀದಾ ದಂಪತಿಗಳ ಮಗ. ಕೆರಯ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಎಸೆಸೆಲ್ಸಿ ಪರೀಕ್ಷೆ ಬರೆದಿದ್ದ ಯುವಕ ಇವತ್ತು ಫಲಿತಾಂಶ ಬರುವ ದಿನ ಮೊದಲೇ ಬಾಲಕ ಸಾವಿಗೀಡಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬ ದುಃಖತಪ್ತರಾಗಿದ್ದಾರೆ. ಪೀಣ್ಯಾ ಅಗ್ನಿಶಾಮಕ ದಳದಿಂದ ಕೆರೆಯಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು:

ದಾವಣಗೆರೆ: ನಿರಂತರ ಮಳೆಯಿಂದಾಗಿ ವಿದ್ಯುತ್ ಪಂಪ್ ಸೆಟ್ ತೆರವು ಗೊಳಿಸುವ ವೇಳೆ ವಿದ್ಯುತ್ ಸ್ಪರ್ಶಿಸಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ್ (28) ಸಾವನ್ನಪ್ಪಿದ ಯುವಕ. ನಿರಂತರ ಮಳೆ ಹಿನ್ನೆಲೆ ವಿದ್ಯುತ್ ಪಂಪ್ ಸೆಟ್ ಹಾಳಾಗುವ ಭೀತಿ ಹಿನ್ನೆಲೆ ತೆರವಿಗೆ ಮುಂದಾಗಿದ್ದ ಯುವಕ. ಈ ವೇಳೆ ಪಂಪ್​ಸೆಟ್​ಗೆ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇದನ್ನೂ ಓದಿ
Murder: ಬಾಡಿ ಶೇಮಿಂಗ್​​ನಿಂದ ಬೇಸತ್ತು ಸಹಪಾಠಿಯನ್ನೇ ಇರಿದು ಕೊಂದ ಪಿಯುಸಿ ವಿದ್ಯಾರ್ಥಿ
ಸೈಕಲ್​ಗೆ ಅಂಟಿಸಿದ್ದ ‘ಜೈ ಭೀಮ್’ ಸ್ಟಿಕ್ಕರ್‌ ವಿಚಾರಕ್ಕೆ 2 ಸಮುದಾಯದ ಯುವಕರ ನಡುವೆ ಗಲಾಟೆ, 6 ಯುವಕರಿಗೆ ಗಾಯ
ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ, ಮಳೆಗೆ ಕೊಚ್ಚಿ ಹೋದ ಸ್ಮಶಾನ!
ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದ ಮೂವರು ಹೆಣ್ಣುಮಕ್ಕಳ ದುರ್ಮರಣ: ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ!

ಇದನ್ನೂ ಓದಿ: Petrol Price Today: ದೇಶದಲ್ಲಿ ಇಂಧನ ದರ ಸ್ಥಿರ; ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ಮಳೆಗೆ ಕೊಚ್ಚಿ ಹೋದ ಸ್ಮಶಾನ, ಸಮಾಧಿ ಹುಡುಕಾಟದಲ್ಲಿ ಸಂಬಂಧಿಕರು

ಚಿಕ್ಕಬಳ್ಳಾಫುರ: ಮಳೆರಾಯನ ಆರ್ಭಟಕ್ಕೆ ಸ್ಮಶಾನವೇ ಕೊಚ್ಚಿ ಹೋದ ಘಟನೆ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ. ನಿನ್ನೆ ಗೌರಿಬಿದನೂರಿನಲ್ಲಿ ಧಾರಾಕಾರ ಮಳೆಯಾಗಿದ್ದು, ಇದರ ರಭಸಕ್ಕೆ ಗೌರಿಬಿದನೂರಿನ ವೀರಂಡಹಳ್ಳಿ ಸ್ಮಶಾನವೇ ಕೊಚ್ಚಿ ಹೋಗಿದೆ. ಈ ಸ್ಮಶಾನದಲ್ಲಿ ಸುಮಾರು 20 ಸಮಾಧಿಗಳಿದ್ದವು. ಅದರಂತೆ, ತಮ್ಮ ಹಿರಿಯರ ಸ್ಮಶಾನವನ್ನು ಹುಡುಕಾಡಲು ಕುಟುಂಬಸ್ಥರು ಪರದಾಡುತ್ತಿದ್ದಾರೆ. ಸ್ಮಶಾನಕ್ಕೆ ಸೂಕ್ತ ತಡೆಗೋಡೆ ಇಲ್ಲ ಎಂಬ ಆರೋಪ ಇದೀಗ ಕೇಳಿಬಂದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸೂಕ್ತ ತಡೆಗೊಡೆ ನಿರ್ಮಿಸದ ಹಿನ್ನೆಲೆ ಘಟನೆ ಸಂಭವಿಸದೆ ಎಂದು ಸಾರ್ವಜನಿಕರು ಗೌರಿಬಿದನೂರು ನಗರಸಭೆ ವಿರುದ್ದ ಅಸಮಧಾನ ಹೊರಹಾಕಿದ್ದಾರೆ.

ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ಆಗ್ರಹ

ದಾವಣಗೆರೆ: ಅತ್ತಿಗೆರೆ ಗ್ರಾಮದಲ್ಲಿ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ(fatal assault) ಪ್ರಕರಣ ಸಂಬಂಧ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿ ದಲಿತ ಸಂಘಟನೆಗಳಿಂದ ಪ್ರತಿಭಟನೆ(Protest) ನಡೆಯಿತು. ಚನ್ನಗಿರಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ದಲಿತ ಸಂಘಟನೆಯ ಕಾರ್ಯಕರ್ತರು, ನಂತರ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:10 am, Thu, 19 May 22