ಪೊಲೀಸ್ ಕಾನ್​ಸ್ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಇಬ್ಬರು ಪತ್ರಕರ್ತರು ಸೇರಿ 9 ಜನರ ವಿರುದ್ಧ ಎಫ್​ಐಆರ್ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 18, 2022 | 8:37 AM

ಗದಗ ತಾಲೂಕಿನ ‌ಲಕ್ಕುಂಡಿ ಗ್ರಾಮದ ಮನೆಯಲ್ಲಿ ಮಾರ್ಚ್ 16 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಕೊಂಡಿದ್ದು, ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ಪೊಲೀಸ್ ಕಾನ್​ಸ್ಟೇಬಲ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಇಬ್ಬರು ಪತ್ರಕರ್ತರು ಸೇರಿ 9 ಜನರ ವಿರುದ್ಧ ಎಫ್​ಐಆರ್ ದಾಖಲು
ಸಾಂದರ್ಭಿಕ ಚಿತ್ರ
Follow us on

ಗದಗ: ಡೆತ್‌ ನೋಟ್ ಬರೆದಿಟ್ಟು ಪೊಲೀಸ್ ಪೆದೆ ಆತ್ಮಹತ್ಯೆ (Police Constable Suicide Case) ಮಾಡಿಕೊಂಡಿದ್ದಾರೆ. ನಗರದ ರಾಜೀವ ಗಾಂಧಿ ಪೊಲೀಸ್ ಠಾಣೆ ಪೊಲೀಸ್ ಕಾನಸ್ಟೇಬಲ್ ಅಜ್ಜನಗೌಡ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಗದಗ ತಾಲೂಕಿನ ‌ಲಕ್ಕುಂಡಿ ಗ್ರಾಮದ ಮನೆಯಲ್ಲಿ ಮಾರ್ಚ್ 16 ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಕೊಂಡಿದ್ದು, ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇಬ್ಬರು ಪತ್ರಕರ್ತರು, ಪೊಲೀಸರು ಸೇರಿ ಒಂಬತ್ತು ಜನರ ವಿರುದ್ಧ ಬ್ಲಾಕ್ ಮೇಲ್, ಕಿರುಕುಳ ದೂರು ಕೇಳಿಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಕಾನಸ್ಟೇಬಲ್​ಗೆ ಬ್ಲಾಕ್ ಮೇಲ್ ಮಾಡಿದ್ದು, ಇಬ್ಬರು ಪತ್ರಕರ್ತರು, ಓರ್ವ ಎಎಸ್ಐ, ನಾಲ್ಕು ಜನ ಪೊಲೀಸರು ಸೇರಿ ಒಂಬತ್ತು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ರಾಜ್ಯ ಮಟ್ಟದ ನ್ಯೂಸ್ ಚಾನಲ್ ವರದಿಗಾರ ಭೀಮನಗೌಡ ಪಾಟೀಲ್, ಪತ್ರಿಕೆ ವರದಿಗಾರ ಗಿರೀಶ್ ಕುಲಕರ್ಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಟಗೇರಿ ಬಡಾವಣೆ ಪೊಲೀಸ್ ಎಎಸ್ಐ ಪುಟ್ಟಪ್ಪ ಕೌಜಲಗಿ, ಪೊಲೀಸ್ ಕಾನಸ್ಟೇಬಲ್​ಗಳಾದ ಸಿ. ಆರ್. ನಾಯಕರ, ದಾದಾಪೀರ್ ಮಜಲಾಪೂರ, ಶರಣಪ್ಪ ಅಂಗಡಿ, ಅಂದಪ್ಪಾ ಹಂಜಿ, ಹಣ ಡಬ್ಲಿಂಗ್ ಆರೋಪಿ ವಿಠ್ಠಲ ಹಬೀಬ್ ಹಾಗೂ ಗುರುರಾಜ ತಳ್ಳಿಹಾಳ ವಿರುದ್ಧವೂ ವಿರುದ್ಧ ಕೂಡ ಎಫ್​ಐಆರ್​ ದಾಖಲು ಮಾಡಲಾಗಿದೆ. ಈ ಇಬ್ಬರು ವರದಿಗಾರರು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನಸ್ಟೇಬಲ್ ಅಜ್ಜುಗೌಡಗೆ ಬ್ಲ್ಯಾಕ್ ಮೇಲ್ ಮತ್ತು ಕಿರುಕುಳ ನೀಡಲಾಗಿದೆ. ಡೆತ್ ನೋಟ್​ನಲ್ಲಿ ಪತ್ರಕರ್ತರು, ಪೊಲೀಸ್ ಸಿಬ್ಬಂದಿ ಸೇರಿ ಒಂಬತ್ತು ಜನರ ಬಗ್ಗೆ ಉಲ್ಲೇಖಿಸಲಾಗಿದೆ.

ಪೆಟ್ರೋಲ್​ ಸುರಿದು ಯುವತಿ ಹತ್ಯೆ:

ಎಲೆಕ್ಟ್ರಾನಿಕ್ ಸಿಟಿ: ಯುವತಿಗೆ ಪೆಟ್ರೋಲ್ ಸುರಿದು ಹತ್ಯೆ ಮಾಡಿರುವಂತಹ ಘಟನೆ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿಯ ಫ್ಲೈಓರ್ ಬಳಿ ನಡೆದ ಘಟನೆ ನಡೆದಿದೆ. ದಾನೇಶ್ವರಿ (25) ಮೃತ ಯುವತಿ. ಯುವತಿ ‌ತಂಗಿಯಿಂದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ದೂರು ನೀಡಲಾಗಿದೆ. ಬಿಜಾಪುರ ಮೂಲದ ಶಿವು ಎಂಬುವವನ ಮೇಲೆ ದೂರು ನೀಡಲಾಗಿದ್ದು, ಕೆಲವು ವರ್ಷಗಳಿಂದ ದಾನೇಶ್ವರಿ ಪ್ರೀತಿಸುತ್ತಿದ್ದ. ಯುವತಿ ಮದುವೆ ಆಗುವಂತೆ ಹೇಳಿದ್ದಳು. ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಅಂತ ನುಣುಚಿಕೊಂಡಿದ್ದ. ಪದೇ ಪದೇ ಮದುವೆ ವಿಚಾರ ಬೇಡ ಅಂದಿದ್ದ. ಮದುವೆ ವಿಚಾರ ಮಾತಾಡಿದ್ರೆ ಕೊಲ್ಲೋದಾಗಿ ಧಮ್ಕಿ ಹಾಕುತ್ತಿದ್ದ. ರವಿವಾರ ಭೇಟಿ ಆಗುವಂತೆ ಯುವತಿಗೆ ಹೇಳಿದ್ದು, ಎಲೆಕ್ಟ್ರಾನಿಕ್ ಸಿಟಿ ಕೆಳಗಿನ ನಿರ್ಜನ ಪ್ರದೇಶ ಬಳಿ ಬಂದಾಗ ಕೃತ್ಯ ಮಾಡಲಾಗಿದೆ. ಯುವತಿ ಕುಟುಂಬಸ್ಥರು ಆರೋಪಿಸಿದ್ದು, ಶೇಕಾಡ 70 ದೇಹದ ಭಾಗ ಸುಟ್ಟ ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ. ಯುವತಿ ಸುಟ್ಟ ನಂತರ ತಾನೇ ಆಸ್ಪತ್ರೆಗೆ ದಾಖಲು ಮಾಡಿದ್ದು, ಶಿವು ಹಾಗೂ ಸ್ನೇಹಿತರು ಸೇರಿ ಸುಟ್ಟಿದ್ದಾರೆ ಅಂತ ತಂದೆ ಆರೋಪಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಕರಣ ದಾಖಲಾಗಿದೆ.

ಮಟ್ಕಾ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳು ಲಾಕ್:

ಮೈಸೂರು: ಮಟ್ಕಾ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 20,010 ನಗದು, ದಂಧೆಗೆ ಬಳಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್’ಗೆ ಕಾರು ಡಿಕ್ಕಿ:

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್’ಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿರುವಂತ ಘಟನೆ ಸಂಭವಿಸಿದೆ. ನಾಗರಭಾವಿ ಫ್ಲೈ ಓವರ್ ಮೇಲೆ ಘಟನೆ ನಡೆದ್ದು, ಘಟನೆಯಲ್ಲಿ ಕಾರು ಚಾಲಕ ಹಾಗೂ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ದಂಪತಿಗಳನ್ನು ನಾಗರಭಾವಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಾಗರಭಾವಿ ಫ್ಲೈ ಓವರ್ ರಸ್ತೆಯಲ್ಲಿ ಹಂಪ್ಸ್’ಗಳಿಲ್ಲ. ದ್ವಿಚಕ್ರ ವಾಹನ ಸವಾರರ ಬೈಕ್ ವೀಲೀಂಗ್ ಈ ರಸ್ತೆಯಲ್ಲಿ ಹೆಚ್ಚು. ಫ್ಲೈ ಓವರ್ ಮೇಲೆ ಅವೈಜ್ಞಾನಿಕ ತಿರುವುಗಳು ಹೆಚ್ಚಾಗಿವೆ. ಒಂದೇ ತಿಂಗಳಲ್ಲಿ ಇದು ಮೂರನೇ ಅಪಘಾತ ಸಂಭವಿಸಿದೆ. ಎಷ್ಟೇ ಬಾರಿ‌ ಮನವಿ ಮಾಡಿದ್ರು ಟ್ರಾಫಿಕ್ ಪೊಲೀಸರು ಇತ್ತ ಗಮನ ಹರಿಸ್ತಿಲ್ಲ ಅಂತ ಸ್ಥಳಿಯ ಕಾರು ಚಾಲಕರ ಆರೋಪ ಮಾಡಿದ್ದಾರೆ.

ಕಿಡಿಗೇಡಿಗಳಿಂದ ಬೈಕ್​ಗೆ ಬೆಂಕಿ:

ತುಮಕೂರು: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್​ಗಳಿಗೆ ಅಪರಿಚಿತ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹೊಸಕೋಟೆ ಗ್ರಾಮದ ಚೌಡೇಶ್ವರಿ ಕಾಲೋನಿಯಲ್ಲಿ ಘಟನೆ ನಡೆದಿದೆ. ಮನೆಯ ಮುಂದೆ ನಿಲ್ಲಿಸಿದ್ದ ಬಿಸಿ ಬಾಲಾಜಿಯವರ ಬೈಕ್ ಹಾಗೂ ಶ್ರೀದರ್​ಗೆ ಬೈಕ್​ಗೆ ಅಪರಿಚಿತರಿಂದ ಬೆಂಕಿ ಹಚ್ಚಿ ಕೃತ್ಯ ಎಸಗಲಾಗಿದೆ. ವೈಎನ್ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:

ಮಂಟಪಕ್ಕೆ ಬರುವ ವಧುವನ್ನು ತನ್ನ ನೃತ್ಯದ ಮೂಲಕ ಬರ ಮಾಡಿಕೊಂಡ ವರ; ಇಲ್ಲಿದೆ ನೆಟ್ಟಿಗರು ಮೆಚ್ಚಿಕೊಂಡ ವೈರಲ್ ವಿಡಿಯೋ

Published On - 8:33 am, Fri, 18 March 22