ಕಾಮಾಕ್ಷಿಪಾಳ್ಯ: ಇಬ್ಬರು ಬ್ಯಾಚುಲರ್ಸ್ ವಾಸವಿದ್ದ ಮನೆಯಲ್ಲಿ ಮಹಿಳೆ ಅನುಮಾನಾಸ್ಪದ ಸಾವು
ನಗರದ ಕಾಮಾಕ್ಷಿಪಾಳ್ಯದ ಬಳಿ ರಂಗನಾಥಪುರದಲ್ಲಿರುವ ಮನೆಯೊಂದರಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು 33 ವರ್ಷದ ಅರುಣಾಕುಮಾರಿ ಎಂದು ಗುರುತಿಸಲಾಗಿದೆ.
ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯದ ಬಳಿ ರಂಗನಾಥಪುರದಲ್ಲಿರುವ ಮನೆಯೊಂದರಲ್ಲಿ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು 33 ವರ್ಷದ ಅರುಣಾಕುಮಾರಿ ಎಂದು ಗುರುತಿಸಲಾಗಿದೆ.
ಇಬ್ಬರು ಬ್ಯಾಚುಲರ್ಸ್ ವಾಸವಿದ್ದ ಮನೆಯಲ್ಲಿ ಅರುಣಾಕುಮಾರಿ ನಿಗೂಢವಾಗಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಅರುಣಾಕುಮಾರಿ ನಿನ್ನೆ ತಮ್ಮ ದಾಸರಹಳ್ಳಿಯ ನಿವಾಸದಿಂದ ಕೆಲಸಕ್ಕೆಂದು ಪ್ರಿಂಟಿಂಗ್ ಪ್ರೆಸ್ಗೆ ತೆರಳಿದ್ದರು. ಆದರೆ ಆಕೆ, ಸಂಜೆಯಾದ್ರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅರುಣಾಕುಮಾರಿ ಕುಟುಂಬಸ್ಥರು ಮಾಗಡಿ ರಸ್ತೆ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಖಾಕಿ ಪಡೆ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಮಹಿಳೆ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಸದ್ಯ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೋರಿಂಗ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಕುಟುಂಬದವರು ತಿರುಪತಿಗೆ ಹೋಗಿದ್ದಾಗ ಸೆಕ್ಯುರಿಟಿಯಿಂದಲೇ ಮನೆಗಳ್ಳತನ.. Liveನಲ್ಲಿ ಕೃತ್ಯ ನೋಡಿದ ಮನೆ ಮಾಲೀಕ!
Published On - 4:44 pm, Tue, 5 January 21