AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಅಡುಗೆ ಭಟ್ಟನ ಹತ್ಯೆ; ಕಾರಣವೇನು ಗೊತ್ತಾ?

ಮಹಾನಗರದಲ್ಲಿ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರ ಭಯವೇ ಇಲ್ಲದಂತೆ ಕಾಣುತ್ತಿದೆ. ಹೌದು ಇದೀಗ ಚಾಕುವಿನಿಂದ ಇರಿದು ಅಡುಗೆ ಭಟ್ಟನನ್ನ ಕೊಲೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರದ 6ನೇ ಬ್ಲಾಕ್​ನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಚಾಕುವಿನಿಂದ ಇರಿದು ಅಡುಗೆ ಭಟ್ಟನ ಹತ್ಯೆ; ಕಾರಣವೇನು ಗೊತ್ತಾ?
ಮೃತ ವ್ಯಕ್ತಿ
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Jul 29, 2023 | 9:08 AM

Share

ಬೆಂಗಳೂರು, ಜು.29: ಮಹಾನಗರದಲ್ಲಿ ಕ್ರೈಂ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸರ ಭಯವೇ ಇಲ್ಲದಂತೆ ಕಾಣುತ್ತಿದೆ. ಹೌದು ಇದೀಗ ಚಾಕುವಿನಿಂದ ಇರಿದು ಅಡುಗೆ ಭಟ್ಟನನ್ನ ಕೊಲೆ ಮಾಡಿದ ಘಟನೆ ಬೆಂಗಳೂರಿನ ರಾಜಾಜಿನಗರದ(Rajajinagar) 6ನೇ ಬ್ಲಾಕ್​ನಲ್ಲಿ ನಡೆದಿದೆ. ರವಿ ಭಂಡಾರಿ(44) ಮೃತ ವ್ಯಕ್ತಿ. ಮೃತ ರವಿ ಭಂಡಾರಿ ರಾಜಾಜಿನಗರದ ಪಿಜಿಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ. ಅದೇ ಪಿಜಿಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಪದ್ಮಾವತಿ ಎಂಬ ಮಹಿಳೆಯ ಪುತ್ರ ರಾಹುಲ್​ ಎಂಬಾತ ಈ ಕೃತ್ಯವೆಸಗಿದ್ದಾನೆ.

ತನ್ನ ತಾಯಿ ಜೊತೆ ಅನ್ಯೋನ್ಯವಾಗಿ ಮಾತಾಡ್ತಿದ್ದಾನೆಂದು ಹತ್ಯೆ

ಹೌದು, ಒಂದೇ ಕಡೆಯಲ್ಲಿ ಕೆಲಸ ಮಾಡುವಾಗ ಮಾತಾಡಿಕೊಳ್ಳುವುದು ಸಹಜ. ಆದರೆ, ಆರೋಪಿ ರಾಹುಲ್ ತನ್ನ ತಾಯಿ ಜೊತೆ ಅನ್ಯೋನ್ಯವಾಗಿ ಮಾತಾಡುತ್ತಿದ್ದಾನೆಂದು ಕೊಲೆ ಮಾಡಿದ್ದಾನೆ. ಇನ್ನು ಘಟನೆಗೂ ಮುನ್ನ ಆರೋಪಿ ತಾಯಿ ಪದ್ಮಾವತಿಯವರು ಪಿಜಿಯಲ್ಲಿದ್ದರು. ಈ ವೇಳೆ ರಾಹುಲ್, ರವಿ ಭಂಡಾರಿಗೆ ಕರೆ ಮಾಡಿ ನಿನ್ನ ಜೊತೆ ಮಾತಾಡಬೇಕೆಂದು ಮನೆಗೆ ಕರೆಸಿಕೊಂಡಿದ್ದ. ನಂತರ ಚಾಕುವಿನಿಂದ ಇರಿದು ಅಡುಗೆಭಟ್ಟ ರವಿ ಭಂಡಾರಿಯನ್ನ ಹತ್ಯೆ ಮಾಡಿ, ಮೊಬೈಲ್​ ಸ್ವಿಚ್​​ಆಫ್​ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಭೀಮಾ ನದಿಯಲ್ಲಿ ಕಾಲೇಜು ವಿದ್ಯಾರ್ಥಿ ಶವ ಪತ್ತೆ ಪ್ರಕರಣ; ಕೊಟ್ಟ ಹಣ ವಾಪಾಸ್​ ಕೇಳಿದ್ದಕ್ಕೆ ಸ್ನೇಹಿತರಿಂದಲೇ ಕೊಲೆ, ಇಬ್ಬರ ಬಂಧನ

ಬೈಕ್​ನಲ್ಲಿದ್ದ ಬಂಗಾರದ ನಕ್ಲೇಸ್ ಹಾಗೂ 20 ಸಾವಿರ ಹಣ ಕಳವು

ತುಮಕೂರು: ಬೈಕ್​ನಲ್ಲಿದ್ದ ಬಂಗಾರದ ನಕ್ಲೇಸ್ ಹಾಗೂ 20 ಸಾವಿರ ಹಣ ಕಳ್ಳತನವಾದ ಘಟನೆ ಜಿಲ್ಲೆಯ ಪಾವಗಡ ಪಟ್ಟಣದ ಕರ್ನಾಟಕ ಬ್ಯಾಂಕ್ ಬಳಿ ನಡೆದಿದೆ. ಪಾವಗಡ ತಾಲೂಕಿನ ಸಿಕೆ ಪುರ ಗ್ರಾಮದ ನಾಗರತ್ನಮ್ಮ ಎಂಬುವವರಿಗೆ ಸೇರಿದ ಸುಮಾರು 2 ಲಕ್ಷ ರೂ ಮೌಲ್ಯದ ಒಡವೆ‌ ಹಾಗೂ ಹಣ ಇದಾಗಿದ್ದು, ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್