ದೆಹಲಿ: ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ, ದೂರು ದಾಖಲು

ಕೋಪದಲ್ಲಿ ಮಹಿಳೆಯೊಬ್ಬಳು ಗಂಡನ ಕಿವಿಯನ್ನು ಕಚ್ಚಿರುವ ಘಟನೆ ದೆಹಲಿಯ ಸುಲ್ತಾನ್​ಪುರಿ ಪ್ರದೇಶದಲ್ಲಿ ನಡೆದಿದೆ.ಮಹಿಳೆಯು ಬಲವಾಗಿ ಪತಿಯ ಕಿವಿಯನ್ನು ಕಚ್ಚಿರುವ ಕಾರಣ ಬಲಿ ಕಿವಿಯ ಮೇಲ್ಭಾಗ ತುಂಡಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ, ಚಿಕಿತ್ಸೆ ಬಳಿಕ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.ದೂರಿನ ನಂತರ ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 324 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ: ಕೋಪದಲ್ಲಿ ಗಂಡನ ಕಿವಿ ಕಚ್ಚಿ ತುಂಡರಿಸಿದ ಪತ್ನಿ, ದೂರು ದಾಖಲು
ಪೊಲೀಸ್
Image Credit source: NDTV

Updated on: Nov 27, 2023 | 8:21 AM

ಕೋಪದಲ್ಲಿ ಮಹಿಳೆಯೊಬ್ಬಳು ಗಂಡನ ಕಿವಿಯನ್ನು ಕಚ್ಚಿರುವ ಘಟನೆ ದೆಹಲಿಯ ಸುಲ್ತಾನ್​ಪುರಿ ಪ್ರದೇಶದಲ್ಲಿ ನಡೆದಿದೆ.ಮಹಿಳೆಯು ಬಲವಾಗಿ ಪತಿಯ ಕಿವಿಯನ್ನು ಕಚ್ಚಿರುವ ಕಾರಣ ಬಲಿ ಕಿವಿಯ ಮೇಲ್ಭಾಗ ತುಂಡಾಗಿದೆ. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ, ಚಿಕಿತ್ಸೆ ಬಳಿಕ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.ದೂರಿನ ನಂತರ ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 324 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ.20ರಂದು ಬೆಳಗ್ಗೆ 9.20ರ ಸುಮಾರಿಗೆ ಮನೆಯ ಹೊರಗೆ ಕಸ ಎಸೆಯಲು ಹೋಗಿದ್ದೆ, ಮನೆ ಸ್ವಚ್ಛಗೊಳಿಸುವಂತೆ ಪತ್ನಿಗೆ ಹೇಳಿದ್ದೆ, ಮನೆಗೆ ಬಂದ ಕೂಡಲೇ ಪತ್ನಿ ಜಗಳವಾಡಿದ್ದಾಳೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಮನೆಯನ್ನು ಮಾರಿ ತನಗೆ ಪಾಲು ನೀಡುವಂತೆ ಪತ್ನಿ ಕೇಳಿಕೊಂಡಿದ್ದಾಳೆ ಎಂದು ಆಕೆಯ ಪತಿ ಪೊಲೀಸರಿಗೆ ತಿಳಿಸಿದ್ದಾರೆ.

ನಾನು ಅವಳಿಗೆ ಅರ್ಥ ಮಾಡಿಸಲು ಪ್ರಯತ್ನಿಸಿದೆ, ವಾಗ್ವಾದ ನಡೆಯಿತು, ಆಕೆ ಹೊಡೆಯಲು ಬಂದಳು ನಾನು ದೂರ ತಳ್ಳಿದೆ, ಆಗ ಹಿಂದಿನಿಂದ ಬಂದು ಕಿವಿಯನ್ನು ಕಚ್ಚಿದ್ದಾಳೆ. ಆಗ ನನ್ನ ಕಿವಿಯ ಮೇಲ್ಭಾಗ ತುಂಡಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ: ಮೈಸೂರು: ಮಗನ ಸಾವಿನ ಆಘಾತ ತಾಳಲಾರದೆ ಹೃದಯಾಘಾತದಿಂದ ತಾಯಿ ಸಾವು

ನವೆಂಬರ್ 22ರಂದು ಪೊಲೀಸರಿಗೆ ಬಂದು ಲಿಖಿತ ದೂರು ನೀಡಿದ್ದು, ನಾವು ದಾಖಲಿಸಿಕೊಂಡಿದ್ದೇವೆ. ಈ ವಿಷಯದ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us