ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಮೂವರ ಸೆರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 29, 2023 | 10:19 PM

ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯ ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಬಿಹಾರ ಮೂಲದ ಮೂವರನ್ನು ಸಿಸಿಬಿ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಒಟ್ಟು 10 ಪ್ರಕರಣಗಳನ್ನು ಮಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಮೂವರ ಸೆರೆ
ಬಂಧಿತರು
Follow us on

ಮಂಗಳೂರು, ಅಕ್ಟೋಬರ್​​​ 29: ನೋಂದಣಿದಾರರ ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಿದ್ದ ಬಿಹಾರ ಮೂಲದ ಮೂವರನ್ನು ಸಿಸಿಬಿ ಪೊಲೀಸರು ಅರೆಸ್ಟ್ (arrested)​ ಮಾಡಿದ್ದಾರೆ. ದೀಪಕ್ ಕುಮಾರ್ ಹೆಂಬ್ರಮ್, ವಿವೇಕ್ ಕುಮಾರ್ ಬಿಶ್ವಾಸ್, ಮದನ್ ಕುಮಾರ್​ ಬಂಧಿತರು. ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ ಮೂಲಕ ವಂಚಿಸುತ್ತಿದ್ದರು. ಮಂಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯ ನೋಂದಣಿದಾರರ ಬ್ಯಾಂಕ್ ಖಾತೆಯ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಮಂಗಳೂರು ನಗರ ಸೆನ್‌ ಕ್ರೈಂ ಠಾಣೆಯಲ್ಲಿ ಹಲವು ದೂರು ಬಂದಿದ್ದು, ಒಟ್ಟು 10 ಪ್ರಕರಣಗಳನ್ನು ಮಂಗಳೂರು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಕಳೆದ 6 ತಿಂಗಳ‌ ಅವಧಿಯಲ್ಲಿ ಜನರು ಆಸ್ತಿ ಹಾಗೂ ಇತರ ನೋಂದಣಿ ಮಾಡಿದ್ದರು. ವಿವಿಧ ಬ್ಯಾಂಕ್ ಖಾತೆಗಳಿಂದ AEPS ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಕಾವೇರಿ-2.0 ವೆಬ್​ಸೈಟ್​ನ್ನೇ ಮೂವರು ಆರೋಪಿಗಳು ಹ್ಯಾಕ್ ಮಾಡಿದ್ದಾರೆ. ವೆಬ್​ಸೈಟ್​ನಿಂದ ದಾಖಲಾತಿಗಳನ್ನು‌ ಅಕ್ರಮವಾಗಿ ಪಡೆದಿದ್ದರು.

ನೋಂದಣಿದಾರರ ಆಧಾರ್ ಸಂಖ್ಯೆ ಹೆಬ್ಬೆರಳ ಗುರುತು ಕೂಡ ಸಂಗ್ರಹಿಸಿದ್ದು, ಸ್ಕ್ಯಾನರ್ ಮೂಲಕ ಬೆರಳುಮುದ್ರೆ ಸ್ಕ್ಯಾನ್ ಮಾಡುತ್ತಿದ್ದರು. ಸದ್ಯ ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್ ಖಾತೆಗಳ ವಹಿವಾಟು ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ: ಗಲಾಟೆ ವೇಳೆ ಸೀರೆ ಹಿಡಿದು ವ್ಯಕ್ತಿ ಎಳೆದಾಡಿದ ಆರೋಪ: ಮನನೊಂದು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಬ್ಯಾಂಕ್​ ಖಾತೆಯಲ್ಲಿ ಒಟ್ಟು 3 ಲಕ್ಷದ 60 ಸಾವಿರದ 242 ರೂ. ಪತ್ತೆಯಾಗಿದ್ದು, ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ರಾಜ್ಯಕ್ಕೆ ‌ಸಂಬಂಧಿಸಿದ ಸಾವಿರಕ್ಕೂ ಹೆಚ್ಚು ನೋಂದಣಿ ಪತ್ರಗಳ PDF ಪ್ರತಿ, ಇತರೆ ರಾಜ್ಯಗಳ 300ಕ್ಕೂ ಹೆಚ್ಚು ಪತ್ರಗಳ PDF ಪ್ರತಿ ಸಂಗ್ರಹಿಸಿಟ್ಟಿದ್ದು ಪತ್ತೆಯಾಗಿದೆ. ಬಂಧಿತ ಮೂವರು ಆರೋಪಿಗಳನ್ನು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಪೀಣ್ಯ ಫ್ಲೈಓವರ್ ಮೇಲೆ ಸರಣಿ ಅಪಘಾತ

ಬೆಂಗಳೂರು: ನಗರದ ಪೀಣ್ಯ ಫ್ಲೈಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದೆ. ಸಡನ್ ಬ್ರೇಕ್ ಹಾಕಿದ ಪರಿಣಾಮ ಐದು ಕಾರುಗಳ ಮಧ್ಯೆ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಪೀಣ್ಯ ಫ್ಲೈಓವರ್ ಮೇಲೆ ಟ್ರಾಫಿಕ್‌ಜಾಮ್ ಉಂಟಾಗಿದ್ದು, ಟ್ರಾಫಿಕ್ ನಿಯಂತ್ರಿಸಲು ಪೀಣ್ಯ ಸಂಚಾರಿ ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಬೇಸ್ಮೆಂಟ್‌ನಲ್ಲಿ ಸಂಗ್ರಹವಾಗಿದ್ದ ನೀರಿಗೆ ಬಿದ್ದು ಮಕ್ಕಳಿಬ್ಬರು ಸಾವು

ಬೇಸ್ಮೆಂಟ್‌ನಲ್ಲಿ ಸಂಗ್ರಹವಾಗಿದ್ದ ನೀರಿಗೆ ಬಿದ್ದು ಮಕ್ಕಳಿಬ್ಬರು ಸಾವನ್ನಪ್ಪಿರುವಂತಹ ಘಟನೆ ಬನ್ನೇರುಘಟ್ಟ ರಸ್ತೆಯ ಡೇರಿ ಸರ್ಕಲ್ ಸಮೀಪ ನಡೆದಿದೆ. ಅರ್ಷಲನ್ ಖಾನ್(9), ಅಮೀನ್ ಖಾನ್(7) ಮೃತಪಟ್ಟ ಮಕ್ಕಳು. ಅಕ್ಟೋಬರ್ 27ರ ಸಂಜೆಯಿಂದ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದರು. ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಬೇಸ್ಮೆಂಟ್‌ನಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಮಕ್ಕಳ ಶವ ಪತ್ತೆ ಆಗಿವೆ. ನೀರಿನಲ್ಲಿದ್ದ ಮಕ್ಕಳಿಬ್ಬರ ಮೃತದೇಹವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರತೆಗೆದಿದ್ದಾರೆ. ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.