Crime News: ಬರೀ ನಾಲ್ಕೇ ನಾಲ್ಕು ಲೋಹದ ತುಂಡು, ಬೆಲೆ 4250 ಕೋಟಿ ರೂ…ಇಬ್ಬರು ಅಂದರ್

| Updated By: ಝಾಹಿರ್ ಯೂಸುಫ್

Updated on: Aug 26, 2021 | 6:13 PM

Crime News in Kannada: ದೇಶದ ಸಾಮಾನ್ಯ ವ್ಯಕ್ತಿಗೆ ವಿಕಿರಣಶೀಲ ವಸ್ತು ಕ್ಯಾಲಿಫೋರ್ನಿಯಂ ಅನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಿಲ್ಲ.

Crime News: ಬರೀ ನಾಲ್ಕೇ ನಾಲ್ಕು ಲೋಹದ ತುಂಡು, ಬೆಲೆ 4250 ಕೋಟಿ ರೂ...ಇಬ್ಬರು ಅಂದರ್
radioactive metal californium
Follow us on

ದುಬಾರಿ ಮೌಲ್ಯದ ರೇಡಿಯೋ ಆಕ್ಟೀವ್ ಮೆಟಲ್ ಕ್ಯಾಲಿಫೋರ್ನಿಯಂ (ವಿಕಿರಣಶೀಲ ಲೋಹ) ಅನ್ನು ಸಾಗಿಸುತ್ತಿದ್ದ ಇಬ್ಬರನ್ನು ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 4250 ಕೋಟಿ ರೂ. ಮೌಲ್ಯದ ವಿಕಿರಣಶೀಲ ಲೋಹದ ಕ್ಯಾಲಿಫೋರ್ನಿಯಂ ಅನ್ನು ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಿಶ್ವಾಸಾರ್ಹ ಮೂಲದಿಂದ ಬಂದ ಮಾಹಿತಿಯಂತೆ ಕಾರ್ಯಾಚರಣೆಗಿಳಿದ್ದ ಸಿಐಡಿ, ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣಿಟ್ಟಿತ್ತು. ಈ ಸೀಕ್ರೆಟ್ ಕಾರ್ಯಾಚರಣೆಯ ಮೂಲಕ ದುಬಾರಿ ರೇಡಿಯೋ ಆಕ್ಟೀವ್ ಮೆಟಲ್ ಕ್ಯಾಲಿಫೋರ್ನಿಯಂ ಸಾಗಿಸುತ್ತಿದ್ದ ಲೆಫ್ಟಿನೆಂಟ್ ಬಿಸ್ವನಾಥ್ ಕರ್ಮಾಕರ್ ಅವರ ಮಗ ಶೈಲೆನ್ ಕರ್ಮಾಕರ್ (41 ವರ್ಷ) ಹಾಗೂ ಅಸಿತ್ ಘೋಷ್ (49 ವರ್ಷ) ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಆರೋಪಿಗಳ ಬಳಿ ಸುಮಾರು 250.5 ಗ್ರಾಂ ತೂಕದ ನಾಲ್ಕು ಬೂದಿ ಬಣ್ಣದ (ರೇಡಿಯೋ ಆಕ್ಟೀವ್ ಮೆಟಲ್ ಕ್ಯಾಲಿಫೋರ್ನಿಯಂ) ಕಲ್ಲುಗಳಿದ್ದವು. ಕತ್ತಲೆಯಲ್ಲಿ ಆ ಕಲ್ಲುಗಳು ಹೊಳೆಯುತ್ತಿದ್ದವು. ಆ ಕಲ್ಲುಗಳಿಂದ ಬೆಳಕು ಪ್ರತಿಫಲಿಸುತ್ತಿತ್ತು. ಕಲ್ಲುಗಳನ್ನು ಪರಿಶೀಲಿಸಿದಾಗ ಅದು ಖನಿಜ ಎಂಬುದು ಗೊತ್ತಾಗಿದೆ. ಪ್ರಾಥಮಿಕ ತನಿಖೆಯಿಂದ ಜಪ್ತಿ ಮಾಡಿದ ವಸ್ತುಗಳು ಕ್ಯಾಲಿಫೋರ್ನಿಯಂ ಎಂದು ತಿಳಿದು ಬಂದಿದ್ದು, ಇದರ ಭಾರತೀಯ ಮೌಲ್ಯ ಪ್ರತಿ ಗ್ರಾಂಗೆ 17 ಕೋಟಿ ರೂ. ಇದೀಗ ಆರೋಪಿಗಳಿಂದ ಇಂತಹ ನಾಲ್ಕು ಲೋಹ ವಶಪಡಿಸಿಕೊಳ್ಳಲಾಗಿದ್ದು, ಅದರ ಒಟ್ಟು ಮೌಲ್ಯ 4250 ಕೋಟಿ ರೂ ಎಂದು ತಿಳಿದು ಬಂದಿದೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.

ರೇಡಿಯೋ ಆಕ್ಟೀವ್ ಮೆಟಲ್ ಕ್ಯಾಲಿಫೋರ್ನಿಯಂ ಎಂದರೇನು?
ದೇಶದ ಸಾಮಾನ್ಯ ವ್ಯಕ್ತಿಗೆ ವಿಕಿರಣಶೀಲ ವಸ್ತು ಕ್ಯಾಲಿಫೋರ್ನಿಯಂ ಅನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಿಲ್ಲ. ಅತ್ಯಂತ ದುಬಾರಿ ರೇಡಿಯೋ ಆಕ್ಟೀವ್ ಮೆಟಲ್ ಕ್ಯಾಲಿಫೋರ್ನಿಯಂ ವಸ್ತುಗಳನ್ನು ಪರವಾನಗಿ ಪಡೆದವರು ಮಾತ್ರ ಮಾರಾಟ ಮಾಡಬಹುದು. ಭಾರತದಲ್ಲಿ ಕ್ಯಾಲಿಫೋರ್ನಿಯಂ ಮುಂಬೈನಲ್ಲಿರುವ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ ಮಾತ್ರ ಲಭ್ಯವಿದೆ. ರೇಡಿಯೋ ಆಕ್ಟೀವ್ ಮೆಟಲ್ ಕ್ಯಾಲಿಫೋರ್ನಿಯಂ ಕೃತಕ ವಸ್ತುವಾಗಿದ್ದು, ಇದರ ಬಣ್ಣ ಬೆಳ್ಳಿಯಂತೆ ಇರುತ್ತವೆ. ಇದನ್ನು ಬ್ಲೇಡ್‌ನಿಂದ ತುಂಡುಗಳಾಗಿ ಕತ್ತರಿಸಬಹುದು. ಕ್ಯಾಲಿಫೋರ್ನಿಯಂನ ವಿರಳತೆಯನ್ನು ಜಗತ್ತಿನಲ್ಲಿ ಪ್ರತಿ ವರ್ಷ ಕೇವಲ ಅರ್ಧ ಗ್ರಾಂ ಮಾತ್ರ ಉತ್ಪಾದಿಸಲಾಗುತ್ತದೆ ಎಂಬ ಅಂಶದಿಂದ ಅಳೆಯಬಹುದು. ಪ್ರಸ್ತುತ ಇದರ ಒಂದು ಗ್ರಾಂನ ಬೆಲೆ 170 ಮಿಲಿಯನ್‌ಗಿಂತ ಹೆಚ್ಚು.

ರೇಡಿಯೋ ಆಕ್ಟೀವ್ ಮೆಟಲ್ ಕ್ಯಾಲಿಫೋರ್ನಿಯಂ ಅನ್ನು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ, ಇದನ್ನು ಕ್ಯಾನ್ಸರ್ ರೋಗಿಗಳು ಮತ್ತು ಎಕ್ಸ್-ರೇ ಯಂತ್ರಗಳಲ್ಲಿ ಬಳಸಲಾಗುತ್ತದೆ. ಕೈಗಾರಿಕಾ ಕ್ಷೇತ್ರದಲ್ಲಿ, ತೈಲ ಬಾವಿಗಳಲ್ಲಿ ನೀರು ಮತ್ತು ತೈಲ ಪದರಗಳ ಪತ್ತೆ, ಚಿನ್ನ ಮತ್ತು ಬೆಳ್ಳಿಯ ಪತ್ತೆ, ಪೋರ್ಟಬಲ್ ಮೆಟಲ್ ಡಿಟೆಕ್ಟರ್‌ಗಳ ಜೊತೆಗೆ ಇದನ್ನು ಬಳಸಲಾಗುತ್ತದೆ. ಕ್ಯಾಲಿಫೋರ್ನಿಯಂ ಅಪಾಯಕಾರಿ ವಿಕಿರಣಶೀಲ ಲೋಹವಾಗಿದ್ದು, ಅದು ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಮಾರಕವಾಗಿದೆ. ಇದರಿಂದಲೇ ಕ್ಯಾನ್ಸರ್ ಉಂಟಾಗಬಹುದು. ಇದು ದೇಹದ ರೋಗನಿರೋಧಕ ಶಕ್ತಿ ನಾಶ ಪಡಿಸುತ್ತದೆ. ಲ್ಯುಕೇಮಿಯಾ ಮತ್ತು ಗರ್ಭಪಾತದಂತಹ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತದೆ. ಹೀಗಾಗಿ ಇದರ ಬಳಕೆ ಬಗ್ಗೆ ತುಂಬಾ ಎಚ್ಚರಿಕೆವಹಿಸಲಾಗುತ್ತದೆ.

ಇದನ್ನೂ ಓದಿ: IPL 2021: ಮಾಜಿ RCB ಆಟಗಾರ, ವಿಶ್ವದ ನಂಬರ್ 1 ಬೌಲರ್ ರಾಜಸ್ಥಾನ್ ರಾಯಲ್ಸ್ ಪಾಲು

ಇದನ್ನೂ ಓದಿ: George Garton: RCB ತಂಡಕ್ಕೆ ಎಂಟ್ರಿ ಕೊಟ್ಟಿರುವ ಜಾರ್ಜ್ ಗಾರ್ಟನ್ ಯಾರು..?

ಇದನ್ನೂ ಓದಿ: Video: ಒಂದೇ ಒಂದು ಬೌನ್ಸರ್ ಎಸೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದ!

ಇದನ್ನೂ ಓದಿ: Crime News: ಅಶ್ಲೀಲ ವೀಡಿಯೋ ಕಳುಹಿಸುತ್ತಿದ್ದ ಆಂಟಿ ಅರೆಸ್ಟ್..!

(two people with expensive radioactive metal californium worth Rs 4250 crore at Kolkata airport)