ಲಕ್ನೋದ ಹೋಟೆಲ್ ರೂಂನಲ್ಲಿ ಉಜ್ಬೇಕಿಸ್ತಾನದ ಮಹಿಳೆಯ ಶವ ಪತ್ತೆ
ಉತ್ತರ ಪ್ರದೇಶದ ಲಕ್ನೋದ ಹೋಟೆಲ್ ರೂಂನಲ್ಲಿ ಉಜ್ಬೇಕಿಸ್ತಾನದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ನಂತರ ಪೊಲೀಸರು ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಆಗಮಿಸಿ ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿತು.

ಲಕ್ನೋ (ಮಾರ್ಚ್ 11): ಉತ್ತರ ಪ್ರದೇಶದ ಲಕ್ನೋದ ವಿಭೂತಿ ಖಾಂಡ್ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ವಿದೇಶಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆ ಸಾವಿಗೂ ಮುನ್ನ ಹೋಟೆಲ್‌ನಲ್ಲಿ ದೆಹಲಿಯ ವ್ಯಕ್ತಿಯೊಂದಿಗೆ ಇದ್ದ ಕಾರಣ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆ ವ್ಯಕ್ತಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಹೋಟೆಲ್ ಸಿಬ್ಬಂದಿಯಿಂದ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಪೊಲೀಸರು ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ವಿಧಿವಿಜ್ಞಾನ ತಂಡವೂ ಸ್ಥಳಕ್ಕೆ ಆಗಮಿಸಿ ಘಟನೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಿತು.
ಉಜ್ಬೇಕಿಸ್ತಾನ್ ಪ್ರಜೆ ಎಂದು ಗುರುತಿಸಲ್ಪಟ್ಟ ಮೃತ ಮಹಿಳೆ ಒಂದು ವಾರದ ಹಿಂದೆ ದಕ್ಷಿಣ ದೆಹಲಿಯ ಯುವಕನೊಂದಿಗೆ ಈ ಹೋಟೆಲ್ ನಲ್ಲಿ ರೂಂ ಮಾಡಿದ್ದರು ಎಂದು ವರದಿಯಾಗಿದೆ. ಈ ಇಬ್ಬರು ಮಾರ್ಚ್ 2ರಂದು ಅತಿಥಿ ಇನ್ ಹೋಟೆಲ್‌ಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಮಂಗಳೂರು: ನಾಪತ್ತೆಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿ ಹಾಗೂ ಆಟೋ ಚಾಲಕ ಶವವಾಗಿ ಪತ್ತೆ
ಸತ್ನಮ್ ಸಿಂಗ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ಮಾರ್ಚ್ 6ರಂದು ಹೋಟೆಲ್‌ನಿಂದ ಹೊರಟುಹೋಗಿದ್ದ. ಅಂದಿನಿಂದ ಆ ಮಹಿಳೆ ತನ್ನ ರೂಂನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ಸೋಮವಾರ ಆ ಮಹಿಳೆಯ ಕೋಣೆಗೆ ನೀರು ಮತ್ತು ಊಟವನ್ನು ತಲುಪಿಸಿದ್ದೇವೆ ಎಂದು ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ, ಇಂದು ಕ್ಲೀನಿಂಗ್ ಸಿಬ್ಬಂದಿ ರೂಂನ ಡೋರ್‌ಬೆಲ್ ಬಾರಿಸಿದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.
ಇದನ್ನೂ ಓದಿ: ಪ್ರವಾಸಿಗರ ಮೇಲೆ ಹಲ್ಲೆ, ಮಹಿಳೆಯರಿಬ್ಬರ ಮೇಲೆ ಗ್ಯಾಂಗ್ರೇಪ್: ಇಬ್ಬರ ಬಂಧನ, ಓರ್ವ ಪ್ರವಾಸಿಗ ಶವವಾಗಿ ಪತ್ತೆ
ಹಲವಾರು ಬಾರಿ ಬೆಲ್ ಬಾರಿಸಿದ ನಂತರ ಸಿಬ್ಬಂದಿ ಚಿಂತಿತರಾದರು. ಆ ರೂಂನ ಒಳಗೆ ಹೋಗಲು ಮಾಸ್ಟರ್ ಕೀಯನ್ನು ಬಳಸಿದರು. ಒಳಗೆ ಹೋದಾಗ ಆ ಮಹಿಳೆಯ ಮೃತ ದೇಹವು ನೆಲದ ಮೇಲೆ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ವಿಷಯ ತಿಳಿಸಿದರು. ಪೊಲೀಸರು ಸತ್ನಮ್ ಸಿಂಗ್ ಅವರನ್ನು ಹುಡುಕುತ್ತಿದ್ದಾರೆ
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ