Murder: ಬಾಡಿ ಶೇಮಿಂಗ್​​ನಿಂದ ಬೇಸತ್ತು ಸಹಪಾಠಿಯನ್ನೇ ಇರಿದು ಕೊಂದ ಪಿಯುಸಿ ವಿದ್ಯಾರ್ಥಿ

ನೋಡಲು ಹುಡುಗಿಯಂತೆ ಕಾಣುತ್ತೀಯ ಎಂದು ಸಹಪಾಠಿ ಗೇಲಿ ಮಾಡಿದ್ದಕ್ಕೆ ಕೋಪಗೊಂಡ ತಮಿಳುನಾಡಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಾಲಕನೊಬ್ಬನನ್ನು ಕೊಲೆ ಮಾಡಿದ್ದಾನೆ.

Murder: ಬಾಡಿ ಶೇಮಿಂಗ್​​ನಿಂದ ಬೇಸತ್ತು ಸಹಪಾಠಿಯನ್ನೇ ಇರಿದು ಕೊಂದ ಪಿಯುಸಿ ವಿದ್ಯಾರ್ಥಿ
ಕೊಲೆImage Credit source: NDTV
Follow us
TV9 Web
| Updated By: ಸುಷ್ಮಾ ಚಕ್ರೆ

Updated on:May 18, 2022 | 2:55 PM

ಚೆನ್ನೈ: ತಮಿಳುನಾಡಿನ (Tamil Nadu Crime News) ಕಲ್ಲಕುರಿಚಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ತನ್ನ ದೇಹದ ಬಗ್ಗೆ ಗೇಲಿ ಮಾಡಿದ್ದಕ್ಕೆ (ಬಾಡಿ ಶೇಮಿಂಗ್) ಆತನನ್ನು ಕೊಲೆ (Murder) ಮಾಡಿದ್ದಾನೆ. ಆ ಬಾಲಕ ಮೃತಪಟ್ಟ ವಿದ್ಯಾರ್ಥಿಯ ದೇಹವನ್ನು ಗೇಲಿ ಮಾಡಿದ್ದು, ನೀನು ನೋಡಲು ಹುಡುಗಿಯಂತೆ ಇದ್ದೀಯ ಎಂದು ಕಿಚಾಯಿಸಿದ್ದ. ಇದರಿಂದ ಅವಮಾನಗೊಂಡ ಆ ವಿದ್ಯಾರ್ಥಿ ಆ ಬಾಲಕನನ್ನು ಕೊಂದಿದ್ದಾನೆ.

ಮೇ 14ರಂದು ಈ ಘಟನೆ ನಡೆದಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು 12ನೇ ತರಗತಿಯ ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ. ತನ್ನನ್ನು ಹುಡುಗಿಯಂತೆ ಕಾಣುತ್ತೀಯ ಎಂದು ಆ ಸಹಪಾಠಿ ಹೇಳಿದ ಮೇಲೂ ಆ ವಿದ್ಯಾರ್ಥಿ ಹಾಗೆ ಹೇಳಬೇಡ ಎಂದು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದ. ಆದರೆ, ಅದನ್ನೇ ತಮಾಷೆಯಾಗಿ ತೆಗೆದುಕೊಂಡ ಆ ಬಾಲಕ ಶಾಲೆಯಲ್ಲಿ ಎಲ್ಲರ ಎದುರಲ್ಲೇ ಗೇಲಿ ಮಾಡುವುದನ್ನು ಮುಂದುವರೆಸಿದ್ದ. ಇದರಿಂದ ಪಿಯುಸಿ ವಿದ್ಯಾರ್ಥಿಗೆ ಕೋಪ ಬಂದು, ತನ್ನ ಜೊತೆಗೆ ಓದುತ್ತಿದ್ದ ಬಾಲಕನನ್ನು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: Murder: ಗಂಡನ ಉಗುರಿನಲ್ಲಿದ್ದ ರಕ್ತದ ಕಲೆಯಿಂದ ಬಯಲಾಯ್ತು ಹೆಂಡತಿ ಕೊಲೆಯ ರಹಸ್ಯ!

ಇದನ್ನೂ ಓದಿ
Image
ನೀರು ಕುಡಿಯಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದ ಮೂವರು ಹೆಣ್ಣುಮಕ್ಕಳ ದುರ್ಮರಣ: ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ!
Image
ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರಿಯಕರನ ಸಮಾಧಿ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಕ್ರಿಯೆ
Image
ಒಂದೇ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಗೆಳೆಯರು: ಬೆಂಕಿ ಹಚ್ಚಿ ಓರ್ವ ಗೆಳೆಯನ ಕೊಲೆ

ಸಹಪಾಠಿಯನ್ನು ಕೊಲ್ಲಲು ನಿರ್ಧರಿಸಿದ ವಿದ್ಯಾರ್ಥಿ ಆತನನ್ನು ಹೊರಗೆ ಕರೆದು, ಕುಡುಗೋಲು ಹಾಗೂ ಚಾಕುವಿನಿಂದ ಹಲವು ಬಾರಿ ಇರಿದಿದ್ದಾನೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಹೆದ್ದಾರಿಯಲ್ಲಿ ಅವರ ಶಾಲೆಯ ಸಮೀಪದಲ್ಲೇ ಕೊಲೆ ಸಂಭವಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

“ಬಾಡಿ ಶೇಮಿಂಗ್ ಆತಂಕ, ಖಿನ್ನತೆಗೆ ಕಾರಣವಾಗುತ್ತದೆ, ದೇಹದ ಡಿಸ್ಮಾರ್ಫಿಕ್ ಡಿಸಾರ್ಡರ್ ಅನ್ನು ಉಂಟುಮಾಡುತ್ತದೆ. ಅನೇಕ ಬಾರಿ, ಇದು ಕೋಪ ಅಥವಾ ತೀವ್ರ ಖಿನ್ನತೆಯಾಗಿ ಹೊರಹೊಮ್ಮುತ್ತದೆ. ಇದರಿಂದ ಪ್ರಾಣಹಾನಿಯೂ ಸಂಭವಿಸಬಹುದು.” ಎಂದು ತಮಿಳುನಾಡು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ಶರಣ್ಯ ಜೈಕುಮಾರ್ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Wed, 18 May 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ