ದೇವನಹಳ್ಳಿ, ಫೆ.20: ಸ್ನೇಹಿತನನ್ನ ಡ್ರಾಪ್ ಮಾಡಲು ಅಪಾರ್ಟ್ಮೆಂಟ್ಗೆ ಹೋದ ಯುವಕನ ಮೇಲೆ ಸೆಕ್ಯುರಿಟಿ ಗಾರ್ಡ್ಗಳು ಲಾಠಿಗಳಿಂದ ಹಲ್ಲೆ (Assault) ನಡೆಸಿದ ಪ್ರಕರಣ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಮಾರಸಂದ್ರ ಬಳಿ ನಡೆದಿದೆ. ಲಾಠಿಗಳಿಂದ ಹಲ್ಲೆ ನಡೆಸುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅರ್ಚನ್ (19) ಹಲ್ಲೆಗೊಳಗಾದ ಯುವಕ. ಮಾರಸಂದ್ರ ಬಳಿಯ ಪ್ರಾವಿಡೆಂಟ್ ವೆಲ್ವರ್ಥ ಸಿಟಿ ಅಪಾರ್ಟ್ಮೆಂಟ್ನಲ್ಲಿ ಅರ್ಚನ್ ಮೇಲೆ ಭದ್ರತಾ ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ. ವಿಚಾರ ತಿಳಿದ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯು ಯುವಕನ ಮೇಲಿನ ಹಲ್ಲೆಯನ್ನು ಖಂಡಿಸಿದ್ದು, ಅಪಾರ್ಟ್ಮೆಂಟ್ ಮುಂದೆ ಜಮಾಯಿಸಿದ ಕಾರ್ಯಕರ್ತರು ಹಲ್ಲೆ ನಡೆಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ಪುಂಡರ ಅಟ್ಟಹಾಸ; ಯುವಕ-ಯುವತಿ ಇದ್ದ ಬೈಕ್ ಅಡ್ಡ ಹಾಕಿ ಹಲ್ಲೆ
ಅಲ್ಲದೆ, ಯುವಕನ ಮೇಲಿನ ಹಲ್ಲೆಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಗೆ ಈ ಅಪಾರ್ಟ್ಮೆಂಟ್ ಬರುತ್ತದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:26 pm, Tue, 20 February 24