ಮೈಸೂರು: ಮಗನ ಸಾವಿನ ಆಘಾತ ತಾಳಲಾರದೆ ಹೃದಯಾಘಾತದಿಂದ ತಾಯಿ ಸಾವು
Mysore News: ಮಗನ ಸಾವಿನ ಆಘಾತ ತಾಳಲಾರದೆ ಹೃದಯಾಘಾತದಿಂದ ತಾಯಿ ಸಾವನ್ನಪ್ಪಿರುವಂತಹ ಘಟನೆ ಹೆಚ್ಡಿ ಕೋಟೆ ಹನುಮಂತ ನಗರದಲ್ಲಿ ನಡೆದಿದೆ. ಆ ಮೂಲಕ ಮನಕಲಕುವ ಘಟನೆಗೆ ಮೈಸೂರು ಜಿಲ್ಲೆ ಸಾಕ್ಷಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಸ್ಕೂಟರ್‌ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ.
ಮೈಸೂರು, ನವೆಂಬರ್ 27: ಮಗನ ಸಾವಿನ ಆಘಾತ ತಾಳಲಾರದೆ ಹೃದಯಾಘಾತದಿಂದ ತಾಯಿ ಕೂಡ ಸಾವನ್ನಪ್ಪಿರುವಂತಹ (death) ದಾರುಣ ಘಟನೆ ಜಿಲ್ಲೆಯ ಹೆಚ್ಡಿ ಕೋಟೆ ಹನುಮಂತ ನಗರದಲ್ಲಿ ನಡೆದಿದೆ. ಮಗ ಚಂದ್ರು (45) ತಾಯಿ ದೇವಮ್ಮ (65) ಮೃತ ದುರ್ದೈವಿಗಳು. ಮಗನ ಅಂತ್ಯಕ್ರಿಯೆ ನೆರವೇರಿಸಿ ಮನೆಗೆ ಬಂದಿದ್ದತ ತಾಯಿ ಮರುದಿನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಗನ ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲೇ ತಾಯಿಯ ಅಂತ್ಯಕ್ರಿಯೆ ಮಾಡಲಾಗಿದ್ದು, ಮನಕಲಕುವ ಘಟನೆಗೆ ಮೈಸೂರು ಜಿಲ್ಲೆ ಸಾಕ್ಷಿಯಾಗಿದೆ.
ಸ್ಕೂಟರ್‌ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ: ಮಹಿಳೆ ಸಾವು
ಮತ್ತೊಂದು ಪ್ರಕರಣದಲ್ಲಿ ಮೈಸೂರು ಅರಮನೆ ಮಾರಮ್ಮನ ದೇವಸ್ಥಾನ ಬಳಿ ಸ್ಕೂಟರ್‌ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಅಶೋಕಪುರಂ ನಿವಾಸಿ ರಾಜೇಶ್ವರಿ (38) ಮೃತ ಮಹಿಳೆ. ಬ್ಯಾರಿಕೇಡ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ದೇವರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ನಿಂತಿದ್ದ ಲಾರಿಗೆ ಆಟೋ ಡಿಕ್ಕಿ: ಚಾಲಕ ಸಾವು, ಇಬ್ಬರಿಗೆ ಗಾಯ
ತುಮಕೂರು: ನಿಂತಿದ್ದ ಲಾರಿಗೆ ಆಟೋ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿದ್ದು, ಇಬ್ಬರಿಗೆ ಗಾಯಗಳಾಗಿರುವಂತಹ ಘಟನೆ ತುಮಕೂರಿನ ಕ್ಯಾತ್ಸಂದ್ರ ಜಾಸ್ ಟೋಲ್ ಬಳಿ ನಡೆದಿದೆ. ಆಟೋದಲ್ಲಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮಾಲಿಕನನ್ನು ಕಟ್ಟಿಯಾಕಿ ನಗ ನಾಣ್ಯ ಲೂಟಿ!
ಚಿಕ್ಕಬಳ್ಳಾಪುರ: ತೋಟದಲ್ಲಿದ್ದ ಒಂಟಿ ಮನೆಯ ಮೇಲೆ ಕಣ್ಣು ಹಾಕಿದ ನಾಲ್ಕು ಜನರ ಡಕಾಯಿತರ ಗುಂಪೊಂದು, ಮನೆಯಲ್ಲಿದ್ದ ಮನೆಯ ಮಾಲಿಕನನ್ನು ಕಟ್ಟಿಯಾಕಿ, ಆತನ ಪತ್ನಿ ಮಗಳಿಗೆ ಬೆದರಿಸಿ ಮನೆಯಲ್ಲಿದ್ದ 60ಗ್ರಾಂ ಬಂಗಾರದ ಒಡವೆ, 60 ಸಾವಿರ ರೂಪಾಯಿ ನಗದು ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೊಂಗತಿಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.
ಇದನ್ನೂ ಓದಿ: ತುಮಕೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು
ರೈತ ಕೊಂಗತಿಮ್ಮನಹಳ್ಳಿ ಗ್ರಾಮದ ನಾರಾಯಣಸ್ವಾಮಿ, ತಮ್ಮ ತೋಟದ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ತಡ ರಾತ್ರಿ ಡಕಾಯಿತರ ಗುಂಪು ಮನೆಯ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ಮಾಡಿ ಮನೆಯ ಯಜಮಾನ ನಾರಾಯಣಸ್ವಾಮಿ ಎಂಬುವವರನ್ನು ಕಟ್ಟಿ ಹಾಕಿ, ಹಲ್ಲೆ ಮಾಡಿ, ನಾರಾಯಣಸ್ವಾಮಿಯವರ ಹೆಂಡತಿ ಚೆನ್ನಮ್ಮ ಮತ್ತು ಮಗಳಾದ ಅನಿತಾ ರವರನ್ನು ಬೇದರಿಸಿ ಮನೆಯಲ್ಲಿದ್ದ 60 ಗ್ರಾಂ ಬಂಗಾರದ ವಡವೆ ಹಾಗೂ 60 ಸಾವಿರ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:01 am, Mon, 27 November 23