AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೌಕಿಯಲ್ಲಿದ್ದ ಪೊಲೀಸ್​​ ಸಿಬ್ಬಂದಿಯ ಬ್ಯಾಗ್​ ಕಳ್ಳತನ; ದಂಗಾದ ಮಹಿಳಾ ಅಧಿಕಾರಿ

ಬೆಂಗಳೂರು ನಗರದಲ್ಲಿ ಕಳ್ಳರು ತಮ್ಮ ಕೈ ಚಳವನ್ನು ಪೊಲೀಸರಿಗೆ ತೋರಿಸಿದ್ದಾರೆ. ನಗರದ ಅಭಿನಯ ಜಂಕ್ಷನ್​​ನಲ್ಲಿರುವ ಪೊಲೀಸ್​ ಚೌಕಿಯಲ್ಲಿ ಮಹಿಳಾ ಸಿಬ್ಬಂದಿ ತಮ್ಮ ಬ್ಯಾಗ್​ ಇಟ್ಟಿದ್ದರು. ಬಳಿಕ ಸಂಚಾರ ದಟ್ಟಣೆ ನಿಯಂತ್ರಿಸಲು ತಮ್ಮ ಬಾಡಿ ಕ್ಯಾಮೆರಾವನ್ನು ಬ್ಯಾಗ್​ನಲ್ಲಿಟ್ಟು ಸಿಬ್ಬಂದಿ ಹೊರಗೆ ಹೋದರು. ಮುಂದೇನಾಯ್ತು ಈ ಸ್ಟೋರಿ ಓದಿ....

ಚೌಕಿಯಲ್ಲಿದ್ದ ಪೊಲೀಸ್​​ ಸಿಬ್ಬಂದಿಯ ಬ್ಯಾಗ್​ ಕಳ್ಳತನ; ದಂಗಾದ ಮಹಿಳಾ ಅಧಿಕಾರಿ
ಸಾಂದರ್ಭಿಕ ಚಿತ್ರ
TV9 Web
| Edited By: ವಿವೇಕ ಬಿರಾದಾರ|

Updated on:Dec 04, 2023 | 9:03 AM

Share

ಬೆಂಗಳೂರು ಡಿ.04: ಈ ಪ್ರಕರಣದಲ್ಲಿ ಚಾಲಾಕಿ ಖದೀಮರು ತಮ್ಮ ಕೈ ಚಳಕವನ್ನು ಪೊಲೀಸರಿಗೆ (Police) ತೋರಿಸಿದ್ದಾರೆ. ನಗರದ ಅಭಿನಯ ಜಂಕ್ಷನ್​​ನಲ್ಲಿರುವ​ ಪೊಲೀಸ್ ಚೌಕಿಯೊಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್​ ಅನ್ನು ಕಳ್ಳರು (Thieves) ಕದ್ದು ಪರಾರಿಯಾಗಿದ್ದಾರೆ. ನವೆಂಬರ್​ 22 ರಂದು ಕೆಆರ್ ಮಾರ್ಕೆಟ್ (KR Market) ಸಂಚಾರಿ ಪೊಲೀಸ್​ ಠಾಣೆಯ ಮಹಿಳಾ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರು ಪೊಲೀಸ್ ಚೌಕಿಯೊಳಗೆ ಬಂದು ಬ್ಯಾಗ್​ನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕೊಟ್ಟಿದ್ದ ಬಾಡಿ ವೊರ್ನ್ ಕ್ಯಾಮೆರಾವನ್ನು ಇಟ್ಟಿದ್ದರು.

ಬಳಿಕ ಸಂಚಾರ ದಟ್ಟಣೆ ನಿಯಂತ್ರಿಸಲು ಚೌಕಿಯಿಂದ ಹೊರಗೆ ಹೋಗಿದ್ದಾರೆ. ಇದನ್ನು ಗಮನಿಸಿದ ಖದೀಮರು ಮಹಿಳಾ ಪೊಲೀಸ್​ ಸಿಬ್ಬಂದಿಯ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ. ಘಟನೆ ಬಗ್ಗೆ ಮಹಿಳಾ ಪೊಲೀಸ್​ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೆ ತಿಂಗಳಿನಲ್ಲಿ ಏಳು ಶಾಲೆಗಳಲ್ಲಿ ಕಳ್ಳತನ

ಹಾವೇರಿ: ಒಂದೇ ತಿಂಗಳಲ್ಲಿ ರಾಣೆಬೆನ್ನೂರ ತಾಲೂಕಿನ ಗ್ರಾಮೀಣ ಭಾಗದ ಏಳು ಶಾಲೆಗಳಲ್ಲಿ ಕಳ್ಳತನವಾಗಿದೆ. ಏಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅಡುಗೆ ಕೋಣೆಗಳಲ್ಲಿನ ಸಾಮಾಗ್ರಿಗಳನ್ನು ಕಳ್ಳರು ಕದ್ದಿದ್ದಾರೆ. ನವೆಂಬರ್ ತಿಂಗಳಿನಲ್ಲಿ ರಾಣೆಬೆನ್ನೂರ ತಾಲುಕಿನ ಹರನಗಿರಿ, ಮೈದೂರ, ಮಾಕನೂರ ಪ್ರೌಢಶಾಲೆ, ಕೋಟಿಹಾಳ, ಗಂಗಾಪುರ ಪ್ರಾಥಮಿಕ ಶಾಲೆಗಳಲ್ಲಿನ ಅಕ್ಕಿ, ಬೇಳೆ, ಎಣ್ಣೆ, ಹಾಲಿನ ಪೌಡರ್ ಚೀಲಗಳು ಕಳ್ಳತನವಾಗಿವೆ. ರಾಣೆಬೆನ್ನೂರ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಗದಗ ಜಿಲ್ಲೆಯ ಹೊಳಲಮ್ಮ ದೇವಿಯ ಚಿನ್ನದ ಸರ, ಬೆಳ್ಳಿ ಕಿರೀಟ ಕದ್ದು ಕಳ್ಳರು ಪರಾರಿ

ಮುಖಕ್ಕೆ ಬೂದಿ ಎರಚಿ‌ ಚಿನ್ನ & ನಗದು ಕಳ್ಳತನ

ಕೊಡಗು: ಕುಶಾಲನಗರ ತಾಲ್ಲೂಕಿನ ಗುಡ್ಡಹೊಸೂರು ಗ್ರಾಮದ ಪಿಎಂ ಇಸ್ಮಾಯಿಲ್ ಎಂಬುವರ ಮನೆಯಲ್ಲಿದ್ದ 45 ಗ್ರಾಂ ಚಿನ್ನವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ರವಿವಾರ ಮಧ್ಯರಾತ್ರಿ 2 ಗಂಟೆಗೆ ಮುಸುಕುಧಾರಿಗಳು ಪಿಎಂ ಇಸ್ಮಾಯಿಲ್ ಅವರ ಮನೆ ಬಾಗಿಲು ತಟ್ಟಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಕಳ್ಳರು ಮುಖಕ್ಕೆ ಬೂದಿ ಎರಚಿದ್ದಾರೆ. ಬೂದಿ ಎರಚುತ್ತಿದ್ದಂತೆ ಮನೆಯವರು ಪ್ರಜ್ಞೆ ತಪ್ಪಿದ್ದಾರೆ.

ನಂತರ ಮನೆಯೊಳಗೆ ಹೋಗಿ 45 ಗ್ರಾಂ ಚಿನ್ನ ಮತ್ತು ಐದು ಸಾವಿರ ರೂ. ನಗದು ದೊಚಿ ಪರಾರಿಯಾಗಿದ್ದಾರೆ. ಇದಕ್ಕೂ ಮೊದಲು ಮತ್ತೊಂದು ಮನೆಯಲ್ಲಿ ಕಳ್ಳತನಾ ಮಾಡಲು ಯತ್ನಿಸಿದ್ದರು. ಆದರೆ ಅದು ವಿಫಲವಾಗಿದೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:58 am, Mon, 4 December 23

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!