
ನ್ಯೂಯಾರ್ಕ್: ಫುಡ್ ಡೆಲಿವರಿ ಕೊಡುವ ಡೆಲಿವರಿ ಬಾಯ್ಗಳ ಮೇಲೆ ಆಗಾಗ ಹಲ್ಲೆಗಳು ನಡೆಯುವ ಘಟನೆಗಳು ಬಯಲಾಗುತ್ತಲೇ ಇರುತ್ತವೆ. ಫುಡ್ ಡೆಲಿವರಿ ಕೊಡುವುದು ತಡವಾಯಿತೆಂದೋ, ತಪ್ಪಾದ ಆಹಾರವನ್ನು ಡೆಲಿವರಿ ನೀಡಿದರೆಂದೋ ಆನ್ಲೈನ್ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಯುತ್ತಲೇ ಇರುತ್ತದೆ. ಇದೀಗ ನ್ಯೂಯಾರ್ಕ್ ನಗರದ ಬರ್ಗರ್ ಕಿಂಗ್ ಔಟ್ಲೆಟ್ನಲ್ಲಿ ಉದ್ಯೋಗಿಯೊಬ್ಬರು ಫುಡ್ ಕೊಡುವುದು ತಡ ಮಾಡಿದ್ದಕ್ಕೆ ಇತ್ತೀಚೆಗೆ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
ಬರ್ಗರ್ ಕಿಂಗ್ ಶಾಪ್ನಲ್ಲಿ ಫುಡ್ ಆರ್ಡರ್ ಮಾಡಿದ್ದ ಇಬ್ಬರು ಫುಡ್ ಡೆಲಿವರಿ ಕೊಡುವುದು ತಡವಾಗಿದ್ದಕ್ಕೆ ಶಾಪ್ನವರ ಜೊತೆ ಜಗಳವಾಡಿದ್ದರು. ನ್ಯೂಯಾರ್ಕ್ನ ಬ್ರೂಕ್ಲಿನ್ನ ಲಿಂಡೆನ್ ಬೌಲೆವಾರ್ಡ್ನಲ್ಲಿರುವ ಔಟ್ಲೆಟ್ನಲ್ಲಿ ಡಿಸೆಂಬರ್ 4ರಂದು ಈ ಘಟನೆ ನಡೆದಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬರು ರೆಸ್ಟೋರೆಂಟ್ನಲ್ಲಿನ ಕೌಂಟರ್ನಿಂದ ಜಿಗಿದು ನೌಕರನನ್ನು ಹಿಡಿದುಕೊಂಡಿದ್ದರು.
ಕೌಂಟರ್ನಲ್ಲಿ ಇನ್ನೊಂದು ಬದಿಯಲ್ಲಿದ್ದ ವ್ಯಕ್ತಿ ಮತ್ತು ಅವನ ಸಹಚರ ಇಬ್ಬರೂ ಬರ್ಗರ್ ಕಿಂಗ್ ನೌಕರನಿಗೆ ಗುದ್ದುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಬರ್ಗರ್ ಕಿಂಗ್ ಔಟ್ಲೆಟ್ನಲ್ಲಿನ ಇತರ ಸಿಬ್ಬಂದಿಗಳು ಓಡಿಬಂದು ತಮ್ಮ ಸಿಬ್ಬಂದಿಯನ್ನು ಕಾಪಾಡಿದರು. ಇಬ್ಬರೂ ಶಂಕಿತರು ಹೆಡ್ ಜಾಕೆಟ್ಗಳು ಮತ್ತು ಮಾಸ್ಕ್ ಧರಿಸಿದ್ದರು. ಈ ಹಲ್ಲೆಯ ನಂತರ ರೆಸ್ಟೋರೆಂಟ್ನಿಂದ ಹೊರನಡೆದರು.
ನ್ಯೂಯಾರ್ಕ್ ಸಿಟಿ ಪೊಲೀಸ್ ಇಲಾಖೆಯ ಪ್ರಕಾರ, ಬರ್ಗರ್ ಕಿಂಗ್ನ 22 ವರ್ಷದ ವ್ಯಕ್ತಿಯ ಮೇಲೆ ಈ ಹಲ್ಲೆ ನಡೆದಿದೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅಲ್ಲದೆ, ಬರ್ಗರ್ ಕಿಂಗ್ ಔಟ್ಲೆಟ್ಗೆ ನುಗ್ಗಿ ದಾಳಿ ಮಾಡಿದವರ ಬಗ್ಗೆ ಮಾಹಿತಿ ನೀಡಿದವರಿಗೆ ಪೊಲೀಸರು 3,500 ರೂ.ವರೆಗೆ ಬಹುಮಾನವನ್ನು ನೀಡುವುದಾಗಿ ಘೋಷಿಸಲಾಗಿದೆ.
ಇದನ್ನೂ ಓದಿ: Viral Video: ಕೂದಲಿಂದಲೇ 12 ಸಾವಿರ ಕೆಜಿ ತೂಕದ ಬಸ್ ಎಳೆದು ಗಿನ್ನೆಸ್ ರೆಕಾರ್ಡ್ ಮಾಡಿದ ಮಹಿಳೆ!
Viral Video: ಹೆಣ್ಣು ಸಿಂಹವನ್ನು ತೋಳಲ್ಲಿ ಹೊತ್ತು ನಡೆದ ಮಹಿಳೆ; ವಿಡಿಯೋ ನೋಡಿ ನೆಟ್ಟಿಗರು ಶಾಕ್
Published On - 4:20 pm, Wed, 5 January 22